Mouth Ulce Relief:ಬಾಯಿ ಹುಣ್ಣಿನಿಂದ ಆಹಾರ ಸೇವಿಸಲು ಆಗುತ್ತಿಲ್ಲವೇ ? ಹಾಗಾದ್ರೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

(Mouth Ulce Relief)ಹಾರ್ಮೋನುಗಳ ಅಸಮತೋಲನ,ಆಮ್ಲೀಯತೆ, ವಿಟಮಿನ್‌ ಬಿ ಮತ್ತು ಸಿ ಕೊರತೆಯಿಂದಾಗಿ ಬಾಯಲ್ಲಿ ಹುಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಆಗಾಗ ಬಾಯಿ ಹುಣ್ಣು ಸಮಸ್ಯೆ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ಉಂಟು ಇದರಿಂದಾಗಿ ಆಹಾರ ಸೇವನೆ ಮಾಡಲು ಮತ್ತು ಮಾತನಾಡಲು ಕಷ್ಟವಾಗುತ್ತದೆ. ಬಾಯಿ ಹುಣ್ಣಿನ ಸಮಸ್ಯೆಯಿಂದ ಹೊರ ಬರಲು ಸುಲಭವಾಗಿ ಮನೆಯಲ್ಲಿಯೇ ಔಷಧೀಯನ್ನು ತಯಾರಿಸಕೊಳ್ಳಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Mouth Ulce Relief)ಜಾಯಿಕಾಯಿ
ಜಾಯಿಕಾಯಿ ಅಡುಗೆ ರುಚಿಯನ್ನು ಹೆಚ್ಚಿಸುವುದು ಅಷ್ಟೇ ಅಲ್ಲದೆ ಇದರಲ್ಲಿ ಔಷಧೀಯ ಗುಣವಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್‌ ಗುಣ ಇರುವುದರಿಂದ ಶೀತ ಮತ್ತು ಕೆಮ್ಮು ಗುಣಪಡಿಸಿಕೊಳ್ಳಬಹುದು ಮತ್ತು ಬಾಯಿ ಹುಣ್ಣನ್ನು ನಿವಾರಣೆ ಮಾಡುವಂತಹ ಶಕ್ತಿ ಇದಕ್ಕೆ ಇದೆ. ಜಾಯಿಕಾಯಿಯನ್ನು ತೆದಿಕೊಂಡು ಒಂದು ಬಟ್ಟಲಿನಲ್ಲಿ ಹಾಕಿ ಇಟ್ಟುಕೊಳ್ಳಬೇಕು. ನಂತರ ಹುಣ್ಣಿನ ಮೇಲೆ ಹಚ್ಚಿಕೊಂಡರೆ ಬಾಯಿ ಹುಣ್ಣು ತಟ್ಟನೆ ಮಾಯವಾಗುತ್ತದೆ.

ಉಪ್ಪು ಮತ್ತು ಅರಿಶಿಣ ಮಿಶ್ರಣ
ಒಂದು ಲೋಟ ನೀರಿನಲ್ಲಿ ಉಪ್ಪು ಮತ್ತು ಅರಿಶಿಣ ಹಾಕಿ ಮಿಶ್ರಣ ಮಾಡಿಕೊಂಡು ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣನ್ನು ಕಡಿಮೆ ಮಾಡುತ್ತದೆ.

ನಿಂಬೆಹಣ್ಣು
ನಿಂಬೆಹಣ್ಣನ್ನು ಅಡುಗೆ ಮತ್ತು ಸೌಂಧರ್ಯ ಹೆಚ್ಚಿಸಿಕೊಳ್ಳುವುದಕ್ಕೆ ಬಳಸುವುದಷ್ಟೇ ಅಲ್ಲದೆ ಇದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಒಂದು ಲೋಟ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸವನ್ನು ಮಿಶ್ರಣಮಾಡಿಕೊಳ್ಳಬೇಕು. ಈ ನೀರಿನಿಂದ ಬಾಯನ್ನು ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಕಡಿಮೆ ಆಗುವುದರ ಜೊತೆಗೆ ನೋವು ಕಡಿಮೆ ಆಗುತ್ತದೆ. ಸತತವಾಗಿ ಐದರಿಂದ ಆರು ದಿನದ ವರೆಗೆ ಬಾಯಿ ಮುಕ್ಕಳಿಸುವುದರಿಂದ ಹುಣ್ಣು ಬೇಗ ಗುಣವಾಗುತ್ತದೆ.

ಅಡುಗೆ ಸೋಡ ಮತ್ತು ಜೇನುತುಪ್ಪ ಮಿಶ್ರಣ
ಬೌಲ್‌ ನಲ್ಲಿ ಅಡುಗೆ ಸೋಡ ಮತ್ತು ಜೇನುತುಪ್ಪ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಈ ಮಿಶ್ರಣವನ್ನು ಬಾಯಿ ಹುಣ್ಣಿಗೆ ಹಚ್ಚುವುದರಿಂದ ತಕ್ಷಣ ಬಾಯಿ ಹುಣ್ಣಿಗೆ ಪರಿಹಾರ ಸಿಗುತ್ತದೆ.

ಬಾಳೆದಿಂಡು
ಬಾಳೆದಿಂಡಿನ ಮದ್ಯಭಾಗವನ್ನು ತೆಗೆದುಕೊಂಡು ಸಣ್ಣ ತುಂಡುಗಳಾಗಿ ಮಾಡಿಕೊಂಡು ಅದನ್ನು ಕುಟ್ಟಣಿಗೆಗೆ ಹಾಕಿ ಜಜ್ಜಿಕೊಂಡು ರಸವನ್ನು ತೆಗೆದುಕೊಳ್ಳಬೇಕು. ಆ ರಸವನ್ನು ಒಂದು ಲೋಟಕ್ಕೆ ಹಾಕಿಕೊಂಡು ಕುಡಿದರೆ ದೇಹವನ್ನು ತಂಪಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ.ಬಾಯಿಯ ಹುಣ್ಣನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿರುವ ವಿಷಕಾರಿ ವಸ್ತುವನ್ನು ಹೊರಹಾಕುವ ಕೆಲಸವನ್ನು ಮಾಡುತ್ತದೆ.

ಇದನ್ನೂ ಓದಿ:Drink More Water In Winter :ಹೆಚ್ಚು ನೀರು ಕುಡಿಯಿರಿ ಚಳಿಗಾಲದಲ್ಲಿ ನಿಮ್ಮ ತ್ವಚೆ ಕಾಪಾಡಿಕೊಳ್ಳಿ

ಇದನ್ನೂ ಓದಿ:Nagging Sore Throat Remedies:ಕಾಡುತ್ತಿರುವ ಗಂಟಲು ನೋವಿನಿಂದ ಮುಕ್ತಿ ಪಡೆಯಲು ಈ ಟಿಪ್ಸ್‌ ಅನುಸರಿಸಿ

ಪೆರಲೆ ಎಲೆ ಪೇಸ್ಟ್‌
ಐದರಿಂದ ಆರು ಪೆರಲೆ ಎಲೆಗಳನ್ನು ಕುಟ್ಟಣಿಗೆಯಲ್ಲಿ ಕುಟ್ಟಿಕೊಂಡು ಪೇಸ್ಟ್‌ ತಯಾರಿಸಿಕೊಳ್ಳಬೇಕು. ಬಾಯಿ ಹುಣ್ಣಿರುವ ಜಾಗಕ್ಕೆ ಈ ಪೇಸ್ಟ್‌ ಅನ್ನು ಹಚ್ಚುವುದರಿಂದ ಬಾಯಿ ಹುಣ್ಣು ಕಡಿಮೆ ಆಗುತ್ತದೆ. ಅಷ್ಟೇ ಅಲ್ಲದೆ ವಸಡಿನ ಮೇಲೆ ಈ ಪೇಸ್ಟ್‌ ಹಚ್ಚಿಕೊಳ್ಳುವುದರಿಂದ ಹಲ್ಲು ನೋವು ಕಡಿಮೆ ಆಗುತ್ತದೆ.

ತುಳಸಿ ಎಲೆ
ದಿನಕ್ಕೆ ಎರಡು ಬಾರಿ ನಾಲ್ಕರಿಂದ ಐದು ತುಳಸಿ ಎಲೆಯನ್ನು ಜಗಿದು ತಿನ್ನುವುದರಿಂದ ಬಾಯಿ ಹುಣ್ಣನ್ನು ಕಡಿಮೆ ಮಾಡಿಕೊಳ್ಳಬಹುದು. ಎರಡು ದಿನ ಹೀಗೆ ತುಳಸಿ ಎಲೆಯನ್ನು ತಿನ್ನುವುದರಿಂದ ಬಾಯಿ ಹುಣ್ಣು ಕಡಿಮೆ ಆಗುತ್ತದೆ.

Mouth Ulce Relief Can’t eat food due to mouth ulcer? So here are some simple tips

Comments are closed.