ಸಣ್ಣಗಿರುವವರು ದಪ್ಪವಾಗಬೇಕಾ ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

0

ಇಂದಿನ ಜೀವನ ಶೈಲಿ ನಮ್ಮ ದೇಹದ ರಚನೆಯ ಮೇಲೆ ಪರಿಣಾಮವನ್ನು ಬೀರುತ್ತಿದೆ. ಒಂದಿಷ್ಟು ಮಂದಿ ದಪ್ಪ ಇದ್ರೆ, ಇನ್ನೊಂದಿಷ್ಟು ಮಂದಿ ಸಣ್ಣಗಾಗಿರುತ್ತಾರೆ. ದಪ್ಪಗಿದ್ದವರು ಸಣ್ಣಗಾಗಲು ಪ್ರಯತ್ನಿಸಿದ್ರೆ, ತೆಳ್ಳಗೆ ಇರುವವರು ದಪ್ಪವಾಗಲು ಪ್ರಯತ್ನಿಸುತ್ತಲೇ ಇರುತ್ತಾರೆ. ಹೀಗೆ ದಪ್ಪವಾಗಲು ಇಲ್ಲಿದೆ ಅದ್ಬುತ ಟಿಪ್ಸ್. ಕೊಬ್ಬಿನ ಅಂಶ ಹೆಚ್ಚಿರುವ ಆಹಾರ ತಿನ್ನುವುದರಿಂದ ದಪ್ಪವಾಗಿತ್ತಾರೆಂದು ತಿಳಿದು ಕೊಬ್ಬಿನಂಶ ಹೆಚ್ಚಿರುವ ಆಹಾರಗಳನ್ನು ತಿಂದು ಬೊಜ್ಜನ್ನು ಹೆಚ್ಚಿಸಿ ಆರೋಗ್ಯವನ್ನು ಹಾಳುಮಾಡಿ ಕೊಡಿರುತ್ತರೆ.

ಎಷ್ಟೋ ಜನರಿಗೆ ತಿಳಿದಿಲ್ಲ ಕೆಲವೇ ಅಹಾರವನ್ನು ನಮ್ಮ ದಿನ ನಿತ್ಯದ ಆಹಾರದೊಂದಿಗೆ ಸೇರಿಸಿಕೊಂಡು ಕ್ರಮ ಬದ್ದವಾಗಿ ಸೇವಿಸುವುದರಿಂದ. ನೈಸರ್ಗಿಕವಾಗಿ ಮತ್ತು ಆರೋಗ್ಯಕರವಾಗಿ ದೇಹದ ತೂಕವನ್ನು ಹೆಚ್ಚಿಸಿಕೊಳ್ಳವುದು ಸುಲಭ.

ರಾತ್ರಿಯೇ ನೆನೆಸಿಟ್ಟ ದೊಡ್ಡ ಕಡಲೆ, ನೆಲಗಡಲೆ ಮತ್ತು ಒಣ ದ್ರಾಕ್ಷಿ ಬೆಳಗ್ಗೆಯನ್ನು ಎದ್ದ ಕೂಡಲೇ ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ.

‌ಯಾವುದೇ ಆಹಾರ ತಿನ್ನುವುದಕ್ಕೆ ಎರಡು ಘಂಟೆ ಮುಂಚೆ ಒಂದು ಲೋಟ ಹಾಲಿಗೆ ಎರಡು ಬಾಳೆಹಣ್ಣು ಮತ್ತು ಕರ್ಜೂರ ಸೇರಿಸಿ ಕಡೆದು ಕುಡಿಯುವುದರಿಂದ ದೇಹದ ತೂಕವು ಹೆಚ್ಚಾಗುತ್ತದೆ.

‌ದಿನ ರಾತ್ರಿ ಮಲಗುವ ಮುಂಚೆ ಎರಡು ಬಾಳೆಹಣ್ಣು ಮತ್ತು ಒಂದು ಲೋಟ ಹಾಲು ಕುಡಿಯುವುದರಿಂದ ದೇಹದ ತೂಕವು ಹೆಚ್ಚಾಗುವುದು.

‌ಹಾಲು ಹಾಗೂ ಮಾವಿನ ಹಣ್ಣು ದೇಹ ತೂಕವನ್ನು ಹೆಚ್ಚಿಸಿಕೊಳ್ಳು ಹೆಚ್ಚು ಸಹಕಾರಿ. ಹೀಗಾಗಿ ಎರಡು ಮಾವಿನ ಜೊತೆ ಹಾಲು ಕುದಿಯುವುದರಿಂದ ದೇಹದ ತೂಕವು ಹೆಚ್ಚಾಗುವುದು.

ನಾವು ತಿನ್ನುವ ಆಲೂಗಡ್ಡೆಯನ್ನು ನಿತ್ಯವೂ ಬೇಯಿಸಿ ತಿನ್ನುವುದರಿಂದ ದೇಹದ ತೂಕವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದಾಗಿದೆ.

ಇನ್ನು ಔಷಧೀಯ ಗುಣವನ್ನು ಹೊಂದಿರುವ ಒಣ ದ್ರಾಕ್ಷಿ ದೇಹದ ತೂಕ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಪ್ರತಿನಿತ್ಯ ಎರಡು ಒಣದ್ರಾಕ್ಷಿಗಳನ್ನು ತಿನ್ನುವುದರಿಂದ ದೇಹದ ತೂಕವು ಹೆಚ್ಚಾಗುವುದು.

ಮೊಸರು ಹಾಗೂ ಸಕ್ಕರೆ ನಮ್ಮ ದೇಹದ ಮೇಲೆ ಅದ್ಬುತ ಪರಿಣಾಮವನ್ನು ಉಂಟುಮಾಡುತ್ತದೆ. ಹೀಗಾಗಿ ನಿತ್ಯವೂ ಮೊಸರಿಗೆ ಸಕ್ಕರೆಯನ್ನು ಸೇರಿಸಿ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ.

‌‌ದಿನದ ವ್ಯಾಯಾಮವೂ ದೇಹದ ತೂಕ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ನಿತ್ಯ ವ್ಯಾಯಾಮ ಮಾಡಿದ ನಂತರದಲ್ಲಿ ಹೊಟ್ಟೆಯನ್ನು ಖಾಲಿ ಬಿಡಬಾರದು.

‌ನಾವು ತಿನ್ನುವ ಅನ್ನದ ಗಂಜಿಗೆ ಹಾಲವನ್ನು ಮಿಸ್ಕ್ ಮಾಡಿ ಪ್ರತಿನಿತ್ಯವೂ ಸೇವನೆ ಮಾಡುವುದರಿಂದ ದೇಹದ ಮೇಲೆ ಉತ್ತಮ ಪರಿಣಾಮವನ್ನು ಬೀರಲಿದ್ದು, ದೇಹದ ತೂಕವು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.

‌ಬಾರಿ ರುಚಿಗೆ ತಿನ್ನುವ ಶೇಂಗಾ ದೇಹದ ಆಕೃತಿಯ ಬದಲಾವಣೆಗೆ ಹೆಚ್ಚು ಪರಿಣಾಮಕಾರಿಯಾಗಿದೆ. ನೆನೆಸಿಟ್ಟ ಶೇಂಗಾವನ್ನು ತಿನ್ನುವುದರಿಂದ ವೇಗವಾಗಿ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ : ಗೃಹಿಣಿಯರಿಗೆ ಗುಡ್‌ನ್ಯೂಸ್‌ : ಶೀಘ್ರವೇ ಇಳಿಕೆಯಾಗಲಿದೆ ಅಡುಗೆ ಎಣ್ಣೆಯ ದರ !

ಇದನ್ನೂ ಓದಿ : ಸ್ವಂತ ಮನೆ ಕನಸು ಕಂಡಿದ್ದಿರಾ ? ಹಾಗಾದ್ರೆ ನಿಮಗಿದೆ ರಾಜ್ಯ ಸರ್ಕಾರದಿಂದ ಭರ್ಜರಿ ‘ಗುಡ್ ನ್ಯೂಸ್’

( Should the smaller ones be bold ? So follow these tips )

Leave A Reply

Your email address will not be published.