Decoction of oma seed:ಮಕ್ಕಳಲ್ಲಿ ಕಾಡುವ ಜೆಂತು ಹುಳು, ಕ್ರಿಮಿಹುಳುಗಳಿಗೆ ಮನೆಯಲ್ಲೇ ಇದೆ ಔಷಧ

(Decoction of oma seed)ಇತ್ತೀಚಿನ ವರ್ಷ ಮಕ್ಕಳಲ್ಲಿ ಜೆಂತು ಹುಳುಗಳ ಸಮಸ್ಯೆ ಮಕ್ಕಳನ್ನು ಹೆಚ್ಚಾಗಿ ಕಾಡುತ್ತಿದೆ. ಕೇವಲ ಮಕ್ಕಳಲ್ಲಿ ಮಾತ್ರವಲ್ಲದೇ ದೊಡ್ಡವರಲ್ಲೂ ಜಂತು ಹುಳುಗಳು ಕಾಡದೆ ಬಿಡವು. ಜಂತುಹುಳ ಸಮಸ್ಯೆ ಉಂಟಾದ್ರೆ ಮಕ್ಕಳಿಗೆ ಸರಿಯಾಗಿ ಊಟ ಸೇರುವುದಿಲ್ಲ. ವಾಕರಿಕೆಯಿಂದ ಶುರುವಾಗಿ ವಾಂತಿಯು ಆಗುವ ಸಾಧ್ಯತೆಯಿದೆ. ಇನ್ನೂ ಕ್ರಿಮಿಯಿಂದಾಗಿ ತುರಿಕೆಯಂತಹ ಸಮಸ್ಯೆಗಳು ಶುರುವಾಗುತ್ತದೆ. ಈ ಸಮಸ್ಯೆಗೆ ಮನೆಯಲ್ಲಿಯೇ ಔಷಧವನ್ನು ನಾವು ತಯಾರಿಸಿಕೊಳ್ಳಬಹುದಾಗಿದೆ.

(Decoction of oma seed)ನಾವು ದಿನನಿತ್ಯ ಬಳಸುವ ಈ ಒಂದು ಆಹಾರ ಪದಾರ್ಥದಿಂದಲೇ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಅದು ಬೇರಾವುದೂ ಅಲ್ಲ, ಓಮದ ಕಾಳು. ಹೌದು, ಓಮದ ಕಾಳಿನ ಕಷಾಯ ಮಾಡಿ ಕುಡಿಯುವುದರಿಂದ ಮಕ್ಕಳು ಸುಲಭವಾಗಿ ಜಂತುಹುಳಗಳ ಸಮಸ್ಯೆಯಿಂದ ಪಾರಾಗಬಹುದು. ಅಷ್ಟೇ ಅಲ್ಲಾ ಮಕ್ಕಳಲ್ಲಿ ಹೊಟ್ಟೆ ಹಸಿವು ಉಂಟಾಗಿ ಸರಿಯಾಗಿ ಊಟ ಮಾಡುತ್ತಾರೆ. ಹಾಗೆ ಶೀತ, ಜ್ವರದಂತಹ ಆಲರ್ಜಿ ಸಮಸ್ಯೆಯನ್ನು ತಡೆಗಟ್ಟಲು ಇದು ರಾಮಬಾಣದಂತೆ ಕೆಲಸ ಮಾಡುತ್ತದೆ. ಮಕ್ಕಳಲ್ಲಿ ಆಗಾಗ ಕಾಣಿಸಿಕೊಳ್ಳುವ ಹೊಟ್ಟೆ ಉಬ್ಬಸವನ್ನುಕೂಡ ಕಡಿಮೆ ಮಾಡುತ್ತದೆ. ಇನ್ನು ಓಮದ ಕಾಳು ಗ್ಯಾಸ್ಟ್ರಿಕ್‌ ಸಮಸ್ಯೆಗೂ ಕೂಡಲೇ ಪರಿಹಾರವನ್ನು ಕೊಡುತ್ತದೆ.

ಓಮದ ಕಾಳಿನ ಕಷಾಯ ತಯಾರಿಸುವ ವಿಧಾನ :

ಮೊದಲಿಗೆ ಗ್ಯಾಸ್‌ನನ್ನು ಹೊತ್ತಿಸಿ ಒಂದು ಕಾಡಾಯಿಯನ್ನು ಗ್ಯಾಸ್‌ ಮೇಲೆ ಇಡಬೇಕು. ಕಾಡಾಯಿ ಬಿಸಿ ಆದ ಮೇಲೆ ಹಸಿ ಓಮದ ಕಾಳನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಹೀಗೆ ಹುರಿದ ಓಮದ ಕಾಳು ತುಂಬಾ ಕಪ್ಪಾಗಬೇಕು. ಓಮದ ಕಾಳು ಕಪ್ಪಾದ ಮೇಲೆ ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಹಾಕಿದ ಒಂದು ಲೋಟ ನೀರು ನಾಲ್ಕು ಟೇಬಲ್‌ ಸ್ಪೂನ್‌ ಆದ ಮೇಲೆ ತಣಿಸಿ ಮಕ್ಕಳಿಗೆ ಕುಡಿಸಬೇಕು.

ಓಮದ ಕಾಳಿನ ಕಷಾಯವನ್ನು ಬಳಸುವ ಕ್ರಮ :

ಈ ಕಷಾಯವನ್ನು ಹೆಚ್ಚಾಗಿ ಬೆಳಗ್ಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿಎರಡರಿಂದ ನಾಲ್ಕು ಚಮಚ ದೊಡ್ಡ ಮಕ್ಕಳಿಗೆ ಕೊಟ್ಟರೆ ಹೆಚ್ಚು ಸೂಕ್ತವಾಗಿರುತ್ತದೆ. ಹಾಗೆ ಇವರಿಗೆ ವಾರದಲ್ಲಿ ಒಂದು ಬಾರಿ ಕೊಟ್ಟರೆ ಸಾಕು. ಹಾಲುಣಿಸುವ ಮಕ್ಕಳಿಗೆ ಪ್ರತಿದಿನ ಕೊಡುವುದರಿಂದ ಪದೇ ಪದೇ ಶೀತ, ಜ್ವರ ಬರುವುದನ್ನು ತಪ್ಪಿಸಬಹುದು. ಹಾಗೆ ಹೊಟ್ಟೆ ಉಬ್ಬಸವನ್ನು ಕಡಿಮೆಗೊಳಿಸುತ್ತದೆ. ಚಿಕ್ಕ ಮಗುವಿಗೆ ನಾಲ್ಕೈದು ಹನಿಯಷ್ಟು ಕುಡಿಸಿದ್ದರೆ ಸಾಕಾಗುತ್ತದೆ.

ಇದನ್ನೂ ಓದಿ : ಈ ಸಮಸ್ಯೆ ಇರುವವರು ಕಿವಿ ಹಣ್ಣು ತಿನ್ನಲೇಬೇಡಿ

ಇದನ್ನೂ ಓದಿ : ಡೆಂಗ್ಯೂ ದಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ ಈ ಆಹಾರ ಕ್ರಮಗಳು

ಇದನ್ನೂ ಓದಿ : ರಾಸಾಯನಿಕ ಮುಕ್ತ ಕೂದಲು ಬೇಕಾದ್ರೆ ಈ ಟಿಫ್ಸ್‌ ಫಾಲೋ ಮಾಡಿ

ಓಮದಿಂದ ಕಷಾಯ ಮಾತ್ರವಲ್ಲ ಓಮದ ಕಾಳಿನ ಸಾರನ್ನು ಮಾಡಿ ಸೇವನೆ ಮಾಡುತ್ತಾರೆ ಇದನ್ನು ಬಾಣಂತಿಯಂತಿಗೆ, ಅತಿಯಾಗಿ ಭೇದಿಯಾಗುವವರಿಗೂ ಮಾಡಿಕೊಡುವುದು ಸಾಮಾನ್ಯ. ಇನ್ನು ಬಾಣಂತಿಯರು ಮಗುವಿಗೆ ಹಾಲುಣಿಸುವುದರಿಂದ ಓಮದ ಸಾರನ್ನು ಮಾಡಿ ಕುಡಿಯುತ್ತಾರೆ. ಇದರಿಂದ ಬಾಣಂತಿಯರಿಗೆ ಶೀತ, ಜ್ವರ ಬರುವುದಿಲ್ಲ, ಗ್ಯಾಸ್ಟ್ರಿಕ್‌ ಕೂಡ ಉಂಟಾಗುವುದಿಲ್ಲ. ಹಾಗೆ ತಾಯಿಯ ಎದೆ ಹಾಲನ್ನು ಶುದ್ದಗೊಳಿಸುವ ಸಾಮರ್ಥ ಓಮದ ಕಾಳಿಗೆ ಇದೆ. ಹಾಗೆ ಅತಿಯಾಗಿ ಭೇದಿಯಾಗುವವರು ಕುಡಿದರೆ ಆರೋಗ್ಯ ಸರಿಯಾಗುತ್ತದೆ ಎಂದು ಹೇಳಲಾಗುತ್ತಿದೆ.

Home remedies are available for worms and worms in children

Comments are closed.