Nagging Sore Throat Remedies:ಕಾಡುತ್ತಿರುವ ಗಂಟಲು ನೋವಿನಿಂದ ಮುಕ್ತಿ ಪಡೆಯಲು ಈ ಟಿಪ್ಸ್‌ ಅನುಸರಿಸಿ

(Nagging Sore Throat Remedies)ಹವಾಮಾನದ ಬದಲಾವಣೆಯಿಂದಾಗಿ ಆಗಾಗ ಕೆಲವರಲ್ಲಿ ಗಂಟಲು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಅತಿ ಹೆಚ್ಚು ಗಂಟಲು ನೋವು ಕಾಣಿಸುತ್ತದೆ ಇಂತಹ ಸಂದರ್ಭದಲ್ಲಿ ಆಹಾರ ಸೇವಿಸಲು ಕಷ್ಟ . ಗಂಟಲು ನೋವಿನಿಂದ ಬಳಲುತ್ತಿರುವವರು ಈ ಕೆಳಗೆ ಸೂಚಿಸಿದ ಮನೆಮದ್ದನ್ನು ಮಾಡಿ ಕುಡಿಯುವುದರಿಂದ ಗಂಟಲು ನೋವು ಕಡಿಮೆ ಆಗುತ್ತದೆ. ಈ ಮನೆಮದ್ದು ಹೇಗೆ ಮಾಡಿಕೊಳ್ಳಬೇಕು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Nagging Sore Throat Remedies)ಬೇಕಾಗುವ ಸಾಮಾಗ್ರಿಗಳು:
ಗಂಧ
ಬೆಲ್ಲ

ಮಾಡುವ ವಿಧಾನ:
ಒಂದು ಚಮಚದಲ್ಲಿ ಕಾಲು ಚಮಚ ಗಂಧ ಮತ್ತು ಕಾಲು ಚಮಚ ಬೆಲ್ಲ ಮಿಶ್ರಣ ಮಾಡಿಕೊಂಡು ದಿನಕ್ಕೆ ಎರಡು ಮೂರು ಭಾರಿ ಸೇವನೆ ಮಾಡುವುದರಿಂದ ಗಂಟಲು ನೋವಿಗೆ ಪರಿಹಾರ ಸಿಗುತ್ತದೆ. ಸ್ವಲ್ಪ ಪ್ರಮಾಣದ ಗಂಧ ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ ಮಕ್ಕಳಿಗೆ ಕೊಟ್ಟರೆ ಗಂಟಲು ನೋವು ಕಡಿಮೆ ಆಗುತ್ತದೆ.

ಬೇಕಾಗುವ ಸಾಮಾಗ್ರಿಗಳು:
ಶುಂಠಿ
ನಿಂಬೆ ರಸ
ಜೇನು ತುಪ್ಪ
ಬೆಲ್ಲ
ಕಾಳು ಮೆಣಸು
ನೀರು

ಮಾಡುವ ವಿಧಾನ:
ಮೊದಲಿಗೆ ಕುಟ್ಟಣಿಗೆಯಲ್ಲಿ ಕಾಳು ಮೆಣಸನ್ನು ಪುಡಿ ಮಾಡಿಕೊಳ್ಳಬೇಕು ಅದಕ್ಕೆ ಶುಂಠಿಯನ್ನು ಹಾಕಿ ಜಜ್ಜಬೇಕು ನಂತರ ಒಂದು ಪಾತ್ರೆಯಲ್ಲಿ ನೀರನ್ನು ಕಾಯಲು ಇಡಬೇಕು ಅದರಲ್ಲಿ ಗುಳ್ಳೆ ಬರುತ್ತಿದ್ದ ಹಾಗೆ ಜಜ್ಜಿಕೊಂಡ ಕಾಳು ಮೆಣಸು , ಶುಂಠಿ ಮತ್ತು ಬೆಲ್ಲ ಹಾಕಿಕೊಂಡು ಐದರಿಂದ ಹತ್ತು ನಿಮಿಷ ಕುದಿಸಿ ಆ ನೀರನ್ನು ಲೋಟಕ್ಕೆ ಸೊಸಿಕೊಳ್ಳಬೇಕು. ಸೊಸಿಕೊಂಡ ಅರ್ಧಕಪ್‌ ನೀರು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ನಿಂಬೆರಸ,ಜೇನುತುಪ್ಪ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಸೇವನೆ ಮಾಡಿದರೆ ಗಂಟಲು ನೋವು ಮಾಯವಾಗುತ್ತದೆ.

ಇದನ್ನೂ ಓದಿ:Home Remedy For Health : 90 ರೋಗಗಳಿಗೆ ರಾಮಬಾಣ ಈ ಮನೆಮದ್ದು

ಇದನ್ನೂ ಓದಿ:Home Remedies For Toothache:ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಿರಾ? ಇಲ್ಲಿದೆ ಪರಿಹಾರ

ಇದನ್ನೂ ಓದಿ:Toothache Home Remedies : ಹಲ್ಲು ನೋವು, ಹಲ್ಲು ಹುಳುಕು ಸಮಸ್ಯೆಗೆ ಪರಿಹಾರ ಈ 5 ಮನೆಮದ್ದು

ಬೆಚ್ಚಗಿನ ನೀರಿಗೆ ಉಪ್ಪನ್ನು ಬೇರೆಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ಕಡಿಮೆ ಆಗುತ್ತದೆ. ಆದಷ್ಟು ಬಿಸಿ ನೀರನ್ನು ಕುಡಿಯುವುದರಿಂದ ಗಂಟಲು ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಜೇಷ್ಠ ಮಧು ಪುಡಿಯನ್ನು ನೀರಿಗೆ ಮಿಶ್ರಣ ಮಾಡಿ ಕುಡಿದರೆ ಗಂಟಲು ನೋವು ಕಡಿಮೆ ಆಗುತ್ತದೆ. ತುಳಸಿ ಎಲೆಗಳನ್ನು ಬೆಚ್ಚಗಿನ ನೀರಿನಲ್ಲಿ ಹಾಕಿ ಇಟ್ಟುಕೊಂಡು ಬಾಯನ್ನು ಮುಕ್ಕಳಿಸುವುದರಿಂದ ನೋವು ಕಡಿಮೆ ಆಗುತ್ತದೆ. ಜೇನುತುಪ್ಪಕ್ಕೆ ಕಾಳು ಮೆಣಸಿನ ಪುಡಿಯನ್ನು ಮಿಶ್ರಣ ಮಾಡಿಕೊಂಡು ಸೇವನೆ ಮಾಡುವುದರಿಂದ ಗಂಟಲು ನೋವು ಕಡಿಮೆ ಆಗುತ್ತದೆ.

Nagging Sore Throat Remedies Follow these tips to get rid of a nagging sore throat

Comments are closed.