ಸಾಂಪ್ರದಾಯಿಕ ಔಷದಿ ಲವಂಗ ದೇಹಕ್ಕೆ ಎಷ್ಟು ಮುಖ್ಯ

ಹಿಂದಿನ ಕಾಲದಿಂದಲೂ ಭಾರತ ಮಸಾಲೆಗಳಿಗೆ ಫೇಮಸ್‌. ಈ ಮಸಾಲೆ ಪದಾರ್ಥಗಳ ಪೈಕಿ ಲವಂಗ ಕೂಡ ಒಂದು. ಲವಂಗ ಸುಗಂಧ ಭರಿತ ಸ್ವಾದದಲ್ಲಿ ಸಿಹಿ ಕೊನೆಗೆ ಕಾರ ಇರುವ ಮಸಾಲೆಯಾಗಿದೆ. ಲವಂಗವನ್ನು ಅಡುಗೆಯಲ್ಲಿ ಮಾತ್ರವಲ್ಲದೇ ಹಲವು ಕಾಯಿಲೆಗಳನ್ನು ಗುಣ ಪಡಿಸಲು ಉಪಯೋಗಿಸುತ್ತಾರೆ.

ಆಯುರ್ವೇಧದಲ್ಲಿ ಲವಂಗವನ್ನು ಸಾಂಪ್ರದಾಯಿಕ ಔಷದಿಯಾಗಿ ಬಳಸುತ್ತಾರೆ. ಇದರಲ್ಲಿ ವಿಟಮಿನ್‌ ಕೆ, ವಿಟಮಿನ್‌ ಇ, ಫೈಬರ್‌, ಖನಿಜಾಂಶಗಳಲ್ಲಿ ಕ್ಯಾಲ್ಸಿಯಂ ಲವಂಗದಲ್ಲಿ ಹೆಚ್ಚಾಗಿದೆ. ಲವಂಗ ನಮ್ಮ ಮೂಳೆಗಳಿನ್ನ ಆರೋಗ್ಯವನ್ನು ಹೆಚ್ಚಿಸುತ್ತೆ. ನಮ್ಮ ಮೆದುಳಿನ ಕಾರ್ಯಗಳನ್ನು ಆರೋಗ್ಯವಾಗಿ ನಡೆಸಲು ಲವಂಗ ಸಹಕಾರಿಯಾಗಿದೆ.

ಇದನ್ನೂ ಓದಿ: ಮೊಳಕೆ ಬರಿಸಿದ ಹೆಸರು ಕಾಳು ತಿನ್ನುವುದು ಆರೋಗ್ಯಕ್ಕೆ ಉತ್ತಮವೇ ?

ಲವಂಗದಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೆಚ್ಚಾಗಿದ್ದು ಕಾಯಿಲೆಗಳು ಬರುವುದನ್ನು ತಡೆಗಟ್ಟತ್ತೆ. ಅಲ್ಲದೇ ಲವಂಗದಲ್ಲಿ ಕ್ಯಾನ್ಸರ್‌ ತಡೆಗಟ್ಟುವ ಗುಣವು ಇದೆ. ದೇಹದಲ್ಲಿ ಗೆಡ್ಡೆ, ಟ್ಯೂಮರ್‌ ಕಾಣಿಸಿಕೊಂಡ್ರು ಅದರ ಬೆಳವಣೆಗೆಯು ಲವಂಗ ಸೇವನೆಯಿಂದ ಕಡಿಮೆಯಾಗುತ್ತದೆ. ಇನ್‌ ಸೂಲಿನ್‌ ಹಾರ್ಮೋನ್‌ ಅನ್ನು ರೆಗ್ಯುಲೇಟ್‌ ಮಾಡುತ್ತದೆ.

ಡಯಾಬಿಟಿಕ್ಸ್‌ ಇರುವವರು ಲವಂಗ ಸೇವನೆ ಮಾಡುವುದರಿಂದ ಕಾಯಿಲೆ ಕಡಿಮೆಯಾಗುತ್ತದೆ. ಹಾಗೂ ಹೊಟ್ಟೆಗೆ ಸಂಭಂದಿಸಿದ ಕಾಯಿಲೆಗಳನ್ನು ಲವಂಗ ಸೇವನೆಯಿಂದ ಕಡಿಮೆ ಮಾಡಿಕೊಳ್ಳ ಬಹುದು. ಅಲ್ಲದೇ ಫುಡ್‌ ಪೋಜ್ಸನ್‌ ಆದಾಗಲು ಒಂದೆರಡು ಒಲವಂಗ ಸೇವಿಸುವುದರಿಂದ ಫುಡ್‌ ಪೋಜ್ಸನಿಂಗ್‌ ಸಮಸ್ಯೆ ಕಂಟ್ರೋಲಿಗೆ ಬರುತ್ತೆ.

ಇದನ್ನೂ ಓದಿ: Drumstick : ಪೌಸ್ಟಿಕಾಂಶಗಳ ಆಗರ ನುಗ್ಗೆ ಕಾಯಿ

(How important traditional cloves are to the body)

Comments are closed.