Egg : ದಿನಕ್ಕೊಂದು ಮೊಟ್ಟೆ ತಿನ್ನುತ್ತೀರಾ ? ಹಾಗಾದ್ರೆ ಈ ಸ್ಟೋರಿ ಓದಲೇ ಬೇಕು

ಮೊಟ್ಟೆ ಹೆಚ್ಚಿನ ಜನರು ಸಾಮಾನ್ಯವಾಗಿ ಬಳಸುವ ಆಹಾರ. ಇದರಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಅಡಗಿವೆ. ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಎಷ್ಟೇಲ್ಲಾ ಲಾಭ ಇದೆ ಅಂತ ನೀವು ತಿಳಕೊಂಡ್ರೇ ಮತ್ತೆ ಮೊಟ್ಟೆ ತಿನ್ನೋದನ್ನ ಬಿಡೋದೇ ಇಲ್ಲಾ. ಅಲ್ಲದೇ ಇನ್ನೂ ಹಲವು ಆರೋಗ್ಯ ವೃದ್ಧಿಸುವ ಪೋಷಕಾಂಶ ಮೊಟ್ಟೆಯಲ್ಲಿದೆ.

ಕಬ್ಬಿಣಾಂಶ ಹೆಚ್ಚಿಸುತ್ತದೆ : ಕಬ್ಬಿಣದ ಕೊರತೆಯಿರುವ ಅನೇಕ ಜನರು ದಣಿವು, ತಲೆನೋವು ಮತ್ತು ಕಿರಿಕಿರಿತನದ ಅಸ್ಪಷ್ಟ ಲಕ್ಷಣಗಳನ್ನು ಅನುಭವಿಸುತ್ತಾರೆ. ಕಬ್ಬಿಣವು ರಕ್ತದಲ್ಲಿನ ಆಮ್ಲಜನಕದ ವಾಹಕವಾಗಿದೆ ಮತ್ತು ಪ್ರತಿರೋಧಕ ಶಕ್ತಿ, ಶಕ್ತಿ ಚಯಾಪಚಯ ಮತ್ತು ದೇಹದ ಇತರ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆಯ ಹಳದಿ ಲೋಳೆಯ ಕಬ್ಬಿಣಾಂಶ ಹೆಚ್ಚಲು ಸಹಕಾರಿಯಾಗಿದೆ.

ಇದನ್ನೂ ಓದಿ: ದಿನನಿತ್ಯ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ ?

ಸಕ್ಕರೆ ಪ್ರಮಾಣವನ್ನು ನಿಯಂತ್ರಣ : ಮೊಟ್ಟೆಯ ಹಳದಿಯಲ್ಲಿರುವ ಕಬ್ಬಿಣಾಂಶ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದು. ವಾರದಲ್ಲಿ 2 ಬಾರಿ ಇದರ ಹಳದಿ ತಿಂದರೆ ದೇಹಕ್ಕೆ ಉತ್ತಮ ಪೋಷಕಾಂಶ ದೊರಕಿದಂತೆ ಆಗುತ್ತದೆ. ಹಳದಿಯಲ್ಲಿ ಉತ್ತಮ ಕೊಲೆಸ್ಟ್ರಾಲ್ ಮತ್ತು ಕ್ಯಾಲೋರಿ ಹದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

ದೇಹದ ತೂಕವನ್ನು ಇಳಿಸಬಹುದು : ಬೆಳಿಗ್ಗೆ ಬ್ರೇಕ್‌ಫಾಸ್ಟ್ ಗೆ ಮೊಟ್ಟೆ ಸೇವಿಸುವುದರಿಂದ ದೇಹದ ತೂಕವನ್ನು ಇಳಿಸಬಹುದು ಎಂದು ಇತ್ತೀಚಿನ ಸಂಶೋಧನೆ ತಿಳಿಸಿದೆ. ಮೊಟ್ಟೆ ಸೇವನೆಯಿಂದ ದಿನವಿಡೀ ಹಸಿವು ಕಡಿಮೆಯಾಗುವುದು. ಇದರಿಂದ ಮಧ್ಯದಲ್ಲಿ ಬಿಸ್ಕಿಟ್, ಚಿಪ್ಸ್ ಇತರ ಜಂಕ್ ಫೂಡ್‌ಗಳನ್ನು ತಿನ್ನುವುದು ತಪ್ಪಿಸಬಹುದು. ಇದರಿಂದ ಇತರೇ ಆರೋಗ್ಯ ಸಮಸ್ಯೆಗಳಿಂದಲೂ ಪಾರಾಗಬಹುದು.

ಇದನ್ನೂ ಓದಿ :ಆರೋಗ್ಯ ಸಮಸ್ಯೆಗೆ ರಾಮಬಾಣ ಕೋಕಂ ಜ್ಯೂಸ್

ಮೆದುಳಿನ ಅರೋಗ್ಯಕ್ಕೆ ಮೊಟ್ಟೆಯ ಅರೋಗ್ಯ ಪ್ರಯೋಜನಗಳು : ಮೊಟ್ಟೆಗಳು ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತವೆ, ಇವುಗಳು ಮೆದುಳಿನ, ನರಮಂಡಲದ, ಮೆಮೊರಿ, ಮತ್ತು ಮೆಟಾಬಾಲಿಸಮ್ ಸೇರಿದಂತೆ ಜೀವಕೋಶಗಳ ನಿಯಮಿತ ಕಾರ್ಯನಿರ್ವಹಣೆಗೆ ಅಗತ್ಯವಾಗಿವೆ.

(Do you eat eggs a day? So you have to read this story)

Comments are closed.