ಐಸ್-ಫೇಶಿಯಲ್ ಮಾಡುವ ಮುನ್ನ ಹುಷಾರ್‌ ! ಈ ಸಮಸ್ಯೆಗಳು ಕಾಡಬಹುದು ಎಚ್ಚರ

(Ice-facial side effect) ಹೊಳೆಯುವ, ಸುಂದರವಾದ, ಆಕರ್ಷಕ ತ್ವಚೆಗಾಗಿ ಏನೆಲ್ಲಾ ಕಸರತ್ತು ಮಾಡುತ್ತಾರೆ. ನಿಯಮಿತವಾಗಿ ಪಾರ್ಲರ್‌ಗಳಿಗೆ ಭೇಟಿ ನೀಡುವುದು, ದುಬಾರಿ ಬೆಲೆಯ ಕ್ರೀಮ್‌ಗಳನ್ನು ಹಚ್ಚಿಕೊಳ್ಳುವುದನ್ನು ಮಾಡುತ್ತಾರೆ. ಇದರ ಜೊತೆಗೆ ಮನೆಯಲ್ಲೇ ಇರುವಂತಹ ಕೆಲವು ಪದಾರ್ಥಗಳನ್ನು ಕೂಡ ಬಳಸುತ್ತಾರೆ. ಅಂತೆಯೇ ಮನೆಯಲ್ಲೇ ಸಿಗುವ ಐಸ್‌ ಕ್ಯೂಬ್‌ ಕೂಡ ಒಂದು. ಐಸ್‌ ಕ್ಯೂಬ್‌ ಬಳಸುವುದರಿಂದ ತಣ್ಣನೆಯ ಉಷ್ಣತೆಯು ಚರ್ಮದ ಅಡಿಯಲ್ಲಿ ರಕ್ತವನ್ನು ಹೆಚ್ಚಿಸಲು ಪ್ರೋತ್ಸಾಹಿಸುತ್ತದೆ. ಜೊತೆಗೆ ಇದು ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ.

ಹೀಗಾಗಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಅನೇಕರು ಐಸ್-ಫೇಶಿಯಲ್ ಮೊರೆ ಹೋಗುತ್ತಾರೆ. ಫೇಶಿಯಲ್ ಐಸಿಂಗ್ ನಿಮ್ಮ ತ್ವಚೆಯ ಆರೈಕೆಗೆ ಸುರಕ್ಷಿತ, ಅಗ್ಗದ ಮತ್ತು ನೇರವಾದ ವಿಧಾನವಾಗಿದ್ದರೂ ಕೂಡ ಇದರಿಂದ ಕೆಲವು ಅಡ್ಡಪರಿಣಾಮಗಳನ್ನು ಸಹ ಎದುರಿಸಬೇಕಾಗಬಹುದು. ಶೀತ ಚಿಕಿತ್ಸೆಯ ಪರಿಣಾಮಗಳು ನಿರ್ದಿಷ್ಟವಾಗಿ ದೀರ್ಘಕಾಲ ಉಳಿಯುವುದಿಲ್ಲ. ವಾಸ್ತವದಲ್ಲಿ, ಮುಖಕ್ಕೆ ಐಸ್ ಕ್ಯೂಬ್‌ ಗಳನ್ನು ಬಳಸುವುದರಿಂದ ಅನೇಕ ಪ್ರಯೋಜನಗಳ ಜೊತೆಗೆ ಅನಾನುಕೂಲಗಳು ಕಾಣ ಸಿಗುತ್ತವೆ. ಆಗಾಗ್ಗೆ ಐಸ್‌ ಕ್ಯೂಬ್‌ ಬಳಸಿದರೆ ಚರ್ಮಕ್ಕೆ ಹಾನಿಯುಂಟಾಗುವ ಸಾಧ್ಯತೆಗಳು ಇವೆ.

ಹಾಗಿದ್ದರೆ ಚರ್ಮದ ಮೇಲೆ ಐಸ್‌ ಕ್ಯೂಬ್‌ ಬಳಕೆಯಿಂದ ಆಗುವ ಅಡ್ಡ ಪರಿಣಾಮಗಳೇನು ಇಲ್ಲಿದೆ ಮಾಹಿತಿ.

ಸೂಕ್ಷ್ಮ ಚರ್ಮಕ್ಕೆ ಹಾನಿ: ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ನಿಮ್ಮ ಚರ್ಮದ ಮೇಲೆ ನೇರವಾಗಿ ಐಸ್ ತುಂಡುಗಳನ್ನು ಬಳಸುವುದನ್ನು ತಪ್ಪಿಸಿ. ಇದು ನಿಮ್ಮ ಸೂಕ್ಷ್ಮ ಚರ್ಮದ ಮೇಲೆ ಪ್ರತಿಕೂಲ ಸಮಸ್ಯೆಯನ್ನು ಬೀರಬಹುದು. ಅಲ್ಲದೇ ಚರ್ಮವು ಒಣಗಬಹುದು ಮತ್ತು ಕಿರಿಕಿರಿಗೊಳ್ಳಬಹುದು.

ರಕ್ತದ ಹರಿವು ದುರ್ಬಲಗೊಳ್ಳುತ್ತದೆ: ಚರ್ಮದ ಮೇಲೆ ಐಸ್ ತುಂಡುಗಳನ್ನು ಬಳಸುವುದರಿಂದ ಚರ್ಮ ಶೀತಗೊಳ್ಳುತ್ತದೆ. ಈ ಕಾರಣ ಚರ್ಮದಲ್ಲಿನ ರಕ್ತದ ಹರಿವು ದುರ್ಬಲಗೊಳ್ಳುತ್ತದೆ.

ತಲೆನೋವು ಉಂಟಾಗಬಹುದು: ನೀವು ಬಿರು ಬಿಸಿಲಿನಲ್ಲಿ ಓಡಾಡಿ ಮನೆಗೆ ಪ್ರವೇಶಿಸಿದಾಗ ತಾಪಮಾನವು ಬದಲಾಗುತ್ತದೆ. ಈ ವೇಳೆಯಲ್ಲಿ ನೀವು ಐಸ್ ಅನ್ನು ಬಳಸಿದರೆ ಅದು ನಿಮ್ಮ ಕ್ಯಾಪಿಲ್ಲರಿಗಳನ್ನು ಹಾನಿಗೊಳಿಸುತ್ತದೆ ಮತ್ತು ತಲೆನೋವನ್ನು ಉಂಟುಮಾಡಬಹುದು ಮತ್ತು ನಿಮ್ಮ ಚರ್ಮವನ್ನು ಕೆರಳಿಸಬಹುದು.

ಇದನ್ನೂ ಓದಿ : ಸೆಕೆಗಾಲದಲ್ಲಿ ಉಂಟಾಗುವ ಗುಳ್ಳೆಗಳಿಗೆ ತೊಂಡೆಸೊಪ್ಪು ರಾಮಬಾಣ

ಐಸ್ ಕ್ಯೂಬ್‌ಗಳು ಕೇವಲ ನೀರಿನಿಂದ ರೂಪುಗೊಳ್ಳಬೇಕಾಗಿಲ್ಲ ಅವುಗಳನ್ನು ಹಾಲು, ಹಸಿರು ಚಹಾ, ನಿಂಬೆ, ಹಣ್ಣಿನ ರಸಗಳು ಮತ್ತು ಪುದೀನ ಮತ್ತು ಥೈಮ್ನಂತಹ ಗಿಡಮೂಲಿಕೆಗಳಿಂದ ಕೂಡ ತಯಾರಿಸಬಹುದು. ನಾವು ಐಸ್ ಕ್ಯೂಬ್‌ ಗೆ ಪೋಷಕಾಂಶಗಳನ್ನು ಸೇರಿಸಿದಾಗ ನಮ್ಮ ಚರ್ಮವು ಬಿಗಿಯಾಗುತ್ತದೆ ಮತ್ತು ರಕ್ತದ ಹರಿವು ಹೆಚ್ಚಾಗುತ್ತದೆ.

Ice-facial side effect: Be careful before doing ice-facial! Be aware that these problems can be annoying

Comments are closed.