Fruits On Empty Stomach : ಖಾಲಿ ಹೊಟ್ಟೆಯಲ್ಲಿ ತಪ್ಪಾಗಿಯೂ ಈ ಹಣ್ಣುಗಳನ್ನು ತಿನ್ನಲೇಬೇಡಿ

ಹಣ್ಣುಗಳು (Fruits) ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬಹಳ ಸಹಾಯ ಮಾಡುತ್ತವೆ. ಅವುಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯ(Health) ಸುಧಾರಿಸುತ್ತದೆ. ಹಣ್ಣುಗಳು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪೂರೈಸುತ್ತವೆ. ಆಯಾ ಋತುವಿನಲ್ಲಿ ನೈಸರ್ಗಿಕವಾಗಿ ದೊರೆಯುವ ಹಣ್ಣಗಳು ಆ ಕಾಲದ ರೋಗಗಳಿಂದ ನಮ್ಮನ್ನು ದೂರವಿರಿಸುತ್ತದೆ. ಹಣ್ಣುಗಳನ್ನು ತಿನ್ನಲು ಸಮಯವಿರುತ್ತದೆ. ಹಾಗೆಯೇ ಅವುಗಳನ್ನು ತಿನ್ನುವಾಗ ನಿಯಮಗಳೂ ಇವೆ. ಅವುಗಳನ್ನೆಲ್ಲಾ ಪಾಲಿಸದೇ ಹಾಗೆಯೇ ತಿಂದರೆ ಅದರಿಂದ ತೊಂದರೆ ಖಂಡಿತ. ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು. ಹಾಗೆಯೇ ಇನ್ನು ಕೆಲವುಗಳನ್ನು ಆಹಾರದ ನಂತರ ತಿನ್ನಬೇಕು. ಇಲ್ಲಿ ಹೇಳಿರುವ ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ (Fruits On Empty Stomach) ತಿನ್ನುವುದು ಲಾಭಕ್ಕಿಂತ ನಷ್ಟವನ್ನೇ ಹೆಚ್ಚು ಮಾಡುತ್ತದೆ. ಆ ಹಣ್ಣುಗಳ ಬಗ್ಗೆ ಇಲ್ಲಿದೆ ಓದಿ.

ಬಾಳೇಹಣ್ಣು:
ಎಲ್ಲಾ ಕಾಲಗಳಲ್ಲಿಯೂ ದೊರೆಯುವ ಹಣ್ಣು ಎಂದರೆ ಬಾಳೇಹಣ್ಣು. ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುದೇ ಇರುವುದೇ ಒಳ್ಳೆಯದು. ಏಕೆಂದರೆ, ಖಾಲಿ ಹೊಟ್ಟೆಯಲ್ಲಿ ಬಾಳೇಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಅದರಿಂದ ಬ್ಲೋಟಿಂಗ್‌ (ಹೊಟ್ಟೆಯುಬ್ಬುರ) ಸಮಸ್ಯೆ ಎದುರಾಗಬಹುದು. ಜೊತೆಗೆ ಮಲಬದ್ಧತೆಯ ಸಮಸ್ಯೆಯೂ ಕಾಡಬಹುದು.

ಮುಸಂಬಿ :
ಸಿಟ್ರಸ್‌ ಅಂಶ ಹೆಚ್ಚಿರುವ ಹಣ್ಣಾದ ಮುಸಂಬಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಸಮಸ್ಯೆಗಳಿಗೆ ಎದುರಾಗಬಹುದು. ಇದು ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುತ್ತದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಎಸಿಡಿಟಿ ಅಥವಾ ಗ್ಯಾಸ್‌ ಸಮಸ್ಯೆಯು ಹೆಚ್ಚಾಗಬಹುದು.

ಕಿವಿ :
ಅತಿ ಹೆಚ್ಚು ಪ್ರಮಾಣದ ವಿಟಮಿನ್‌ ಸಿ ಇದರಿಲ್ಲಿದೆ. ಆದ್ದರಿಂದ ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಲೇ ಬಾರದು. ಕಿವಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹುಳಿ ತೇಗು, ಎಸಿಡಿಟಿ, ಮತ್ತು ಎದೆಯುರಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಅನಾನಸ್‌ :
ಕೊನೆಯದಾಗಿ ಅನಾನಸ್ ಹಣ್ಣನ್ನು ಸಹ ಖಾಲಿ ಹೊಟ್ಟೆಯಲ್ಲಿ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಇದರಲ್ಲಿ ಫ್ರುಕ್ಟೋಸ್‌ ಹೆಚ್ಚಿನ ಪ್ರಮಾಣದಲ್ಲಿದೆ. ಈ ಹಣ್ಣಿನಲ್ಲಿ ಫೈಬರ್‌ ಜೊತೆಗೆ ವಿಟಮಿನ್‌ ಸಿ ಸಹ ಇದೆ. ಇವೆರಡೂ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಇದನ್ನೂ ಓದಿ : ಕೋಕಂ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು ? ಈ ಬೇಸಿಗೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತೆ ?

ಇದನ್ನೂ ಓದಿ : Orange-Papaya Smoothie : ಬೇಸಿಗೆಯಲ್ಲಿ ಅದ್ಭುತ ಆರೋಗ್ಯಕ್ಕೆ ವರದಾನ ಆರೆಂಜ್‌–ಪಪ್ಪಾಯಿ ಸ್ಮೂಥಿ

(Health tips. Do not eat these fruits on an empty stomach)

Comments are closed.