ವೀಳ್ಯದೆಲೆ ಆರೋಗ್ಯಕ್ಕೆ ಹೇಗೆಲ್ಲಾ ಪ್ರಯೋಜನಕಾರಿ ಗೊತ್ತಾ ?

ಊಟವಾದ ಮೇಲೆ ವೀಳ್ಯದೆಲೆ ಸೇವಿಸುವ ಪದ್ಧತಿ ಅನೇಕ ವರ್ಷಗಳಿಂದಲೂ ರೂಢಿಯಲ್ಲಿದೆ. ಈ ರೂಢಿಯನ್ನು ನಮ್ಮ ಹಿರಿಯರು ಸುಮ್ಮನೆ ಬಾಯಿ ರುಚಿಗೆ ಮಾಡಿಲ್ಲಾ. ತಾಂಬೂಲ ತಿನ್ನುವುದ್ರಿಂದ ಸಾಕಷ್ಟು ಲಾಭವಿದೆ. ಅಲ್ಲದೇ ಆರೋಗ್ಯಕ್ಕೆ ಈ ವೀಳ್ಯದೆಲೆಯ ಪ್ರಯೋಜನಗಳು ಬಹಳಷ್ಟಿದೆ.

ಬಾಯಿ ರುಚಿ ಹೆಚ್ಚಿಸುವ ಜೊತೆಗೆ ಅನೇಕ ರೋಗಗಳನ್ನು ಹೊಡೆದೋಡಿಸುವ ಶಕ್ತಿಯನ್ನು ವೀಳ್ಯದೆಲೆ ಹೊಂದಿದೆ. ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ ಆ ನೀರು ಕುಡಿಯುವುದ್ರಿಂದ ಕಫ, ಕೆಮ್ಮು ಕಡಿಮೆಯಾಗುತ್ತದೆ. ಮಕ್ಕಳಿಗೆ ಇದ್ರ ಜೊತೆ ತುಳಸಿ ರಸ ಹಾಗೂ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿ ಕೊಡಬಹುದು.

ಇದನ್ನೂ ಓದಿ: ನೀರಲ್ಲಿ ನೆನೆಸಿಟ್ಟ ಕಡಲೆಕಾಯಿ ತಿಂದ್ರೆ ಏನೆಲ್ಲಾ ಲಾಭವಿದೆ ಗೊತ್ತಾ ?

ಎಲೆ, ನಂಜು ನಿರೋಧಕ. ಸಣ್ಣಪುಟ್ಟ ಗಾಯಗಳಿಗೆ ಎಲೆ ರಸವನ್ನು ತೆಗೆದು ಹಚ್ಚುವುದ್ರಿಂದ ಗಾಯ ಬಹುಬೇಗ ಗುಣವಾಗುತ್ತದೆ. ಗಂಟಲು ಸಮಸ್ಯೆ ಎದುರಾದಾಗ ಪಾನ್ ತಿನ್ನುವುದು ಅಥವಾ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದ್ರಿಂದ ಗಂಟಲು ನೋವಿನ ಸಮಸ್ಯೆ ಕಡಿಮೆಯಾಗುತ್ತದೆ.

ದಂತದಿಂದ ರಕ್ತ ಬರ್ತಿದ್ದರೆ ಇದನ್ನು ತಡೆಯುವ ಶಕ್ತಿ ಎಲೆಗಿದೆ. ಎಲೆಯನ್ನು ನೀರಿನಲ್ಲಿ ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿದ್ರೆ ಪ್ರಯೋಜನಕಾರಿ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಕೆಲಸವನ್ನು ವೀಳ್ಯದೆಲೆ ಮಾಡುತ್ತದೆ. ಜೊತೆಗೆ ಉತ್ತಮ ಜೀರ್ಣಕ್ರಿಯೆಗೆ ಇದು ಸಹಕಾರಿ. ತಲೆನೋವನ್ನು ಗುಣಪಡಿಸುವ ಶಕ್ತಿ ಕೂಡ ವೀಳ್ಯದೆಲೆಗಿದೆ.

ಇದನ್ನೂ ಓದಿ: Cucumber Water : ಬೆಳಗ್ಗೆ ಎದ್ದ ತಕ್ಷಣ ಸೌತೆಕಾಯಿ ನೆನೆಸಿಟ್ಟ ನೀರು ಕುಡಿಯಿರಿ : ಎಷ್ಟೆಲ್ಲಾ ಲಾಭವಿದೆ ಗೊತ್ತಾ ?

(Do you know how betel leaves are beneficial for health?)

Comments are closed.