Winter Season : ಚಳಿಗಾಲದಲ್ಲಿ ಕಾಡುವ ಕೆಮ್ಮು, ಕಫ ಮತ್ತು ಶೀತಕ್ಕೆ ಇಲ್ಲಿದೆ ಸುಲಭ ಪರಿಹಾರ

ಹವಾಮಾನ ಬದಲಾಗುತ್ತಿದ್ದಂತೆ ನಮ್ಮ ದೇಹದ ಆರೋಗ್ಯದಲ್ಲಿ ಕೂಡ ಬದಲಾವಣೆ ಆಗುತ್ತಿರುತ್ತದೆ. ಸದ್ಯ ಚಳಿಗಾಲ(Winter Season) ಪ್ರಾರಂಭವಾಗುತ್ತಿದ್ದಂತೆ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಶೀತ, ಕೆಮ್ಮು ಮತ್ತು ಕಫವು ಕಾಡಲು ಪ್ರಾರಂಭಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಈ ಸಮಸ್ಯೆಯಿಂದ ದೂರವಿರಲು ಬಿಸಿ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸುವುದು ರೂಢಿಸಿಕೊಳ್ಳಬೇಕು. ಅದರ ಜೊತೆಗೆ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಹಾಗೆ ಎಷ್ಟೇ ಎಚ್ಚರಿಕೆ ವಹಿಸಿದ್ದರೂ ಕೆಲವೊಮ್ಮೆ ಕೆಮ್ಮು, ಶೀತ ಮತ್ತು ಕಫದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅಂತಹ ಸಂಧರ್ಭದಲ್ಲಿ ಮನೆಯಲ್ಲೇ ಮಾಡುವ ಔಷಧಿಗಳಿಂದ ಅದರಿಂದ ಗುಣಮುಖರಾಗಬಹುದಾಗಿದೆ. ಅದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಕಾಳು ಮೆಣಸು
  • ಜೀರಿಗೆ
  • ಲವಂಗ
  • ತುಳಸಿದಳ
  • ಪುದೀನ ಎಲೆ
  • ನಾಟಿ ವೀಳ್ಯದೆಲೆ
  • ಒಣ/ಹಸಿ ಶುಂಠಿ
  • ಏಲಕ್ಕಿ
  • ಉಪ್ಪು
  • ನೀರು

ತಯಾರಿಸುವ ವಿಧಾನ :
ಗ್ಯಾಸ್‌ ಆನ್‌ ಮಾಡಿ ಒಂದು ಪಾತ್ರೆಯನ್ನು ಇಟ್ಟು ಅದು ಬಿಸಿ ಆದ ಮೇಲೆ ಒಂದು ಲೋಟ (ಒಂದು ಲೋಟ ನೀರು ಒಂದು ಸಲಕ್ಕೆ) ನೀರನ್ನು ಹಾಕಿಕೊಳ್ಳಬೇಕು. ನೀರನ್ನು ಕುದಿಸಿದ ಮೇಲೆ ಅದಕ್ಕೆ ಒಂದು ವೀಳ್ಯದೆಲೆ, ಹತ್ತರಿಂದ ಹನ್ನೆರಡು ಪುದೀನ ಎಲೆ, ತುಳಸಿಎಲೆ, ಕಾಳುಮೆಣಸು, ಕಾಲು ಟೇಬಲ್‌ ಸ್ಪೂನ್‌ನಷ್ಟು ಜೀರಿಗೆ, ನಾಲ್ಕು ಲವಂಗ, ಎರಡು ಏಲಕ್ಕಿ ಮತ್ತು ಎರಡು ಇಂಚು ಶುಂಠಿ ಹಾಕಿ ದೊಡ್ಡ ಉರಿಯಲ್ಲಿ ಹತ್ತರಿಂದ ಹದಿನೈದು ನಿಮಿಷಗಳ ಚೆನ್ನಾಗಿ ಕುದಿಸಬೇಕು. ಚೆನ್ನಾಗಿ ಕುದಿಸಿದ ನಂತರ ಇದನ್ನು ಒಂದು ಲೋಟಕ್ಕೆ ಸೊಸಿಕೊಳ್ಳಬೇಕು. ಸೊಸಿಕೊಂಡಿರುವ ಕಷಾಯಕ್ಕೆ ಚಿಟಿಕೆ ಉಪ್ಪುನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ಇದನ್ನು ಹಾಗೆ ಕುಡಿಯಲು ಆಗದಿದ್ದರೆ ಸ್ವಲ್ಪ ಬೆಲ್ಲವನ್ನು ಬೆರೆಸಿ ಕುಡಿಬಹುದಾಗಿದೆ. ಕಷಾಯವನ್ನು ಹಾಗೆ ಕುಡಿಯುವುದರಿಂದ ಕೆಮ್ಮು, ಶೀತ ಮತ್ತು ಕಫದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಇದನ್ನು ಜಾಸ್ತಿ ಕೆಮ್ಮು, ಶೀತ ಮತ್ತು ಕಫ ಇರುವವರು ದಿನಕ್ಕೆ ಮೂರು ಬಾರಿ ಮಾಡಿ ಕುಡಿಯುವುದ್ದರಿಂದ ಬೇಗನೆ ಗುಣಮುಖರಾಗುತ್ತಾರೆ. ಬಹಳ ಹಿಂದಿನ ಕಾಲದಿಂದಲೂ ವೀಳ್ಯದೆಲೆಯನ್ನು ಊಟದ ನಂತರ ಹೆಚ್ಚಾಗಿ ತಿನ್ನುತ್ತಾರೆ.

ಇದು ನಾವು ತಿಂದಿರುವ ಆಹಾರವನ್ನು ಜೀರ್ಣಗೊಳಿಸಲು ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ವೀಳ್ಯದೆಲೆ ತಿನ್ನುವುದ್ದರಿಂದ ಹಲ್ಲು ಹಾಳಾಗದಂತೆ ಹಾಗೂ ಒಸಡುಗಳನ್ನು ಬಲಪಡಿಸುತ್ತದೆ. ಬಾಯಿಂದ ಬರುವ ದುರ್ವಾಸನೆಯನ್ನು ಕೂಡ ದೂರ ಮಾಡುತ್ತದೆ. ಪುದೀನ ಸೊಪ್ಪು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಪುದೀನವನ್ನು ಸೇವಿಸುವುದರಿಂದ ಎದೆಯಲ್ಲಿರುವ ಕಫವನ್ನು ಕರಿಗಿಸುತ್ತದೆ. ಮೂಗಿನಲ್ಲಿ ಗಟ್ಟಿಯಾಗಿರುವ ಶೀತ ಕರಗಿಸಿ ಉಸಿರಾಡಲು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿ ಉಂಟಾಗುವ ಅಸ್ತಮಾದಂತಹ ಕಾಯಿಲೆಯಿಂದ ದೂರವಿರಿಸುತ್ತದೆ. ತುಳಸಿ ಎಲೆಯು ಬ್ಯಾಕ್ಟಿರೀಯಾದ ವಿರುದ್ಧ ಹೋರಾಡುವ ಗುಣವಿದ್ದು ನಮ್ಮ ದೇಹದಲ್ಲಿರುವ ಬ್ಯಾಕ್ಟಿರೀಯವನ್ನು ದೂರಗೊಳಿಸುತ್ತದೆ.

ಇದನ್ನೂ ಓದಿ : Hemorrhoids : ಮೂಲವ್ಯಾಧಿಗೆ ಮನೆಯಲ್ಲೇ ಇದೆ ಸುಲಭ ಪರಿಹಾರ

ಇದನ್ನೂ ಓದಿ : Gastric problem Solution : ಗ್ಯಾಸ್ಟ್ರಿಕ್‌ ಸಮಸ್ಯೆಗೆ ಬಾರ್ಲಿ ರಾಮಬಾಣ : ಒಮ್ಮೆ ಟ್ರೈ ಮಾಡಿ

ಇದನ್ನೂ ಓದಿ : Hair Straightening Product : ಹೇರ್‌ ಸ್ಟ್ರೈಟ್ನಿಂಗ್ ಮಾಡಿದ್ರೆ ಮಹಿಳೆಯರಿಗೆ ಗರ್ಭಗೋಶ ಕ್ಯಾನ್ಸರ್

ಕಾಳು ಮೆಣಸು ನಮ್ಮ ಗಂಟಲಿ ಉಂಟಾಗುವ ಕಿರಿಕಿರಿಯನ್ನು ದೂರ ಮಾಡುತ್ತದೆ. ಹಾಗೆ ನಿರಂತರವಾಗಿ ಕೆಮ್ಮುವನ್ನುಆದಷ್ಟು ಬೇಗ ನಿಯಂತ್ರಣಕ್ಕೆ ತರುತ್ತದೆ. ಇನ್ನೂ ಏಲಕ್ಕಿ ಮತ್ತು ಲವಂಗವನ್ನು ಬಿಸಿನೀರಿಗೆ ಹಾಕಿ ಕುಡಿಯುವುದ್ದರಿಂದ ಶೀತ ಮತ್ತು ಕೆಮ್ಮುವನ್ನು ಬೇಗನೆ ಗುಣಪಡಿಸುತ್ತದೆ. ಒಟ್ಟಾರೆ ಮನೆಯಲ್ಲಿ ಮಾಡುವ ಔಷಧಿಗಳು ಯಾವುದೇ ಅಡ್ಡ ಪರಿಣಾಮ ಉಂಟು ಮಾಡದೇ ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.

Here’s an easy remedy for cough, phlegm and cold in winter Season

Comments are closed.