Healthy Stomach : ಔಷಧಗಳ ಬಳಕೆ ಕಡಿಮೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಮಾಡಬೇಕಾದದ್ದು ಏನು ಗೊತ್ತಾ…

ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿದ್ದರೆ ನಮ್ಮ ಆರೋಗ್ಯ ಸರಿಯಿರುತ್ತದೆ (Healthy Stomach ). ಜೀರ್ಣ ಕ್ರಿಯೆಯಲ್ಲಿ ಉಂಟಾಗುವ ತೊಂದರೆಗಳು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಎದೆಯುರಿ, ನಿದ್ದೆಯ ಕೊರತೆ ಮುಂತಾದವುಗಳು ಕಾಣಿಸುತ್ತದೆ. ಜೀರ್ಣ ಕ್ರಿಯೆ ಆಗುವುದು ನಮ್ಮ ಹೊಟ್ಟೆಯಲ್ಲಾದರೂ, ಈ ಕ್ರೀಯೆಯಲ್ಲಿ ದೇಹದ ಅನೇಕ ಅಂಗಾಂಗಗಳು ಭಾಗಿಯಾಗಿರುತ್ತವೆ.

ನಾವು ಸೇವಿಸಿದ ಆಹಾರ ಜೀರ್ಣವಾಗುವ ಕ್ರಿಯೇ ಪ್ರಾರಂಭವಾಗುವುದು ಬಾಯಿಯಲ್ಲಿ ಆಹಾರವನ್ನು ಅಗಿಯುವುದಕ್ಕೆ ಪ್ರಾರಂಭಿಸಿದಾಗ. ಬಾಯಿಯಲ್ಲಿರವ ಲಾಲಾರಸವು ನಾವು ತಿಂದ ಆಹಾರವನ್ನು ಒಡೆಯಲು ಪ್ರಾರಂಭಿಸುತ್ತದೆ. ಅದನ್ನು ನುಂಗಿದಾಗ, ಕುತ್ತಿಗೆಯಿಂದ ಹೊಟ್ಟೆಯನ್ನು ಸಂಪರ್ಕಿಸುವು ಅನ್ನನಾಳದ ಮೂಲಕ ಆಹಾರವು ಸಾಗಿ ಕೊನೆಯಲ್ಲಿ ಹೊಟ್ಟೆಯನ್ನು ಸೇರುತ್ತದೆ.

ಔಷಧಗಳ ಬಳಕೆ ಕಡಿಮೆ ಮಾಡಲು ಹೀಗೆ ಮಾಡಿ :

ಹೆಚ್ಚೆಚ್ಚು ಫೈಬರ್‌ ಸೇವಿಸಿ:
ಹೆಚ್ಚೆಚ್ಚು ಫೈಬರ್ ಅಂಶ ಹೊಂದಿರುವ ಆಹಾರ ಸೇವನೆಯಿಂದ ಡೈವರ್ಟಿಕ್ಯುಲೋಸಿಸ್, ಹೆಮೊರೊಯಿಡ್ಸ್ ಮತ್ತು ಕರುಳಿನ ತೊಂದರೆ ಹಾಗೂ ವಿವಿಧ ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸಲು ಸಧ್ಯವಾಗುತ್ತದೆ. ಜೊತೆಗೆ ಮಲಬದ್ಧತೆ (IBS) ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದು ಆರೋಗ್ಯಕರ ತೂಕವನ್ನು ಪಡೆಯಲು ಮತ್ತು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.

ನಿಧಾನವಾಗಿ ಮತ್ತು ನಿಯಮಿತವಾಗಿ ತಿನ್ನಿರಿ :
ನಿಯಮಿತ ಊಟ ಮತ್ತು ಆರೋಗ್ಯಕರ ತಿಂಡಿಗಳನ್ನು ತಿನ್ನುವುದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಸಾಧ್ಯವಾದಷ್ಟು, ಪ್ರತಿದಿನ ಒಂದೇ ಸಮಯದಲ್ಲಿ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ಮತ್ತು ತಿಂಡಿಗಳನ್ನು ತಿನ್ನಲು ಪ್ರಯತ್ನಿಸಿ. ಮತ್ತು ನಿಧಾನವಾಗಿ ತಿನ್ನಿ. ಬಫೋನ್ ಮತ್ತು ಟಿವಿಯನ್ನು ನೋಡುತ್ತಾ ಊಟ ಮಾಡಬೇಡಿ. ನಿಮ್ಮ ಪೂರ್ಣ ಗಮನ ಊಟದ ಮೇಲಿರಲಿ.

ಹೆಚ್ಚೆಚ್ಚು ನೀರು ಕುಡಿಯಿರಿ :
ಸಾಕಷ್ಟು ನೀರು ಕುಡಿಯುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು. ನೀರು ಆಹಾರವು ಮೃದುವಾಗುವಂತೆ ಮಾಡುತ್ತದೆ. ಸೌತೆಕಾಯಿ, ಟೊಮ್ಯಾಟೊ, ಕಲ್ಲಂಗಡಿಗಳು, ಸ್ಟ್ರಾಬೆರಿಗಳು, ದ್ರಾಕ್ಷಿಹಣ್ಣು ಮತ್ತು ಪೀಚ್‌ಗಳಂತಹ ನೀರಿನಾಂಶ ಅಧಿಕವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.

ಮದ್ಯಪಾನ, ಅತಿಯಾದ ಕಾಫಿ ಮತ್ತು ಧೂಮಪಾನ ಬಿಟ್ಟುಬಿಡಿ:
ಆಲ್ಕೋಹಾಲ್, ಸಿಗರೇಟ್ ಮತ್ತು ಅತಿಯಾದ ಕೆಫೀನ್ ಸೇವನೆಯು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಇದು ಹೊಟ್ಟೆಯ ಹುಣ್ಣು ಮತ್ತು ಎದೆಯುರಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.

ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ:
ಅತಿಯಾದ ಒತ್ತಡವು ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಒತ್ತಡ ನಿವಾರಿಸಿಕೊಳ್ಳುವ ಚಟುವಟಿಕೆಗಳನ್ನು ಮಾಡಿ. ಆಳವಾದ ಉಸಿರಾಟ, ಧ್ಯಾನ ಅಥವಾ ಯೋಗದಂತಹ ಒತ್ತಡ ನಿವಾರಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಿ. ಇದು ನಿಮ್ಮ ಮಾನಸಿಕ ಸ್ಥಿತಿಯನ್ನು ಮಾತ್ರವಲ್ಲದೆ ನಿಮ್ಮ ಜೀರ್ಣಕ್ರಿಯೆಯನ್ನೂ ಹೆಚ್ಚಿಸುತ್ತದೆ.

ನಿಯಮಿತವಾಗಿ ವ್ಯಾಯಾಮ ಮಾಡಿ:
ನಿಯಮಿತ ವ್ಯಾಯಾಮವು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ ಮತ್ತು ಆಹಾರವು ಜೀರ್ಣಾಂಗ ವ್ಯವಸ್ಥೆಯ ಮೂಲಕ ಚಲಿಸುವುದನ್ನು ಖಾತ್ರಿಪಡಿಸುತ್ತದೆ. ಇದು ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ.

ಇದನ್ನೂ ಓದಿ : Rishi Sunak Lifestyle : ಹೋಟೆಲ್ ಸಪ್ಲೈಯರ್, ವೈದ್ಯರ ಮಗ ಬ್ರಿಟನ್ ಪ್ರಧಾನಿ ಆಗಿದ್ದು ಹೇಗೆ ? ಇಲ್ಲಿದೆ ರಿಷಿ ಸುನಕ್ ಬದುಕಿನ ರೋಚಕ ಕಹಾನಿ

ಇದನ್ನೂ ಓದಿ : Winter Hair Care Tips : ಚಳಿಗಾಲದಲ್ಲಿ ಎಣ್ಣೆಯುಕ್ತ ಕೂದಲಿನ ಸಮಸ್ಯೆಯಿಂದ ಮುಕ್ತಿಗೆ ಇಲ್ಲಿದೆ ಮನೆಮದ್ದು

(Healthy Stomach, to maintain health by reducing the use of drugs)

Comments are closed.