Isabgol Health Benefits : ದೇಹದ ತೂಕ ಇಳಿಸಲು ಇಸಾಬ್‌ಗೋಲ್ ಬಳಕೆ ಅತ್ಯುತ್ತಮ; ಇನ್ನೂ ಉಂಟು ಪ್ರಯೋಜನ

ಉತ್ತಮ ಆರೋಗ್ಯವನ್ನು ಪಡೆಯಲು ನಾವು ಅನುಸರಿಸುವ ದಾರಿಗಳು ಹಲವು. ಯಾವುದೋ ವಿಡಿಯೋ ನೋಡಿಕೊಂಡು, ಯಾರೋ ಹೇಳಿದರೆಂದು ಏನೇನೋ ಸೇವಿಸುತ್ತೇವೆ. ಅವು ಆರೊಗ್ಯವನ್ನು ಇನ್ನಷ್ಟು ಕೆಡಿಸುವ ಸಾಧ್ಯತೆಯೂ ಇರುತ್ತದೆ. ಆದಸರೆ ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳು ಆರೋಗ್ಯಕ್ಕೆ ಹಾನಿಮಾಡದೇ ಆರೊಗ್ಯ ಕಾಪಾಡಬಲ್ಲವು. ಅದರಲ್ಲಿ ಇಸಾಬ್‌ಗೋಲ್ (Isabgol Health Benefits) ಅತಿಮುಖ್ಯವಾದುದು. ಅಂತಹ ಸರಳ ಆರೋಗ್ಯ ಸೂತ್ರ ಇಸಾಬ್‌ಗೋಲ್‌ನಲ್ಲಿದೆ. ನಮ್ಮ ಅಡುಗೆ ಮನೆಯಲ್ಲಿಯೆ (Kichen Health Tips) ಇರುವ ಇಸಾಬ್‌ಗೋಲ್ ದೇಹಕ್ಕೆ ಹಿತವನ್ನುಂಟು ಮಾಡಬಲ್ಲದು. ತಪ್ಪದೇ ಓದಿ  ನಿಮ್ಮ ಕುಟುಂಬ ವೈದ್ಯರ ಬಳಿಯೂ ಸಲಹೆ ಪಡೆಯಿರಿ.

‘ಪ್ಲಾಂಟಗೋ ಓವಾಟಾ’ ಬೀಜಗಳಿಂದ ಪಡೆಯಲಾಗುವ ಇಸಾಬ್ಗೋಲ್‌ನಲ್ಲಿ ಅಧಿಕವಾಗಿ ನಾರಿನಂಶ ಇರುತ್ತದೆ. ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಮೇಧೋಜೀರಕ ಗ್ರಂಥಿ, ಹೃದಯ ಮತ್ತು ಕರುಳಿನ ಆರೋಗ್ಯವನ್ನು  ಸುಸ್ಥಿತಿಯಲ್ಲಿ ಇರಿಸುತ್ತದೆ.ಇದು ಪುಡಿಯ ರೂಪದಲ್ಲಿ ಅಥವಾ ಕ್ಯಾಪ್ಸೂಲ್‌ನಲ್ಲಿ ಲಭ್ಯವಿದೆ. ರಕ್ತದಲ್ಲಿನ ಗ್ಲುಕೋಸ್‌ ಅಂಶವನ್ನು ನಿಯಂತ್ರಿಸುವ ಕಾರಣ ಮಧುಮೇಹಿಗಳಿಗೆ ಕೊಲೆಸ್ಟ್ರಾಲ್‌, ಟ್ರೈಗ್ಲಿಸರೈಡ್‌ ಅನ್ನು ತಗ್ಗಿಸುವುದರಿಂದ ಹೃದ್ರೋಗಿಗಳಿಗೂ ಇದು ಒಳ್ಳೆಯದು.

ಕೊಲೊನ್‌ನನ್ನು ಶುದ್ಧಗೊಳಿಸುವ ಗುಣ ಇಸಾಬ್ಗೋಲ್‌ಗೆ ಇದೆ.ಇದರಿಂದ ದೇಹದಲ್ಲಿ ಕೊಬ್ಬು ಹೆಚ್ಚುವುದನ್ನು ತಡೆಯುತ್ತದೆ.

ವಯಸ್ಕರು ತಮ್ಮ ದೇಹಾರೋಗ್ಯವನ್ನು ಗಮನಿಸಿಕೊಂಡು ದಿನಕ್ಕೆ ಒಂದೆರಡು ಸಾರಿ ಇಸಾಬ್ಗೋಲ್‌ ಅನ್ನು ತೆಗೆದುಕೊಳ್ಳಬಹುದು. ಇದರ ಪುಡಿಯನ್ನು ನೀರಿನಲ್ಲಿ ಅಥವಾ ಹಣ್ಣಿ ರಸದ ಜತೆಗೆ ಸೇವಿಸಬಹುದು. ದೀರ್ಘಕಾಲದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ಗರ್ಭಿಣಿಯರು ಇದನ್ನು ತೆಗೆದುಕೊಳ್ಳುವುದಕ್ಕೂ ಮುನ್ನ ವೈದ್ಯರನ್ನು ಕಾಣುವುದು ಒಳಿತು.

ಕರಗದ ಮತ್ತು ಕರಗುವ ಎರಡೂ ಮಾದರಿಯ ನಾರಿನಂಶವನ್ನು ಇಸಾಬ್ಗೋಲ್‌ ಹೊಂದಿದೆ. ಇದರಿಂದ ನೀರನ್ನು ಹೀರಿಕೊಳ್ಳುವ ಗುಣ ಇದಕ್ಕಿದೆ. ಹೀಗಾಗಿ ಜಠರಗರುಳನ್ನು ಸ್ವಚ್ಛವಾಗಿ ಇರಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇದು, ದೇಹಕ್ಕೆ ತ್ರಾಣ ನೀಡುತ್ತದೆ.

ಕಂದಕ್ಕಿ (ಬ್ರೌನ್‌ ರೈಸ್‌), ತರಕಾರಿ ಜ್ಯೂಸ್‌ಗಳು ದೇಹದ ತೂಕ ಇಳಿಸಲು ಸಹಕಾರಿ. ಇದೇ ರೀತಿ ಸಿರಿಧಾನ್ಯದ ಮಾದರಿಯಲ್ಲಿ ಇರುವ ಇಸಾಬ್ಗೋಲ್‌ (ಸೈಲಿಯಮ್‌ ಹಸ್ಕ್‌) ಬಳಕೆಯು ತೂಕವನ್ನು ಕಡಿಮೆ ಮಾಡುತ್ತದೆ.

ಕ್ಯಾಲೋರಿಗಳನ್ನು ಕರಗಿಸುವುದರಿಂದ ತೂಕವನ್ನೂ ಗಣನೀಯವಾಗಿ ಇಳಿಸುತ್ತದೆ. ಇಸಾಬ್ಗೋಲ್‌ ಬೇಗ ಜೀರ್ಣವಾಗುವುದಿಲ್ಲ ಹೀಗಾಗಿ ಹೊಟ್ಟೆ ತುಂಬಿದಂತೆ ಇರುತ್ತದೆ. ಇದರಿಂದ ಬೇಗ ಹಸಿವಾಗುವುದಿಲ್ಲ.

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

(Isabgol Health Benefits for weight loss and heat problems)

Comments are closed.