Obesity: ಒಬೆಸಿಟಿಯಿಂದ ಕ್ಯಾನ್ಸರ್‌ ಬರತ್ತಾ; ದೇಹದ ತೂಕ ಹೆಚ್ಚಾದರೆ ಆಗುವುದಾದರೂ ಏನು…

ಒಬೆಸಿಟಿ (Obesity) ಈಗ ಒಂದು ಸಾಮಾನ್ಯ ಖಾಯಿಲೆಯಾಗಿದೆ. ದೇಹದಲ್ಲಿ ತೂಕ ಹೆಚ್ಚಾಗಿ ಅದು ಬೊಜ್ಜು ಅಥವಾ ಒಬೆಸಿಟಿಗೆ ಕಾರಣವಾಗುತ್ತದೆ. ತೂಕ ಹೆಚ್ಚಾಗುವುದಕ್ಕೆ ಜೀವನಶೈಲಿಯಲ್ಲಾದ (Lifestyle) ಬದಲಾವಣೆಗಳೇ ಕಾರಣ. ಅತಿಯಾಗಿ ಸ್ನಾಕ್ಸ್‌ ತಿನ್ನುವುದು, ಚಟುವಟಿಕೆ ಅಥವಾ ವ್ಯಾಯಮಗಳಿಲ್ಲದಿರುವ ಜೀವನ, ಇವೆಲ್ಲವೂ ಒಬೆಸಿಟಿಗೆ ದಾರಿ ಮಾಡಿಕೊಡುತ್ತದೆ. ಒಬೆಸಿಟಿಯಿಂದ ಗಂಭೀರ ಖಾಯಿಲೆಗಳ ಸಂಭವಿಸಬಹುದು. ಅದರಲ್ಲಿ ದೀರ್ಘಕಾಲದ ಕೆಲವು ಖಾಯಿಲೆಗಳು ಸೇರಿವೆ. ಡಯಾಬಿಟಿಸ್‌, ಅಧಿಕ ರಕ್ತದೊತ್ತಡ, ಕಾರ್ಡಿಯೋವೆಸ್ಕ್ಯುಲಾರ್‌ ಡಿಸೀಸ್, ಪಾರ್ಶವಾಯು, ಮತ್ತು 13 ಬಗೆಯ ಕ್ಯಾನ್ಸರ್‌ಗಳು ಬರಬಹುದು. ಹಾಗಾದರೆ, ಅತಿ ತೂಕದಿಂದ ಉಂಟಾಗುವ ಕ್ಯಾನ್ಸರ್‌ಗಳು ಯಾವವು? ಇಲ್ಲಿದೆ ಓದಿ.

ಒಬೆಸಿಟಿಯಿಂದ ಬರುವು ಕ್ಯಾನ್ಸರ್‌ ಖಾಯಿಲೆಗಳು:

ದೇಹದಲ್ಲಿ ಸಂಗ್ರಹಣೆಯಾಗುವ ಅಧಿಕ ಕೊಬ್ಬು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅದು ಸಕ್ರೀಯವಾಗಿ, ಉಳಿದ ಭಾಗಗಳಿಗೆ ಸಂಕೇತವನ್ನು ಕಳುಹಿಸುತ್ತದೆ. ಈ ಸಂಕೇತಗಳು ದೇಹದಲ್ಲಿರುವ ಜೀವಕೋಶಗಳನ್ನು ವಿಭಜಿಸುವಂತೆ ಮಾಡಬಹುದು. ಅದು ಕ್ಯಾನ್ಸರ್‌ಗೆ ಕಾರಣವಾಗಬಹುದು.

  • ಸ್ತನ ಕ್ಯಾನ್ಸರ್ (ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ)
  • ಕೊಲೊನ್ ಮತ್ತು ಗುದನಾಳದ ಕ್ಯಾನ್ಸರ್
  • ಅನ್ನನಾಳದ ಕ್ಯಾನ್ಸರ್ (ಅಡೆನೊಕಾರ್ಸಿನೋಮ)
  • ಪಿತ್ತಕೋಶದ ಕ್ಯಾನ್ಸರ್
  • ಕಿಡ್ನಿ ಕ್ಯಾನ್ಸರ್
  • ಯಕೃತ್ತಿನ ಕ್ಯಾನ್ಸರ್
  • ಮೆನಿಂಜಿಯೋಮಾ (ಮೆದುಳನ್ನು ಆವರಿಸಿರುವ ಪೊರೆಗಳ ಕ್ಯಾನ್ಸರ್)
  • ಬಹು ಮೈಲೋಮಾ
  • ಅಂಡಾಶಯದ ಕ್ಯಾನ್ಸರ್
  • ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್
  • ಹೊಟ್ಟೆಯ ಕ್ಯಾನ್ಸರ್
  • ಥೈರಾಯ್ಡ್ ಕ್ಯಾನ್ಸರ್
  • ಗರ್ಭಾಶಯದ ಕ್ಯಾನ್ಸರ್

ಇದನ್ನೂ ಓದಿ : Millet health benefits : ಮಧುಮೇಹ, ಹೃದಯರಕ್ತನಾಳ ಆರೋಗ್ಯಕ್ಕೆ ರಾಗಿ ರಾಮಬಾಣ

ಕೊಬ್ಬಿನ ಕೋಶ ಅಥವಾ ಫ್ಯಾಟ್‌ ಸೆಲ್‌ಗಳಿಂದ ಬಿಡುಗಡೆಯಾದ ಸಂಕೇತಗಳಿಂದಾಗುವ ಪರಿಣಾಮಗಳು :

ಹಾರ್ಮೋನ್‌ಗಳ ಬೆಳವಣಿಗೆ :
ದೇಹದಲ್ಲಿ ಶೇಖರಣೆಯಾದ ಅತಿಯಾದ ಕೊಬ್ಬು ಹಾರ್ಮೋನ್‌ ಬೆಳವಣಿಗೆಯ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಇದು ಜೀವಕೋಶಗಳನ್ನು ಹೆಚ್ಚೆಚ್ಚು ವಿಭಜಿಸಲು ಹೇಳುತ್ತದೆ. ಇದರಿಂದ ಕ್ಯಾನ್ಸರ್‌ ಕೋಶಗಳ ಅಭಿವೃದ್ಧಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಈಸ್ಟ್ರೊಜಿನ್‌ ಹಾರ್ಮೋನ್‌ಗಳ ಬೆಳವಣಿಗೆ :
ಇದು ಹೆಚ್ಚಾಗಿ ಋತುಬಂಧದ ನಂತರ ಕೊಬ್ಬಿನ ಕೋಶಗಳು ಈಸ್ಟ್ರೊಜಿನ್‌ ಹಾರ್ಮೋನ್‌ ಅನ್ನು ಉತ್ಪಾದಿಸುತ್ತವೆ. ಇದು ಸ್ತನ ಮತ್ತು ಗರ್ಭಾಶಯದಲ್ಲಿನ ಜೀವಕೋಶಗಳನ್ನು ಹೆಚ್ಚಾಗಿ ವಿಭಜಿಸುತ್ತದೆ. ಇದು ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸುತ್ತದೆ.

ಉರಿಯೂತ :
ದೇಹದಲ್ಲಿ ಕೊಬ್ಬಿನ ಕೋಶಗಳು ಇದ್ದಾಗ, ಹೆಚ್ಚಾಗಿ ಪ್ರತಿರಕ್ಷಣಾ ಕೋಶಗಳು ಸತ್ತ ಕೊಬ್ಬಿನ ಕೋಶಗಳನ್ನು ತೆಗೆದುಹಾಕಲು ಅಲ್ಲಿಗೆ ಹೋಗುತ್ತವೆ. ಇದು ಉರಿಯೂತಕ್ಕೆ ಕಾರಣವಾಗಬಹುದು. ಇದು ಜೀವಕೋಶಗಳನ್ನು ಹೆಚ್ಚು ವೇಗವಾಗಿ ವಿಭಜಿಸಲು ಕಾರಣವಾಗುತ್ತದೆ. ಕಾಲಾನಂತರದಲ್ಲಿ, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಇವು ವಿಜ್ಞಾನಿಗಳು ಇಲ್ಲಿಯವರೆಗೆ ಗುರುತಿಸಿರುವ ಕ್ಯಾನ್ಸರ್‌ ತರುವ ಪ್ರಮುಖ ಮಾರ್ಗಗಳಾಗಿವೆ. ದೇಹದಲ್ಲಿ ಹೆಚ್ಚಾದ ಕೊಬ್ಬು (ಒಬೆಸಿಟಿ) ಕ್ಯಾನ್ಸರ್‌ಗೆ ಹೇಗೆಲ್ಲಾ ಕಾರಣವಾಗಬಹುದು ಎಂದು ಕಂಡು ಹಿಡಿಯಲು ಸಂಶೋಧನೆಗಳು ಮುಂದುವರಿಯುತ್ತಲೇ ಇದೆ.

(ಸೂಚನೆ : ಲೇಖನದಲ್ಲಿ ಉಲ್ಲೇಖಿಸಲಾದ ಸೂಚನೆ ಮತ್ತು ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ)

ಇದನ್ನೂ ಓದಿ : Millet Biscuits Recipe:ಆರೋಗ್ಯಕರ ಟೇಸ್ಟಿ ರಾಗಿ ಬಿಸ್ಕತ್ತು ಮಾಡುವ ವಿಧಾನ ತಿಳಿದುಕೊಳ್ಳಿ


(How Obesity causes cancer. Do you know 13 different types of cancer which are caused by weight)

Comments are closed.