Rose Apple : ಜಂಬು ನೇರಳೆಯ ಆರೋಗ್ಯ ಪ್ರಯೋಜನಗಳು ನಿಮಗೆ ಗೊತ್ತಾ…

ಬೇಸಿಗೆ (Summer) ಪ್ರಾರಂಭವಾಗಿದೆ. ಈ ಋತುವಿನಲ್ಲಿ ಅನೇಕ ಹಣ್ಣುಗಳು (Fruits) ದೊರೆಯುತ್ತವೆ. ಮಾರುಕಟ್ಟೆಯಲ್ಲಿ ವಿಧವಿಧದ ಹಣ್ಣುಗಳು ಮಾರಾಟವಾಗುತ್ತವೆ. ಬೇಸಿಗೆಯ ಹಣ್ಣುಗಳಲ್ಲಿ ಜಂಬು ನೇರಳೆಯು (Rose Apple) ಒಂದು. ಇದನ್ನು ರೋಸ್‌ ಆಪಲ್‌, ಜಾವಾ ಸೇಬು, ವ್ಯಾಕ್ಸ್‌ ಜಂಬೂ, ವ್ಯಾಕ್ಸ್‌ ಆಪಲ್‌ ಎಂದೆಲ್ಲಾ ಕರೆಯುತ್ತಾರೆ. ಇದರ ರುಚಿ ಮತ್ತು ಪರಿಮಳವು ಗುಲಾಬಿಯಂತೆ ಇರುವುದರಿಂದ ಇದನ್ನು ರೋಸ್‌ ಆಪಲ್‌ ಎಂದು ಕರೆಯಿಸಿಕೊಳ್ಳುತ್ತದೆ. ಇದು ಬಿಳಿ ಮತ್ತು ಗುಲಾಬಿ ಬಣ್ಣಗಳಲ್ಲಿ ಕಂಡು ಬರುತ್ತದೆ. ಇದು ತಿನ್ನಲು ರುಚಿಯಾಗಿರುವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಜಂಬು ನೇರಳೆಯಲ್ಲಿರುವ ಪೋಷಕಾಂಶಗಳು:
ಜಂಬು ನೇರಳೆಯಲ್ಲಿ ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಹೆಚ್ಚನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ ಮತ್ತು ಬೀಟಾ–ಕ್ಯಾರೋಟಿನ್‌ ಅನ್ನು ಹೊಂದಿದೆ. ನೀರಿನ ಅಂಶ ಹೆಚ್ಚಾಗಿರುವುದರಿಂದ ಇದು ಬೇಸಿಗೆಗೆ ಉತ್ತಮವಾಗಿದೆ.

  • ತ್ವಚೆಗೆ ಪ್ರಯೋಜನಕಾರಿ:
    ಇಂಟರ್ನ್ಯಾಷನಲ್ ಆರ್ಕೈವ್ ಆಫ್ ಅಪ್ಲೈಡ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಪ್ರಕಟವಾದ ಜರ್ನಲ್ ಪ್ರಕಾರ, ಈ ಸಸ್ಯದ ಸಾರವು ಚರ್ಮವನ್ನು ಬಿಳಿಮಾಡುವ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಆಂಟಿ ಒಕ್ಸಿಡೆಂಟ್‌ನಿಂದ ಸಮೃದ್ಧವಾಗಿದೆ. ಇದು ತ್ವಚೆ ಒಣಗದಂತೆ ರಕ್ಷಿಸುತ್ತದೆ.
  • ಸ್ವತಂತ್ರ ರ್‍ಯಾಡಿಕಲ್‌ಗಳಿಂದ ರಕ್ಷಿಸುತ್ತದೆ:
    ಜಂಬು ನೇರಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಸ್ವತಂತ್ರ ರಾಡಿಕಲ್ಗಳಿಂದ ದೇಹವನ್ನು ರಕ್ಷಿಸುತ್ತದೆ. ಇದು ಕ್ಯಾನ್ಸರ್ ಮತ್ತು ಹೃದ್ರೋಗದಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ವಿಟಮಿನ್ ಸಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಆಕ್ಸಿಡೇಟಿವ್ ಹಾನಿಯನ್ನು ಕಡಿಮೆ ಮಾಡುತ್ತದೆ.
  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:
    ಜಂಬು ನೇರಳೆಯಲ್ಲಿ ವಿಟಮಿನ್ ಸಿ ಇರುವುದರಿಂದ ಅದು ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯನಿರ್ವಹಿಸುತ್ತದೆ. ವಿಟಮಿನ್ ಸಿ ಸೂಕ್ಷ್ಮಜೀವಿಯ ಸೋಂಕಿನಿಂದ ರಕ್ಷಿಸುತ್ತದೆ. ಇದರಲ್ಲಿರುವ ವಿಟಮಿನ್ ಎ ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಕಿಡ್ನಿ ಮತ್ತು ಲಿವರ್‌ ಕಾಪಾಡುತ್ತದೆ:
    ಮೂತ್ರವರ್ಧಕ ಗುಣಲಕ್ಷಣಗಳು ಜಂಬು ನೇರಳೆಯಲ್ಲಿ ಕಂಡುಬರುತ್ತದೆ. ಇದು ಕಿಡ್ನಿ ಮತ್ತು ಲಿವರ್‌ ಅನ್ನು ನಿರ್ವಿಷಗೊಳಿಸುತ್ತದೆ. ಇದರಿಂದಾಗಿ ಕಿಡ್ನಿ ಮತ್ತು ಲಿವರ್‌ ಸಂಬಂಧಿತ ಕಾಯಿಲೆಗಳ ಅಪಾಯ ಕಡಿಮೆ. ಜಂಬು ನೇರಳೆಯಲ್ಲಿರುವ ವಿಟಮಿನ್ ಎ ಕಣ್ಣುಗಳ ಆರೋಗ್ಯಕ್ಕೂ ಉತ್ತಮವಾಗಿದೆ.
  • ಜೀರ್ಣಕ್ರಿಯೆ ಸುಧಾರಿಸುತ್ತದೆ:
    ಜಂಬು ನೆರಳೆ ಫೈಬರ್ ಇದೆ. ಅದು ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರಮಾಡುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ದೂರವಿಡುತ್ತದೆ. ಜಂಬು ನೇರಳಯಲ್ಲಿರುವ ಫೈಬರ್ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Corn Salad Benefits : ಡಯಟ್‌ ಮಾಡ್ಲಿಕ್ಕೆ ಫ್ರುಟ್‌ ಸಲಾಡ್‌ ಒಂದೇ ಅಲ್ಲ; ಈ ಸಲಾಡ್‌ ಕೂಡಾ ಉತ್ತಮ

ಇದನ್ನೂ ಓದಿ: Best Cooking Oil: ಅಡುಗೆಗೆ ಯಾವ ಎಣ್ಣೆ ಸೂಕ್ತ: ಇಲ್ಲಿದೆ ಸಂಪೂರ್ಣ ಮಾಹಿತಿ

(Do you know the amazing health benefits of Rose Apple)

Comments are closed.