Fever Reduce Tips:ಜ್ವರ ತಟ್ಟನೆ ಉಪಶಮನವಾಗಲು ಇಲ್ಲಿದೆ ಪರಿಹಾರ

(Fever Reduce Tips)ವಾತಾವರಣ ಬದಲಾಗುತ್ತಾ ಇದ್ದ ಹಾಗೆ ಜ್ವರ, ಶೀತ ,ಕೆಮ್ಮು ಬಂದು ನಮ್ಮ ಆರೋಗ್ಯ ಎರುಪೇರಾಗುವುದು ಸಾಮಾನ್ಯ , ಶೀತ ಮತ್ತು ಕೆಮ್ಮಿಗೆ ಕೆಲವರು ಮನೆಯಲ್ಲಿಯೇ ಔಷಧೀಯನ್ನು ಮಾಡಿ ಸೇವನೆ ಮಾಡುತ್ತಾರೆ. ಜ್ವರ ಬಂದಾಗ ಪ್ರತಿಭಾರಿ ಮಾತ್ರೆಯನ್ನು ತಿನ್ನುವ ಬದಲು ಮನೆಯಲ್ಲಿಯೇ ಔಷಧೀಗಳನ್ನು ತಯಾರಿಸಿಕೊಂಡು ತಿನ್ನಬಹುದು . ಜ್ವರಕ್ಕೆ ಮನೆಯಲ್ಲಿ ಹೇಗೆ ಔಷಧೀಯನ್ನು ತಯಾರಿಸಿಕೊಳ್ಳುವುದು ಎಂಬ ಮಾಹಿತಿ ಕುರಿತು ತಿಳಿದುಕೊಳ್ಳೋಣ.

(Fever Reduce Tips)ಬೇಕಾಗುವ ಸಾಮಾಗ್ರಿಗಳು:
ತುಳಸಿ ಎಲೆ
ಒಣ ಶುಂಠಿ ಪುಡಿ
ಕೆಂಪು ಕಲ್ಲು ಸಕ್ಕರೆ

ಮಾಡುವ ವಿಧಾನ:
ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿಕೊಂಡು ಕುದಿಸಿಕೊಳ್ಳಬೇಕು. ಅದಕ್ಕೆ 10 ರಿಂದ 12 ತುಳಸಿ ಎಲೆ, ಒಣ ಶುಂಠಿ ಪುಡಿ ಹಾಕಿ ಕುದಿಸಬೇಕು ನಂತರ ಕಲ್ಲು ಸಕ್ಕರೆಯನ್ನು ಹಾಕಿಕೊಂಡು ಸಣ್ಣ ಉರಿಯಲ್ಲಿ ಕಾಯಿಸಬೇಕು. ಅನಂತರ ಕಾಯಿಸಿಕೊಂಡ ನೀರನ್ನು ಲೋಟದಲ್ಲಿ ಸೋಸಿಕೊಂಡು ದಿನಕ್ಕೆ ಮೂರು ಬಾರಿ ಸ್ವಲ್ಪ ಸ್ವಲ್ಪವಾಗಿ ಕುಡಿದರೆ ಜ್ವರ ತಕ್ಷಣದಲ್ಲಿ ಕಡಿಮೆ ಆಗುತ್ತದೆ.

ಬೇಕಾಗುವ ಸಾಮಾಗ್ರಿಗಳು:
ಧನಿಯಾ ಪುಡಿ
ಹಾಲು
ಬೆಲ್ಲ

ಮಾಡುವ ವಿಧಾನ:
ಪಾತ್ರೆಯಲ್ಲಿ ನೀರು ಹಾಕಿ ದೊಡ್ಡ ಉರಿಯಲ್ಲಿ ಕಾಯಿಸಬೇಕು ನಂತರ ಧನಿಯಾ ಪುಡಿ ಹಾಕಿ ದೊಡ್ಡ ಉರಿಯಲ್ಲಿ ಕಾಯಿಸಿಕೊಂಡು ಗ್ಯಾಸ್‌ ಆಫ್‌ ಮಾಡಿಕೊಳ್ಳಬೇಕು. ಕುದಿಸಿಕೊಂಡ ನೀರನ್ನು ಲೋಟದಲ್ಲಿ ಸೊಸಿಕೊಂಡು ಹಾಲು ಹಾಕಬೇಕು. ಅದಕ್ಕೆ ಬೆಲ್ಲ ಹಾಕಿ ಕರಡಿಕೊಂಡು ಬೆಳಿಗ್ಗೆ , ಮಧ್ಯಾಹ್ನ, ಸಂಜೆ ಕುಡಿಯುವುದರಿಂದ ಜ್ವರ ಕಡಿಮೆ ಆಗುತ್ತದೆ.

ಬೇಕಾಗುವ ಸಾಮಾಗ್ರಿಗಳು:
ಒಣದ್ರಾಕ್ಷಿ
ನಿಂಬೆ ರಸ

ಮಾಡುವ ವಿಧಾನ:
ಒಂದು ಲೋಟ ನೀರಿಗೆ ಒಣ ದ್ರಾಕ್ಷಿ ಹಾಕಿ ನೆನಸಿಟ್ಟುಕೊಳ್ಳಬೇಕು . ನೆನಸಿಟ್ಟುಕೊಂಡ ಒಣದ್ರಾಕ್ಷಿಯನ್ನು ಬಟ್ಟಲಿಗೆ ಹಾಕಿಕೊಂಡು ಕೀವುಚಿಕೊಳ್ಳಬೇಕು ಅದನ್ನು ನೀರಿಗೆ ಹಾಕಿ ಅರ್ಧ ನಿಂಬೆ ಹಣ್ಣಿನ ರಸ ಹಾಕಿಕೊಂಡು ಕುಡಿದರೆ ಜ್ವರ ಕಡಿಮೆ ಆಗುತ್ತದೆ.

ಇದನ್ನೂ ಓದಿ:Sinus Headache Remedies:ಸೈನಸ್‌ ತಲೆನೊವಿನಿಂದ ಮುಕ್ತಿ ಪಡೆಯಲು ಈ ಮೂರು ಪದಾರ್ಥ ಟ್ರೈ ಮಾಡಿ

ಇದನ್ನೂ ಓದಿ:Banana Scrub :ಚಳಿಗಾಲದಲ್ಲಿ ಮುಖ ಒಡೆಯದಂತೆ ರಕ್ಷಿಸಲು ಬಾಳೆಹಣ್ಣಿನ ಸ್ಕ್ರಬ್‌

ಬೇಕಾಗುವ ಸಾಮಾಗ್ರಿಗಳು:
ತುಳಸಿ ಎಲೆ
ಕಾಳು ಮೆಣಸು

ಮಾಡುವ ವಿಧಾನ:
ಆರು ತುಳಸಿ ಎಲೆ ಮತ್ತು ಆರು ಕಾಳುಮೆಣಸನ್ನು ಕುಟ್ಟಣಿಗೆಯಲ್ಲಿ ಹಾಕಿ ಜಜ್ಜಿಕೊಳ್ಳಬೇಕು. ಜಜ್ಜಿಕೊಂಡ ತುಳಸಿ ಎಲೆ ಮತ್ತು ಕಾಳು ಮೆಣಸನ್ನು ಬಾಯಲ್ಲಿ ಇಟ್ಟುಕೊಂಡು ಅಗೆಯುತ್ತಾ ರಸ ನುಂಗುವುದರಿಂದ ಜ್ವರ ಕಡಿಮೆ ಆಗುತ್ತದೆ. ದಿನದಲ್ಲಿ ಎರಡು ಬಾರಿ ಇದನ್ನು ತಿನ್ನುವುದರಿಂದ ಜ್ವರ ಕಡಿಮೆ ಆಗುತ್ತದೆ.

Fever Reduce Tips Here is a solution to get relief from fever quickly

Comments are closed.