Breakfast Recipes : ಹತ್ತು ನಿಮಿಷದಲ್ಲಿ ತಯಾರಿಸಬಹುದಾದ ಬೆಳಗ್ಗಿನ ರುಚಿಕರವಾದ ತಿಂಡಿಗಳು

ಬೆಳಗ್ಗಿನ ಉಪಹಾರ (Breakfast) ನಮ್ಮ ದಿನವಿಡೀ ಕೆಲಸಗಳಿಗೆ ಶಕ್ತಿಯನ್ನು ತುಂಬುವಂತಿರಬೇಕು. ರುಚಿಯಾಗಿರುವ ಮತ್ತು ಹೆಲ್ದಿಯಾಗಿರುವ ಉಪಹಾರಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಪ್ರತಿದಿನ ಒಂದೇ ರೀತಿಯದನ್ನು ತಿಂದರೆ ಬಾಯಿ ರುಚಿ ಕೆಡುತ್ತದೆ. ಆದರೆ ಬೆಳಿಗ್ಗೆ ಉಪಹಾರಗಳನ್ನು ತಯಾರಿಸಲು ಬಹಳ ಸಮಯವಿರುವುದಿಲ್ಲ. ಮಕ್ಕಳಿಂದ ಹಿಡಿದು ಎಲ್ಲರಿಗೂ ಗಡಿಬಿಡಿ. ಅದಕ್ಕಾಗಿ ನಾವು ಇಲ್ಲಿ ಕಡಿಮೆ ಸಮಯದಲ್ಲಿ ರುಚಿಯಾಗಿ ತಯಾರಿಸಬಹುದಾದ ರೆಸಿಪಿಗಳನ್ನು (Breakfast Recipes 10 minute) ಹೇಳಿದ್ದೇವೆ. ಇವುಗಳನ್ನು ಸುಲಭವಾಗಿ ಮತ್ತು ಬೇಗನೆ ತಯಾರಿಸಬಹುದು.

ಅವಲಕ್ಕಿ: ಅವಲಕ್ಕಿ ತಿನ್ನಲು ಹಗುರವಾಗಿದ್ದು, ತೂಕ ನಿರ್ವಹಣೆಗೂ ಸಹಕಾರಿಯಾಗಿದೆ. ಇದನ್ನು ಮಾಡಲು ಈರುಳ್ಳಿ, ಟೊಮೆಟೊ ಮತ್ತು ಕೊತ್ತೊಂಬರಿ ಸೊಪ್ಪು ಇದ್ದರೆ ಸಾಕು. ಅವಲಕ್ಕಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ, ನೀರಿನಿಂದ ಒಮ್ಮೆ ತೊಳೆಯಿರಿ. ಒಗ್ಗರಣೆಯ ಜೊತೆ ತರಕಾರಿಗಳನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿಯಿರಿ. ಈಗ ಅದಕ್ಕೆ ಅವಲಕ್ಕಿ ಸೇರಿಸಿ. ನಿಮ್ಮ ರುಚಿಗೆ ತಕ್ಕಂತೆ ಉಪ್ಪು ಮತ್ತು ಸ್ವಲ್ಪ ಕೊತ್ತೊಂಬರಿಸೊಪ್ಪು ಸೇರಿಸಿ.

ರವಾ ತಾಲಿಪಟ್ಟು: ಇದೊಂದು ಆರೋಗ್ಯಕರ ಬೆಳಗಿನ ಉಪಹಾರವಾಗಿದೆ . ಇದನ್ನು ಮಾಡಲು ಚಿರೋಟಿ ರವಾ, ಈರುಳ್ಳಿ, ತುರಿದ ಸವತೆಕಾಯಿ, ಟೊಮೆಟೊ, ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತೊಂಬರಿಸೊಪ್ಪು ಇದ್ದರೆ ಸಾಕು. ಇವೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಸೇರಿಸಿ. ಅದಕ್ಕೆ ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ. ರೊಟ್ಟಿಯ ತರಹ ತಟ್ಟಿ ಎರಡೂ ಕಡೆ ಚೆನ್ನಾಗಿ ಬೇಯಿಸಿ, ಇಲ್ಲವೇ ಉತ್ತಪ್ಪ ರೀತಿಯಲ್ಲಿ ದೋಸೆ ಪ್ಯಾನ್‌ಗೆ ಹಾಕಿ ತಯಾರಿಸಿ. ಇದು ಅತ್ಯಂತ ರುಚಿಯಾಗಿದ್ದು, ಹೆಲ್ದಿಯಾಗಿದೆ.

ಓಟ್ಸ್‌ ಇಡ್ಲಿ: ಓಟ್ಸ್ ಇಡ್ಲಿ ಮಾಡಲು, ಓಟ್ಸ್ ಅನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ನಂತರ ಅದಕ್ಕೆ ಸಣ್ಣಗೆ ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಮತ್ತು ಉಪ್ಪು ಮತ್ತು ಒಂದು ಚಿಕ್ಕ ಒಗ್ಗರಣೆ ಹಾಕಿ. ನಂತರ ಅದಕ್ಕೆ ನೀರು ಸೇರಿಸಿ ಇಡ್ಲಿ ಹಿಟ್ಟನ್ನು ತಯಾರಿಸಿ. ಅದಕ್ಕೆ 2 ಚಿಟಿಕೆ ಎನೋ ಸೇರಿಸಿ ಮತ್ತು ಇಡ್ಲಿ ಅಚ್ಚಿನಲ್ಲಿ ಬೇಯಿಸಿ. ರುಚಿಯಾದ ಓಟ್ಸ್‌ ಇಡ್ಲಿ ರೆಡಿ.

ಇದನ್ನೂ ಓದಿ : Egg Pulav: 15 ನಿಮಿಷದಲ್ಲಿ ತಯಾರಿಸಿ ರುಚಿ ರುಚಿಯಾದ ಮೊಟ್ಟೆ ಪಲಾವ್‌

ಇದನ್ನೂ ಓದಿ : Peas Paratha: ಚಳಿಗಾಲದ ಬೆಳಗ್ಗಿನ ತಿಂಡಿಗೆ ಮಾಡಿ ಬಿಸಿ ಬಿಸಿ ಬಟಾಣಿ ಪರಾಠ

(Breakfast Recipes try these 10 minute healthy recipes)

Comments are closed.