Face Toner:ಮುಖದ ಕಾಂತಿ ಹೆಚ್ಚಿಸುವ ಟೋನರ್‌ ಮನೆಯಲ್ಲಿಯೇ ತಯಾರಿಸಿಕೊಳ್ಳಿ

(Face Toner)ಟೋನರ್‌ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮವನ್ನು ಹೈಡ್ರೇಟ್‌ ಮಾಡುವುದರ ಜೊತೆಗೆ ಸತ್ತ ಜೀವಕೊಶಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡುತ್ತದೆ. ಇಂತಹ ಸ್ಕಿನ್‌ ಟೋನರ್‌ ಅನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಟೋನರ್‌ ಹೇಗೆ ತಯಾರಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Face Toner)ಬೇಕಾಗುವ ಸಾಮಾಗ್ರಿಗಳು:

  • ಗುಲಾಬಿ ಎಸಳು
  • ಕಿತ್ತಲೆ ಸೊಪ್ಪು
  • ವಿಟಮಿನ್‌ ಇ ಕ್ಯಾಪ್ಸೂಲ್‌
  • ಆಲವೇರಾ ಜೆಲ್‌

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರನ್ನು ಕಾಯಯಿಸಿಕೊಂಡು ಅದಕ್ಕೆ ಗುಲಾಬಿ ಎಸಳು, ಕಿತ್ತಲೆ ಸಿಪ್ಪೆ ಹಾಕಿ ನೀರು ಖುದಿಯುವರೆಗೆ ಬಿಡಬೇಕು. ನಂತರ ಒಂದು ಬೌಲ್‌ ಗೆ ನೀರನ್ನು ಸೊಸಿಕೊಳ್ಳಬೇಕು ಅದಕ್ಕೆ ವಿಟಮಿನ್‌ ಇ ಕ್ಯಾಪ್ಸೂಲ್‌, ಆಲವೇರಾ ಜೆಲ್‌ ಹಾಕಿ ಮಿಕ್ಸ್‌ ಮಾಡಿದರೆ ಟೋನರ್‌ ರೆಡಿ. ಇದನ್ನು ಒಂದು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡು ಮುಖಕ್ಕೆ ಹಚ್ಚುವುದಿಂದ ಮುಖವನ್ನು ಸ್ವಚ್ಚಗೊಳಿಸಿ ಕಾಂತಿಯನ್ನು ಹೆಚ್ಚಿಸುತ್ತದೆ.

ಬೇಕಾಗುವ ಸಾಮಾಗ್ರಿಗಳು:

  • ಗುಲಾಬಿ ಎಸಳು
  • ನಿಂಬೆ ಹಣ್ಣು
  • ವಿಟಮಿನ್‌ ಇ ಕ್ಯಾಪ್ಸೂಲ್‌
  • ಆಲವೇರಾ ಜೆಲ್‌

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಗುಲಾಬಿ ಎಸಳು, ತುಂಡರಿಸಿದ ನಿಂಬೆಹಣ್ಣು ಹಾಕಿ ಕಾಯಿಸಿಕೊಳ್ಳಬೇಕು. ನಂತರ ಆ ನೀರನ್ನು ಒಂದು ಬೌಲ್‌ ಗೆ ಸೊಸಿಕೊಂಡು ಅದಕ್ಕೆ ವಿಟಮಿನ್‌ ಇ ಕ್ಯಾಪ್ಸೂಲ್‌, ಆಲವೇರಾ ಜೆಲ್‌ ಹಾಕಿ ಮಿಶ್ರಣ ಮಾಡಿಕೊಂಡರೆ ನಿಮ್ಮ ಮುಖದ ಕಾಂತಿ ಹೆಚ್ಚಿಸುವ ಟೋನರ್‌ ರೆಡಿ.

ಇದನ್ನೂ ಓದಿ:Winter Season Lip Balm : ಚಳಿಗಾಲದಲ್ಲಿ ನಿಮ್ಮ ತುಟಿ ರಕ್ಷಣೆಗೆ ಈ ಲಿಪ್‌ ಬಾಮ್‌ ಟ್ರೈ ಮಾಡಿ

ಇದನ್ನೂ ಓದಿ:Dry Dates Benefits : ಒರಟಾಗಿದ್ದರೂ ಹಲವಾರು ಪ್ರಯೋಜನಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ ‘ಉತ್ತುತ್ತಿ

ಇದನ್ನೂ ಓದಿ:Drink More Water In Winter :ಹೆಚ್ಚು ನೀರು ಕುಡಿಯಿರಿ ಚಳಿಗಾಲದಲ್ಲಿ ನಿಮ್ಮ ತ್ವಚೆ ಕಾಪಾಡಿಕೊಳ್ಳಿ

ಟೋನರ್‌ ಬಳಕೆ ಮಾಡುವುದರಿಂದ ಚರ್ಮ ಎಣ್ಣೆಯುಕ್ತವಾಗದಂತೆ ನೋಡಿಕೊಳ್ಳುತ್ತದೆ ಮತ್ತು ಮುಖದ ಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ. ಮುಖ ತೊಳೆದ ನಂತರ ಟೋನರ್‌ ಅನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಟೋನರ್‌ ರಂಧ್ರವನ್ನು ಮುಚ್ಚುವುದಲ್ಲದೇ,ಚರ್ಮವು ಬಿಗಿಯಾಗಿರುವಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಮುಖದಲ್ಲಿರುವ ಕೊಳೆಯನ್ನು ತೆಗೆಯಲು ಸಹಕಾರಿಯಾಗಿದೆ. ಎಣ್ಣೆಯುಕ್ತ ಚರ್ಮವನ್ನು ಹೊಂದಿರುವವರು ಆಲ್ಕೋಹಾಲ್‌ ಮುಕ್ತವಾದ ಸ್ಕಿನ್‌ ಟೋನರ್‌ ಅನ್ನು ಮುಖಕ್ಕೆ ಹಚ್ಚಿದರೆ ಉತ್ತಮ. ಒಣ ಚರ್ಮವನ್ನು ಹೊಂದಿರುವವರು ಮಾಯಿಶ್ಚರೈಸರ್‌ ಹೊಂದಿದೆಯೆ ಎಂದು ನೊಡಿಕೊಂಡು ಟೋನರ್‌ ಖರೀದಿಸಿದರೆ ನಿಮ್ಮ ಮುಖ ತೆವವಾಗಿರುವಂತೆ ಮಾಡುತ್ತದೆ.ಸಾಧಾರಣ ಚರ್ಮವನ್ನು ಹೊಂದಿರುವವರು ಯಾವುದೇ ಟೋನರ್‌ ಅನ್ನು ಬಳಕೆ ಮಾಡಬಹುದು. ಅಕಸ್ಮಾತ್‌ ಅಲರ್ಜಿ ಸಮಸ್ಯೆ ಇರುವವರು ನಿಮ್ಮ ತ್ವಚೆಗೆ ಹೊಂದುವಂತಹ ಟೋನರ್‌ ಬಳಕೆ ಮಾಡಿ.

ಇದನ್ನೂ ಓದಿ:Facial Beauty Tips :ಮುಖದ ಅಂದ ಹೆಚ್ಚಿಸಲು ಈ ನಾಲ್ಕು ಬ್ಯೂಟಿ ಟಿಪ್ಸ್‌ ಅನುಸರಿಸಿ

Skin Toner how to prepare face brightening toner at home

Comments are closed.