Jasprit bumrah Mohamed Shami: ಟಿ20 ವಿಶ್ವಕಪ್: ಶಮಿ, ಚಹರ್, ಸಿರಾಜ್, ಬುಮ್ರಾ ಬದಲು ಯಾರು ? ಬಿಗ್ ಅಪ್‌ಡೇಟ್ ಕೊಟ್ಟ ಕೋಚ್ ದ್ರಾವಿಡ್

ಬೆಂಗಳೂರು: Jasprit bumrah Mohamed Shami ಐಸಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಿಂದ ಹೊರ ಬಿದ್ದಿರುವ ವೇಗಿ ಜಸ್ಪ್ರೀತ್ ಬುಮ್ರಾ (Jasprit bumrah) ಬದಲು ಭಾರತ ತಂಡವನ್ನು ಸೇರಿಕೊಳ್ಳುವ ವೇಗದ ಬೌಲರ್ ಯಾರು? ಮೊಹಮ್ಮದ್ ಶಮಿ (Mohammed Shami), ಮೊಹಮ್ಮದ್ ಸಿರಾಜ್ (Mohammed Siraj) ಮತ್ತು ದೀಪಕ್ ಚಹರ್ (Deepak Chahar) ಮಧ್ಯೆ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮತ್ತು ನಾಯಕ ರೋಹಿತ್ ಶರ್ಮಾ (Rohit Sharma) ಯಾರಿಗೆ ಮಣೆ ಹಾಕಲಿದ್ದಾರೆ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಪ್ರೀಮಿಯರ್ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣ ಟಿ20 ವಿಶ್ವಕಪ್ ಟೂರ್ನಿಗೆ ಅಲಭ್ಯರಾಗಿದ್ದಾರೆ. ಬುಮ್ರಾ ಜಾಗದಲ್ಲಿ ವಿಶ್ವಕಪ್’ನಲ್ಲಿ ಆಡಲಿರುವ ಭಾರತ ತಂಡವನ್ನು ಸೇರಲು ಮೂವರು ವೇಗಿಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಶಮಿ, ಸಿರಾಜ್ ಹಾಗೂ ದೀಪಕ್ ಚಹರ್ ಪೈಕಿ ಯಾರು ವಿಶ್ವಕಪ್ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಸುಳಿವನ್ನು ಕೋಚ್ ದ್ರಾವಿಡ್ ಬಿಟ್ಟು ಕೊಟ್ಟಿದ್ದಾರೆ. ಇಂದೋರ್’ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದ (India Vs South Africa T20 series) ನಂತರ ಮಾತನಾಡಿದ ರಾಹುಲ್ ದ್ರಾವಿಡ್ ಮೊಹಮ್ಮದ್ ಶಮಿ ಅವರೇ ವಿಶ್ವಕಪ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಪರೋಕ್ಷವಾಗಿ ಹೇಳಿದ್ದಾರೆ.

“ಬುಮ್ರಾಗೆ ಯಾರು ರಿಪ್ಲೇಸ್ಮೆಂಟ್ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಅಕ್ಟೋಬರ್ 15ರವರೆಗೆ ನಮಗೆ ಸಮಯವಿದೆ. ಮೊಹಮ್ಮದ್ ಶಮಿ ಈಗಾಗಲೇ ವಿಶ್ವಕಪ್ ತಂಡದ ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಶಮಿ ಆಡಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಸದ್ಯ ಶಮಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದು, ನಾನು ಅವರ ಫಿಟ್ನೆಸ್ ರಿಪೋರ್ಟ್’ಗಾಗಿ ಕಾಯುತ್ತಿದ್ದೇವೆ. 14-15 ದಿನಗಳ ಕೋವಿಡ್ ನಂತರ ಅವರು ಹೇಗೆ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವರದಿಯನ್ನು ಎದುರು ನೋಡುತ್ತಿದ್ದೇವೆ. ಒಮ್ಮೆ ಫಿಟ್ನೆಸ್ ರಿಪೋರ್ಟ್ ನಮ್ಮ ಕೈ ಸೇರಿದ ನಂತರ ಈ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಳಿಗೆ ಆಯ್ಕೆಯಾಗಿದ್ದ ಅನುಭವಿ ಮೊಹಮ್ಮದ್ ಶಮಿ, ಆಸೀಸ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ಕೋವಿಡ್ ಪಾಸಿಟಿವ್’ಗೆ ಗುರಿಯಾಗಿದ್ದರು. ಈಗಾಗಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಿಗೆ ಅಲಭ್ಯರಾಗಿದ್ದರು. ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಶಮಿ ಪುನಶ್ಟೇತನ ಶಿಬಿರದಲ್ಲಿ ಪಾಲ್ಗೊಂಡಿದ್ದು, ವಿಶ್ವಕಪ್ ಆರಂಭವಾಗುವ ಹೊತ್ತಿಗೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ : AB de Villiers RCB : ಐಪಿಎಲ್ 2023ರಲ್ಲಿ ಆರ್‌ಸಿಬಿ ಪರ ಆಡುತ್ತೆನೆ ಎಂದ ಎಬಿ ಡಿವಿಲಿಯರ್ಸ್

ಇದನ್ನೂ ಓದಿ : Rishabh Pant Birthday : ರಿಷಬ್‌ ಪಂತ್‌ಗೆ ಪ್ಲೈಯಿಂದ ಕಿಸ್‌ ಮೂಲಕ ಶುಭ ಕೋರಿದ ಊರ್ವಶಿ ರೌಟೇಲಾ

Mohamed Shami Replace Jasprit Bumrah in T20 World Cup Squad

Comments are closed.