Knee Pain : ಮಂಡಿನೋವಿಗೆ ಇಲ್ಲಿದೆ ಶಾಶ್ವತ ಪರಿಹಾರ

ಇತ್ತೀಚಿನ ದಿನಗಳಲ್ಲಿ ಮಂಡಿನೋವು (Knee Pain) ವಯಸ್ಕರಲ್ಲಿ ಹೆಚ್ಚಾಗಿ ಕಾಡುತ್ತಿದೆ. ಅದಕ್ಕೆ ಕಾರಣ ಪ್ರಾಯದ ಸಮಸ್ಯೆ ಒಂದಾದರೆ, ಮತ್ತೊಂದು ಮಂಡಿಮೂಳೆಗಳಲ್ಲಿ ಇರುವ ಜೆಲ್‌ ಕೊರತೆಯೂ ಹೌದು. ಮಂಡಿನೋವಿನಿಂದಾಗಿ ಹೆಚ್ಚು ದೂರ ನಡೆದಾಡಲು ಆಗುವುದಿಲ್ಲ. ಮೇಲೆ ಕೆಳಗೆ ಹತ್ತಿ ಇಳಿಯಲು ಕಷ್ಟವಾಗುತ್ತದೆ. ಮೂಳೆಗಳ ತಿಕ್ಕಟಾದಿಂದ ಅತೀವವಾದ ನೋವು ಉಂಟಾಗುತ್ತದೆ. ಇದಕ್ಕೆ ಮನೆಯಲ್ಲಿಯೇ ಸುಲಭ ರೀತಿ ಮದ್ದನ್ನು ತಯಾರಿಸಿಕೊಳ್ಳಬಹುದಾಗಿದೆ. ಅದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :
ಸಾಸಿವೆ
ನಾಟಿ(ಊರುಕೋಳಿ)ಕೋಳಿ ಮೊಟ್ಟೆ

ತಯಾರಿಸುವ ವಿಧಾನ :
ಮೊದಲಿನ ದಿನವೇ ಕಾಲು ಕಪ್‌ ಸಾಸಿವೆಯನ್ನು ನೆನೆಸಿ ಇಡಬೇಕು. ನೆನೆಸಿ ಇಟ್ಟುಕೊಂಡ ಸಾಸಿವೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದರ ಜೊತೆಯಲ್ಲಿ ಎರಡರಿಂದ ಮೂರು ನಾಟಿಕೊಳಿ ಮೊಟ್ಟೆಯ ಬಿಳಿಅಶವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರೆಡಿಯಾದ ಪೇಸ್ಟ್‌ನ್ನು ಮಂಡಿಭಾಗಕ್ಕೆ ಹಂಚಿಕೊಂಡು ಮೂರು ಗಂಟೆಗಳ ಕಾಲ ಹಾಗೆ ಬಿಡಬೇಕು. ನಂತರ ನೀರಿನ ಮೂಲಕ ಸ್ವಚ್ಚ ಮಾಡಿಕೊಳ್ಳಬೇಕು. ಇದನ್ನೂ ನಿಯಮಿತವಾಗಿ ಮಾಡುವುದರಿಂದ(Knee Pain) ಮಂಡಿನೋವಿನಿಂದ ದೂರವಿರಬಹುದು.

ಸಾಸಿವೆ ಉಪಯೋಗ :
ಸಾಸಿವೆ ನಮ್ಮ ಭಾರತೀಯರ ಅಡುಗೆ ಸಾಮಾಗ್ರಿಗಳಲ್ಲಿ ಒಂದಾಗಿದೆ. ಸಾಸಿವೆಯನ್ನು ಅಡುಗೆ ಸಂದರ್ಭದಲ್ಲಿ ಹೆಚಾಗಿ ಒಗ್ಗರಣೆಗೆ ಬಳಸುತ್ತಾರೆ. ಸಾಸಿವೆ ಉತ್ತಮ ಆರೋಗ್ಯಕರ ವಸ್ತು ಹೌದು, ಹಾಗೆ ಔಷಧಿ ರೂಪದ ವಸ್ತುವೂ ಹೌದು. ಇದರಲ್ಲಿ ತಯಾರಿಸುವ ಎಣ್ಣೆಯನ್ನು ಚಿಕ್ಕ ಮಕ್ಕಳಿಗೆ ಬಳಸಿ ಸ್ನಾನವನ್ನು ಮಾಡುತ್ತಾರೆ. ಮಕ್ಕಳಿಗೆ ಸಾಸಿವೆ ಎಣ್ಣೆಯಿಂದ ಸ್ನಾನ ಮಾಡಿಸುವುದರಿಂದ ಶೀತ, ಜ್ವರದಿಂದ ದೂರ ಇಡಬಹುದಾಗಿದೆ. ಹಾಗೆ ರಾತ್ರಿ ಸಮಯದಲ್ಲಿ ಸಾಸಿವೆಯನ್ನು ತೆಂಗಿನಎಣ್ಣೆಯಲ್ಲಿ ಬಿಸಿ ಮಾಡಿದ ಎಣ್ಣೆಯನ್ನು ಕಾಲಿನ ಪಾದಕ್ಕೆ ಹಾಕಿ ಮಲಗುವುದರಿಂದ ಕಾಲಿನಲ್ಲಿ ಉಂಟಾಗುವ ಸೆಳೆತ ಕಡಿಮೆ ಆಗುತ್ತದೆ. ಹಾಗೆ ಒಳ್ಳೆಯ ನಿದ್ರೆ ಕೂಡ ಬರುತ್ತದೆ. ತುಂಬಾ ಗ್ಯಾಸ್ಟ್ರಿಕ್‌ ಆದಾಗ ಹಸಿ ಸಾಸಿವೆಯನ್ನು ಬಿಸಿ ನೀರಿನೊಂದಿಗೆ ಸೇವಿಸಿದ್ದರೆ ಕೂಡಲೇ ಕಡಿಮೆ ಆಗುತ್ತದೆ.

ಇದನ್ನೂ ಓದಿ : Turmeric : ಅರಿಶಿನದಲ್ಲಿದೆ ಹಲವು ಬಗೆಯ ಔಷಧೀಯ ಗುಣ

ಇದನ್ನೂ ಓದಿ : Red Eyes : ಕಣ್ಣು ಕೆಂಪಾಗಿ ನೋವಾಗುತ್ತಿದೆಯೇ; ಅದಕ್ಕೆ ಈ 5 ಕಾರಣಗಳಿರಬಹುದು; ಎಚ್ಚರ…

ಇದನ್ನೂ ಓದಿ : Tips for Better Sleep : ಸರಿಯಾದ ನಿದ್ದೆಯಿಲ್ಲದೆ ದಿನಪೂರ್ತಿ ಆಲಸ್ಯವೇ? ಉತ್ತಮ ನಿದ್ದೆಗೆ ಹೀಗೆ ಮಾಡಿ

ನಾಟಿಕೋಳಿ ಮೊಟ್ಟೆ ಉಪಯೋಗ :
ಉತ್ತಮ ಆರೋಗ್ಯಕ್ಕಾಗಿ ನಾಟಿಕೋಳಿ ಮೊಟ್ಟೆಯನ್ನು ದಿನಕ್ಕೊಂದು ತಿಂದರೆ ಉತ್ತಮವಾಗಿರುತ್ತದೆ. ನಾಟಿಕೋಳಿ ಮೊಟ್ಟೆಯನ್ನು ಹೆಚ್ಚಾಗಿ ಮನೆ ಔಷಧಿಗೆ ಬಳಸುತ್ತಾರೆ. ಫಾರಂ ಕೋಳಿ ಮೊಟ್ಟೆಕ್ಕಿಂತ ನಾಟಿಕೋಳಿ ಮೊಟ್ಟೆಯನ್ನು ಬಳಸುವುದು ಹೆಚ್ಚು ಆರೋಗ್ಯಕರವಾಗಿರುತ್ತದೆ. ಮಕ್ಕಳಲ್ಲಿ ಮೂಳೆ ಬೆಳವಣಿಗೆ ನಾಟಿಮೊಟ್ಟಯನ್ನು ಕೊಟ್ಟರೆ ಚೆನ್ನಾಗಿರುತ್ತದೆ. ಕೆಲವೊಬ್ಬರು ದೇಹದಲ್ಲಿ ವಿಪರೀತ ಬೆವರುತ್ತಾರೆ. ಅಂತವರು ನಾಟಿಕೋಳಿ ಮೊಟ್ಟೆಯನ್ನು ಸೇವಿಸಿದರೆ ಕ್ರಮೇಣ ಕಡಿಮೆಯಾಗುತ್ತದೆ.

Here is a permanent solution for knee pain

Comments are closed.