Mint Chutney:ಪುದೀನಾ ಚಟ್ನಿ ರುಚಿಗಷ್ಟೇ ಅಲ್ಲಾ, ಆರೋಗ್ಯಕ್ಕೂ ಉತ್ತಮ

(Mint Chutney)ಪುದೀನಾ ಸೊಪ್ಪಿನಿಂದ ಮಾಡಿದ ಚಟ್ನಿಯನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನವಿದೆ. ಹಲವು ಔಷದ ಗುಣವಿರುವ ಪುದೀನಾವನ್ನು ಪ್ರತಿನಿತ್ಯ ಅಡುಗೆಯಲ್ಲಿ ಬಳಸುವುದರಿಂದ ಹಲವು ಶಾರೀರಿಕ ಎರುಪೆರುಗಳನ್ನು ತಡೆಗಟ್ಟುತ್ತದೆ ಮತ್ತು ದೇಹದಲ್ಲಿರುವ ಹಲವಾರು ತೊಂದರೆಗಳನ್ನು ದೂರಮಾಡಲು ಸಹಕಾರಿಯಾಗಿದೆ. ಪ್ರತಿನಿತ್ಯದ ಅಡುಗೆಯಲ್ಲಿ ಪುದೀನಾ ಸೊಪ್ಪಿನ ವಿಧ ವಿಧವಾದ ಅಡುಗೆಯನ್ನು ಮಾಡುವುದರಿಂದ ಮನೆಯವರ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಕಾರಿ ಆಗುತ್ತದೆ. ಪುದೀನಾ ಸೊಪ್ಪಿನಿಂದ ಚಟ್ನಿಯನ್ನು ಹೇಗೆ ಮಾಡುವುದು ಎಂಬ ಮಾಹಿತಿಯನ್ನು ತಿಳಿಯಿರಿ.

(Mint Chutney)ಬೇಕಾಗುವ ಸಾಮಗ್ರಿಗಳು:

  • ಉದ್ದಿನ ಬೆಳೆ
  • ಎಣ್ಣೆ
  • ಟೊಮೇಟೊ
  • ಈರುಳ್ಳಿ
  • ಬೆಳ್ಳುಳ್ಳಿ
  • ಹಸಿ ಮೆಣಸು
  • ತುಂಡಾಗಿ ಕತ್ತರಿಸಿದ ಕಾಯಿ
  • ಪುದೀನಾ ಎಲೆಗಳು
  • ಉಪ್ಪು
  • ಅರಿಶಿಣ
  • ಹುಳಿ ನೀರು

ಮಾಡುವ ವಿಧಾನ:
ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದ ನಂತರ ಉದ್ದಿನ ಬೆಳೆಯನ್ನು ಹಾಕಿ ಸ್ವಲ್ಪ ಕರಿಯಬೇಕು. ಅದಕ್ಕೆ ಈರುಳ್ಳಿ, ಹಸಿ ಮೆಣಸು, ಬೆಳ್ಳುಳ್ಳಿ, ಟೊಮೇಟೊ, ತುಂಡಾಗಿ ಕತ್ತರಿಸಿದ ಕಾಯಿಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ ಆನಂತರ ಪುದೀನಾಎಲೆಗಳು, ಉಪ್ಪು, ಅರಿಶಿಣ, ಹುಳಿ ನೀರನ್ನು ಹಾಕಿಕೊಂಡು 2-3 ನಿಮಿಷ ಗಳ ವರೆಗೆ ಬೇಯಿಸಿಕೊಳ್ಳಬೇಕು ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಒಂದು ಸಣ್ಣ ಪಾತ್ರೆಯಲ್ಲಿ ಚಟ್ನಿಯನ್ನು ಹಾಕಿ ಇದಕ್ಕೆ ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಕೊಟ್ಟರೆ ರುಚಿ ರುಚಿಯಾಗಿ ದೋಸೆ ಜೋತೆ ಸವಿಯಲು ಪುದೀನಾ ಚಟ್ನಿ ರೆಡಿ.

ಇದನ್ನೂ ಓದಿ:Baby Skin Care : ಚಳಿಗಾಲದಲ್ಲಿ ನಿಮ್ಮ ಮಕ್ಕಳ ಕೋಮಲ ತ್ವಚೆಗಾಗಿ ಮನೆಯಲ್ಲಿಯೇ ತಯಾರಿಸಿ ಮಾಯಿಶ್ಚರೈಸರ್‌

ಇದನ್ನೂ ಓದಿ:Face Pack:ಟ್ಯಾನ್ ಆಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು‌ ಇಲ್ಲಿದೆ ಫೇಸ್ ಪ್ಯಾಕ್

ಟೊಮೇಟೊ ಚಟ್ನಿ

ಬೇಕಾಗುವ ಸಾಮಗ್ರಿಗಳು :

  • ಟೊಮೇಟೊ
  • ಈರುಳ್ಳಿ
  • ಬೆಳ್ಳುಳ್ಳಿ
  • ಕಡಲೆ ಬೇಳೆ
  • ಉದ್ದಿನ ಬೆಳೆ
  • ಕೆಂಪು ಮೆಣಸು
  • ಎಣ್ಣೆ
  • ಉಪ್ಪು

ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಎಣ್ಣೆ ಕಡಲೆ ಬೇಳೆ, ಉದ್ದಿನ ಬೆಳೆ, ಕೆಂಪು ಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಟೊಮೇಟೊ ಹಾಕಿ ಬೇಯಿಸಬೇಕು. ಬೇಯಿಸಿಕೊಂಡ ಪದಾರ್ಥಗಳು ತಣ್ಣಗಾದ ನಂತರ ಮಿಕ್ಸಿ ಜಾರಿಯಲ್ಲಿ ಹಾಕಿ ರುಬ್ಬಿಕೊಂಡು ಒಂದು ಸಣ್ಣ ಪಾತ್ರೆಯಲ್ಲಿ ಚಟ್ನಿಯನ್ನು ಹಾಕಿ ಇದಕ್ಕೆ ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಕೊಟ್ಟರೆ ರುಚಿ ರುಚಿಯಾಗಿ ದೋಸೆ ಜೊತೆ ಸವಿಯಲು ಟೊಮೇಟೊ ಚಟ್ನಿ ರೆಡಿ.

Mint chutney is not only delicious but also good for health

Comments are closed.