Dental Care : ನಿಮ್ಮ ಹಲ್ಲುಗಳ ಮೇಲೆ ಬಿಳಿ ಕಲೆಗಳು ಕಾಣಿಸುತ್ತಿದೆಯಾ? ಅದಕ್ಕಿದೆ ಇಲ್ಲಿ ಪರಿಹಾರ!

ಬಾಯಿಯ ಸ್ವಚ್ಛತೆಯ ಕಡೆಗೆ ಗಮನ ಹರಿಸುವುದು ಪ್ರತಿಯೊಬ್ಬರ ಜೀವನದಲ್ಲೂ ಅಗತ್ಯ (Dental Care). ಸ್ವಚ್ಛತೆಯ ಕೊರತೆಯಿಂದ ವಸಡಿನ ಅನೇಕ ಕಾಯಿಲೆಗಳು ಬರಬಹುದು ಮತ್ತು ಹಲ್ಲುಗಳ ಮೇಲೆ ಬಿಳಿಯ ಕಲೆಗಳೂ ಕಾಣಿಸಬಹುದು. ಈ ಬಿಳಿಯ ಕಲೆಗಳು ಅಷ್ಟೇನೂ ಗಂಭೀರ ಸಮಸ್ಯೆ ಅಲ್ಲ, ಆದರೆ ಅವುಗಳು ನಿಮ್ಮ ಹಲ್ಲುಗಳು ಹುಳುಕಾಗುತ್ತಿರುವ ಲಕ್ಷಣಗಳು. ಬಾಯಿಯ ಆರೋಗ್ಯದ ಕೊರತೆಯು ವ್ಯಕ್ತಿಯ ವ್ಯಕ್ತಿತ್ವವನ್ನು ಹಾಳುಮಾಡಬಲ್ಲದು.

ಬಿಳಿ ಕಲೆಗಳಾಗಲು ಕಾರಣಗಳು :

ಡೆಂಟಲ್‌ ಫ್ಲೋರೋಸಿಸ್‌ :
ಬಾಲ್ಯದಲ್ಲಿ ಫ್ಲೋರೈಡ್‌ ಪ್ರಮಾಣವನ್ನು ಅತಿ ಹೆಚ್ಚಿ ಸೇವಿಸಿದ್ದರೆ ಈ ಸ್ಥಿತಿ ಉಂಟಾಗುವುದು. ಸಾಮಾನ್ಯವಾಗಿ ಇದರಿಂದ ಅಷ್ಟೇನೂ ಕೆಡಕಾಗುವುದಿಲ್ಲ.

ಎನಾಮಲ್‌ ಹೈಪೋಪ್ಲಾಸಿಯಾ :
ಹಲ್ಲುಗಳ ದಂತ ಕವಚವು ಸರಿಯಾಗಿ ರೂಪುಗೊಳ್ಳದಿದ್ದಾಗ ಈ ಸ್ಥಿತಿ ಹೆಚ್ಚಾಗಿ ಉಂಟಾಗಬಹುದು. ಡೆಂಟಲ್‌ ಫ್ಲೋರೋಸಿಸ್‌ನಂತೆ ಬಾಲ್ಯದಲ್ಲಿಯೂ ಈ ಸಮಸ್ಯೆ ಉಂಟಾಗುತ್ತದೆ. ಒಂದು ವ್ಯತ್ಯಾಸವೆಂದರೆ, ಇದು ಡೆಂಟಲ್‌ ಫ್ಲೋರೋಸಿಸ್‌ ಗಿಂತ ಭಿನ್ನವಾಗಿದೆ. ದಂತಕವಚದ ಹೈಪೋಪ್ಲಾಸಿಯವು ಹಲ್ಲಿನ ಉದುರುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.

ಬಾಯಿಯ ಸ್ವಚ್ಛತೆಯ ಕೊರತೆ :
ಇದು ಹಲ್ಲಿನ ಕುಳಿಗಳು (ಡೆಂಟಲ್‌ ಕೆವಿಟೀಸ್‌) ಮತ್ತು ವಸಡಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಎಸಿಡಿಕ್‌ ಮತ್ತು ಸಕ್ಕರೆಯ ಅಂಶ ಅಧಿಕವಿರುವ ಆಹಾರಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಕೂಡಾ ಹಲ್ಲುಗಳ ಆರೋಗ್ಯ ಕೆಡುವಂತೆ ಮಾಡುತ್ತದೆ.

ಹಲ್ಲಿನ ಮೇಲಿನ ಬಿಳಿ ಕಲೆಗಳಿಗೆ ಮನೆ ಔಷಧಿ:

  • ಪ್ರತಿದಿನ ಎರಡು ಬಾರಿ ಸರಿಯಾಗಿ ಬ್ರೆಶ್‌ ಮಾಡುವುದು.
  • ಸಕ್ಕರೆಯನ್ನು ಕಡಿಮೆ ಪ್ರಮಣದಲ್ಲಿ ಸೇವಿಸಿ.
  • ಹಣ್ಣು ಮತ್ತು ತರಕಾರಿಗಳನ್ನು ಯತೇಚ್ಛವಾಗಿ ತಿನ್ನಿ.
  • ತಂಬಾಕು ಉತ್ಪನ್ನಗಳನ್ನು ಕಟ್ಟುನಿಟ್ಟಾಗಿ ಸೇವಿಸಬೇಡಿ.
  • ದಿನಕ್ಕೆ ಕನಿಷ್ಟ ಒಂದು ಸಲವಾದರೂ ಡೆಂಟಲ್‌ ಫ್ಲೋಸ್‌ಗಳನ್ನು ಉಪಯೋಗಿಸಿ ಹಲ್ಲುಗಳನ್ನು ಫ್ಲೋಸ್‌ ಮಾಡಿ.
  • ನಿಯಮಿತವಾಗಿ ದಂತ ವೈದ್ಯರನ್ನು ಭೇಟಿಯಾಗಿ. ಅವರು ಹೇಳುವ ಸಲಹೆಗಳನ್ನು ತಪ್ಪದೇ ಅನುಸರಿಸಿ. ಅಗತ್ಯವಿದ್ದರೆ ಕೆಲವು ಚಿಕೆತ್ಸೆಗಳನ್ನು ಖಂಡಿತ ತೆಗೆದುಕೊಳ್ಳಿ.

ಇದನ್ನೂ ಓದಿ : Summer Hairstyle: ಬೇಸಿಗೆಗೆ ಯಾವ ರೀತಿಯ ಹೇರ್‌ ಸ್ಟೈಲ್‌ ಇದ್ದರೆ ಬೆಸ್ಟ್‌ ಅಂತೀರಾ?

ಇದನ್ನೂ ಓದಿ : Mental Health Tips : ನಿಮ್ಮ ಮನಸ್ಸು ಶುದ್ಧಿಕರಿಸಲು ಈ 5 ಸರಳ ದಾರಿಗಳನ್ನು ಅಳವಡಿಸಿಕೊಳ್ಳಿ!!

(Dental Care How are white spots on teeth caused and what are the remedies)

Comments are closed.