Home Remedy for Cold Sore Throat : ಉರಿಶೀತ, ಗಂಟಲು ಕೆರೆತಕ್ಕೆ ಬಳಸಿ ಮೆಣಸಿನ ಗುಳಿಗೆ

ಹವಾಮಾನ ಬದಲಾವಣೆಯಿಂದಾಗಿ ದೇಹದಲ್ಲಿ ಸಣ್ಣ ಏರುಪೇರು ಸಹಜವಾಗಿರುತ್ತದೆ. (Home Remedy for Cold Sore Throat)ಋತು ಬದಲಾವಣೆಯಿಂದಾಗಿ ಜ್ವರ, ಕೆಮ್ಮು, ನೆಗಡಿಯಂತಹ ಕಾಯಿಲೆಗಳನ್ನು ಹೊತ್ತು ತರುವುದು ಸಹಜವಾಗಿರುತ್ತದೆ. ಅದರಲ್ಲೂ ಉರಿಶೀತದಿಂದಾಗಿ ಗಂಟಲು ಕೆರೆತ ಶುರುವಾಗಿ ಮಾತನಾಡಲು ಕಷ್ಟವಾಗುತ್ತದೆ. ಹಾಗೆ ಏನನ್ನೂ ತಿನ್ನಲು ಕೂಡ ಆಗದೇ ಒಂದು ರೀತಿಯ ಕಿರಿಕಿರಿಯನ್ನುಂಟು ಮಾಡುತ್ತದೆ.

ಇದು ದೊಡ್ಡವರಿಗಿಂತ ಹೆಚ್ಚಾಗಿ ಮಕ್ಕಳನ್ನು ಕಾಡುತ್ತದೆ. ಉರಿಶೀತ ಮಳೆಗಾಲ ಮತ್ತು ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾಯಿಲೆಯಾಗಿದೆ. ಇದು ಬಹಳ ಬೇಗನೆ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆಯಾಗಿದೆ. ಇದು ಹೆಚ್ಚಾಗಿ ಧೂಳಿನಿಂದ ಬರುವಂತಹದಾಗಿದೆ. ಇಂತಹ ಕಿರಿಕಿರಿ ಉರಿಶೀತವನ್ನು ಕಾಳುಮೆಣಸಿನಿಂದ ಗುಣಪಡಿಸಿಕೊಳ್ಳಬಹುದಾಗಿದೆ. ಹಾಗಾದರೆ ಇದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಕುಚ್ಚಲಕ್ಕಿ
  • ಕಾಳುಮೆಣಸು
  • ಲವಂಗ ಪುಡಿ
  • ಒಣಶುಂಠಿ
  • ಓಲೆ ಬೆಲ್ಲ ಅಥವಾ ಬೆಲ್ಲ

ತಯಾರಿಸುವ ವಿಧಾನ :
ಮೊದಲಿಗೆ ಅರ್ಧ ಕಪ್‌ ಕುಚ್ಚಲಕ್ಕಿಯನ್ನು (ಕುಚ್ಚಲಕ್ಕಿಯನ್ನೇ ಬಳಸಿ )ಎರಡರಿಂದ ಮೂರು ಬಾರಿ ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ತೊಳೆದ ಕುಚ್ಚಲಕ್ಕಿಯನ್ನು ಕಾಟನ್‌ ಬಟ್ಟೆಯ ಮೇಲೆ ಫ್ಯಾನ್‌ ಕೆಳಗೆ (ಬಿಸಿಲಿನಲ್ಲಿ ಒಣಗಿಸಬಾರದು)ಒಣಗಿಸಬೇಕು. ಒಣಗಿಸಿದ ಕುಚ್ಚಲಕ್ಕಿಯು ಚೆನ್ನಾಗಿ ಒಣಗಿದ ಮೇಲೆ ಒಂದು ಬಾಣಲೆಗೆ ಹಾಕಿ ಮಧ್ಯಮ ಉರಿಯಲ್ಲಿ ಐದರಿಂದ ಆರು ನಿಮಿಷಗಳವರೆಗೆ ಚೆನ್ನಾಗಿ ಹುರಿಯಬೇಕು. ಹೀಗೆ ಹುರಿದ ಅಕ್ಕಿಯನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಆರಿಸಿಕೊಳ್ಳಬೇಕು. ನಂತರ ಸಣ್ಣ ಉರಿಯಲ್ಲಿ ಅದೇ ಬಾಣಲೆಗೆ ಮೂರು ಚಮಚ ಕಾಳುಮೆಣಸು, ಅರ್ಧ ಚಮಚ ಲವಂಗ ಮತ್ತು ಎರಡು ಚಮಚ ತುರಿದಿರುವ ಒಣ ಶುಂಠಿಯನ್ನು ನಾಲ್ಕರಿಂದ ಐದು ನಿಮಿಷಗಳವರೆಗೆ ಹುರಿಯಬೇಕು.


ನಂತರ ಒಂದು ಮಿಕ್ಸಿ ಜಾರಿಗೆ ಹುರಿದಿರುವ ಕುಚ್ಚಲಕ್ಕಿ, ಕಾಳುಮೆಣಸು, ಲವಂಗ, ಒಣಶುಂಠಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಒಂದು ಬಾಣಲೆಗೆ ಓಲೆ ಬೆಲ್ಲವಾದರೆ ಒಂದು ಅಚ್ಚನ್ನು( ಬೇರೆ ಬೆಲ್ಲವಾದರೆ ಅರ್ಧ ಕಪ್) ಹಾಕಿ ಅದರ ಜೊತೆಯಲ್ಲಿ ಅರ್ಧ ಕಪ್‌ ನೀರನ್ನು ಬೆರೆಸಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ಈ ಗುಳಿಗೆಗೆ ಕಾಳುಮೆಣಸು ಬಳಸಿದ್ದರಿಂದ ಜಾಸ್ತಿ ಖಾರ ಆಗಬಾರದೆಂದು ಬೆಲ್ಲವನ್ನು ಬಳಸುತ್ತಿರುವುದು. ಬೆಲ್ಲ ನೀರಿನಲ್ಲಿ ಸರಿಯಾಗಿ ಕರಗಿದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟುಕೊಂಡ ಮಿಶ್ರಣವನ್ನು ಬೆಲ್ಲದೊಂದಿಗೆ ಚೆನ್ನಾಗಿ ಕಲಸಿಕೊಳ್ಳಬೇಕು.

ಇದನ್ನೂ ಓದಿ : Banana Shake Side Effects : ಮಕ್ಕಳಿಗೆ ಪ್ರತಿದಿನ ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ಕೊಡುವ ಮೊದಲು ಇದನ್ನೊಮ್ಮೆ ಓದಿ…

ಇದನ್ನೂ ಓದಿ : Benefits Of Nutmeg : ಚಿಕ್ಕ ಕಾಯಿಯಾದರೂ ಅದ್ಭುತ ಪ್ರಯೋಜನವಿದೆ ಜಾಯಿಕಾಯಿಯಲ್ಲಿ…

ಇದನ್ನೂ ಓದಿ : Sugarcane Juice : ಮೂತ್ರಕೋಶದ ಸೋಂಕಿನಿಂದ ಬಳಲುತ್ತೀದಿರಾ ? ಹಾಗಾದರೆ ಬಳಸಿ ಕಬ್ಬಿನ ಜ್ಯೂಸ್‌


ನಂತರ ಒಂದು ಪಾತ್ರೆಗೆ ಹಾಕಿ ಚಿಕ್ಕ ಚಿಕ್ಕ ಉಂಡೆಯನ್ನು ಮಾಡಬೇಕು. ಯಾಕೆಂದರೆ ದೊಡ್ಡ ಗುಳಿಗೆ ಅಥವಾ ಉಂಡೆಯನ್ನು ಮಾಡಿದರೆ ತಿನ್ನಲು ಕಷ್ಟವಾಗುತ್ತದೆ. ಈ ಗುಳಿಗೆಯನ್ನು ಮಾಡುವಾಗ ಕೈಗೆ ತುಪ್ಪವನ್ನು ಸವರಿಕೊಂಡು ಮಾಡಿದರೆ ಮಕ್ಕಳು ಇಷ್ಟಪಡುತ್ತಾರೆ. ಈ ಗುಳಿಗೆಯನ್ನು ಮಕ್ಕಳಿಗೆ ಕೊಡುವಾಗ ಒಂದು ಹೊತ್ತಿಗೆ ಅರ್ಧ ಕೊಟ್ಟರೆ ಸಾಕಾಗುತ್ತದೆ. ಮಕ್ಕಳಿಗೆ ದಿನಕ್ಕೆ ಎರಡು ಬಾರಿ ಕೊಟ್ಟರೆ ಸಾಕಾಗುತ್ತದೆ. ಈ ಗುಳಿಗೆಯನ್ನು ದೊಡ್ಡವರು ತಿನ್ನಬಹುದಾಗಿದೆ. ಕಾಳುಮೆಣಸಿನ ಈ ಗುಳಿಗೆಯಿಂದ ಕೆಮ್ಮು, ಕಫ ಕೂಡ ಗುಣವಾಗುತ್ತದೆ. ಇದನ್ನು ತಿನ್ನುವುದರಿಂದ ಗಂಟನಲ್ಲಿ ಆಗುವ ಕಿರಿಕಿರಿಯನ್ನು ಬೇಗನೆ ಗುಣಪಡಿಸುತ್ತದೆ. ಎದೆಯಲ್ಲಿ ಗೀರ್‌ ಎನ್ನುವ ಕಫ ಕೂಡ ಕರಗಿ ಕೆಮ್ಮು ಬೇಗನೆ ಗುಣವಾಗುತ್ತದೆ.

Home Remedy for Cold Sore Throat: Use pepper powder for sore throat.

Comments are closed.