Insomnia : ನಿದ್ರಾಹೀನತೆ ನಿಮ್ಮನ್ನು ಕಾಡುತ್ತಿದೆಯೇ ? ಹಾಗಿದ್ದರೆ ಹೀಗೆ ಮಾಡಿ

(Insomnia) ನಿದ್ರೆ ಪ್ರತಿಯೊಬ್ಬ ಮಾನವನ ಸಹಜ ಕ್ರಿಯೆ. ನಿದ್ರೆ ಎಂಬುದು ಮಾನವನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ತುಂಬಾ ಅವಶ್ಯಕವಾದದ್ದು. ಸಾಮಾನ್ಯವಾಗಿ ಮನುಷ್ಯನಿಗೆ ಕನಿಷ್ಠ 5-6 ಗಂಟೆ ನಿದ್ರೆ ಅವಶ್ಯಕವಾದದ್ದು. ಆದರೆ ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿ ಎಲ್ಲರಲ್ಲೂ ನಿದ್ರೆಯ ಅಭಾವವಿರುವುದನ್ನು ಕಾಣಬಹುದು. ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಪ್ರತಿಯೊಬ್ಬರಲ್ಲೂ ನಿದ್ರಾಹೀನತೆ(Insomnia) ಸಮಸ್ಯೆ ಕಾಡುತ್ತಿರುವುದನ್ನು ನಾವು ನೋಡಬಹುದು.

ನಿದ್ರಾಹೀನತೆಗೆ(Insomnia) ಮುಖ್ಯ ಕಾರಣಗಳು :

ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೇ ಇರುವುದು ನಿದ್ರಾಹೀನತೆಗೆ ಒಂದು ಮುಖ್ಯ ಕಾರಣ. ಅತಿಯಾದ ಟಿ, ಕಾಫಿ ಸೇವನೆಯಿಂದ, ಶೀತ ಪದಾರ್ಥ (ಐಸ್ಕ್ರೀಮ್, ಜ್ಯೂಸು ಇತ್ಯಾದಿ )ಗಳನ್ನು ಸೇವನೆ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆ ಕಾಡಬಹುದು. ಇನ್ನೂ ಕೋಪ, ಅಳು ಹಾಗೆ ಉದ್ವೇಗ ವನ್ನು ನಿಯಂತ್ರಣ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆ ಅತಿಯಾಗಿ ಕಾಡಬಹುದು. ಮಹಿಳೆಯರಿಗೆ ಋತುಚಕ್ರ ನಿಂತವರಲ್ಲಿ ಈ ಸಮಸ್ಯೆ ಕಾಡುವ ಸಂಭವವಿದೆ. ಈ ನಿದ್ರಾಹೀನತೆಯು ಒಂದು ನ್ಯೂರೋಲಾಜಿಕಲ್ ಡಿಸೋರ್ಡರ್ ಅಂತಾನೆ ಹೇಳಬಹುದು.

ಇದನ್ನೂ ಓದಿ : Archana Joyis Photoshoot : ದೀಪಾವಳಿ ಪ್ರಯುಕ್ತ ಹೊಸ ಫೋಟೋಶೂಟ್ – ಬೆಳಕಿನ ನಡುವೆ ಕಂಗೊಳಿಸಿದ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್

ನಿದ್ರಾಹೀನತೆಯ ಲಕ್ಷಣಗಳು :

ನಿದ್ರೇ ಸರಿಯಾಗಿ ಆಗದೆ ಇದ್ದಲ್ಲಿ ಮಾನಸಿಕವಾಗಿ ಕಿರಿ ಕಿರಿ ಉಂಟಾಗುವುದು, ದೇಹದಲ್ಲಿ ಅತಿಯಾದ ಆಯಾಸದಿಂದಾಗಿ ಕೆಲಸದ ಕಡೆ ಗಮನ ಕೊಡಲು ಆಗದೆ ಇರುವುದು, ನಿಧಾನವಾಗಿ ದೇಹ ಕ್ಷೀಣಿಸುವುದು, ಹಾಗೆ ನಿದ್ರಾಹೀನತೆಯಿಂದ ಹೆಣ್ಣುಮಕ್ಕಳಲ್ಲಿ ಸಂತಾನದ ತೊಂದರೆ( ಮಕ್ಕಳು ಆಗದೆ ಇರುವುದು )ಯಾಗುವ ಸಾಧ್ಯತೆಗಳು ಕೂಡ ಇವೆ.

ಇದನ್ನೂ ಓದಿ : A hat-trick hero : ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಮಿಂಚಲಿದ್ದಾರೆ ಹ್ಯಾಟ್ರಿಕ್ ಹೀರೋ ; ತೆಲುಗು ನಿರ್ದೇಶಕ ಕಾರ್ತಿಕ್ ಅದ್ವೈತ್ ಚಿತ್ರಕ್ಕೆ ಗ್ರೀನ್ ಸಿಗ್ನಲ್

ನಿದ್ರಾಹೀನತೆ ತಡೆಯಲು ಸುಲಭ ಉಪಾಯ :

ಮಲಗುವ ಒಂದು ಗಂಟೆಯ ಮುಂಚೆ ಟಿವಿ ಮೊಬೈಲ್ ಬಳಕೆಯನ್ನು ಮಾಡದೇ ಇರುವುದು ಹಾಗೂ ಅತಿಯಾಗಿ ಟಿ ಕಾಫಿ ಸೇವನೆ ಮಾಡುವುದನ್ನು ನಿಲ್ಲಿಸುವುದು ಉತ್ತಮ. ಮಲಗುವ ಮುನ್ನ ಬಿಸಿನೀರಿನಿಂದ ಸ್ನಾನ ಮಾಡಿದರೆ ಹಾಗೂ ತಲೆ ಮತ್ತು ಕಾಲಿಗೆ ಮಸಾಜ್ ಮಾಡಿದರೆ ಒಳ್ಳೆಯ ನಿದ್ದೆ ಬರುವುದರಲ್ಲಿ ಬೇರೆ ಮಾತಿಲ್ಲ. ಮುಖ್ಯವಾಗಿ ನೀವು ಮಲಗುವ ಕೋಣೆ ಪೂರ್ತಿಯಾಗಿ ಕತ್ತಲೆ ಇದ್ದರೆ ಮಾತ್ರ ನಿಮಗೆ ಸಂಪೂರ್ಣ ನಿದ್ದೆ ಆಗಲು ಸಾಧ್ಯ.

ಇದನ್ನೂ ಓದಿ : labourers bludgeon jobless friend:500 ರೂಪಾಯಿಗಾಗಿ ಶುರುವಾದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ

ನಿದ್ರಾಹೀನತೆ ನಿವಾರಣೆಗೆ ಕೆಲವು ಸುಲಭವಾದ ಮನೆಮದ್ದುಗಳು ಈ ಕೆಳಗಿನಂತಿವೆ.

  • ಮಲಗುವ ಮೊದಲು ಒಂದು ಲೋಟ ಎಮ್ಮೆ ಹಾಲಿಗೆ ಒಂದು ಚಮಚದಷ್ಟು ಬಾದಾಮಿ ಪುಡಿಯನ್ನು ಸೇರಿಸಿ ಕುಡಿದರೆ ನಿದ್ರೆ ಬರುತ್ತದೆ.
  • ಒಂದು ಲೋಟ ಬಿಸಿ ಹಾಲಿಗೆ ಅಶ್ವಗಂಧದ ಚೂರಣವನ್ನು ಸೇರಿಸಿ ಕುಡಿದರೆ ಸ್ವಾಭಾವಿಕವಾಗಿ ನಿದ್ರೆ ಬರುತ್ತದೆ.
  • ಒಂದು ಏಲಕ್ಕಿ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಅದಕ್ಕೆ ಹುರಿದು ನುಣ್ಣಗೆ ರುಬ್ಬಿ ಪುಡಿ ಮಾಡಿದ ಜೀರಿಗೆ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಊಟ ಆದ ನಂತರ ಹಾಗೂ ಮಲಗುವ ಮೊದಲು ಪ್ರತಿದಿನ ಸೇವಿಸಿದರೆ ನಿದ್ರಾಹೀನತೆಯನ್ನು ಸುಲಭವಾಗಿ ತಡೆಯಬಹುದು.
  • ಬ್ರಾಹ್ಮೀ, ಜಾತಮಾನ್ಸಿ, ಶಂಕಪುಷ್ಪ ಈ ರೀತಿಯ ಗಿಡಮುಲಿಕೆಗಳನ್ನು ಬಳಸಿ ಕಷಾಯ ಮಾಡಿ ಕುಡಿಯುವುದರಿಂದ ನಿದ್ರಾಹೀನತೆಯನ್ನು ತಡೆಗಟ್ಟಬಹುದು.

(Insomnia) Sleep is a natural function of every human being. Sleep is very essential for human physical and mental development. Generally, a human being needs at least 5-6 hours of sleep. But recent surveys show that sleep deprivation is common among all. From children to the elderly, we can see that insomnia is a problem for everyone.

Comments are closed.