Nail Wrap Problem Tips:ಉಗುರು ಸುತ್ತು ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ

(Nail Wrap Problem Tips)ಉಗುರುಗಳಲ್ಲಿ ಧೂಳು ಶೇಖರಣೆ ಆಗುವುದರಿಂದ ಬೆರಳುಗಳಲ್ಲಿ ಶಿಲೀಂಧ್ರಗಳ ಸೋಂಕು ಉಂಟಾಗುವುದರಿಂದ ಉಗುರು ಸುತ್ತು ಆಗುತ್ತದೆ. ಚಿಕ್ಕ ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಉಗುರು ಸುತ್ತು ಸೋಂಕು ಕಾಣಿಸಿಕೊಳ್ಳುತ್ತದೆ. ಉಗುರು ಸುತ್ತು ಆದಾಗ ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಈ ಉಗುರು ಸುತ್ತು ಮತ್ತು ನೋವಿನಿಂದ ಹೊರ ಬರಲು ಕೆಲವು ಮನೆಮದ್ದಿನ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ. ಇದರ ಮಾಹಿತಿಯ ಕುರಿತು ತಿಳಿಯೋಣ.

(Nail Wrap Problem Tips)ಬೇಕಾಗುವ ಸಾಮಾಗ್ರಿಗಳು
ಕಾಳು ಮೆಣಸು
ಎಮ್ಮೆ ಹಾಲು

ಮಾಡುವ ವಿಧಾನ
ಎಮ್ಮೆ ಹಾಲಿನಲ್ಲಿ ಕಾಳುಮೆಣಸು ತೆದಿಕೊಂಡು ಉಗುರು ಸುತ್ತು ಆಗಿರುವ ಜಾಗಕ್ಕೆ ಹಚ್ಚಿಕೊಂಡು ಬಟ್ಟೆಯನ್ನು ಕಟ್ಟುವುದರಿಂದ ಎರಡು ಮೂರು ದಿನದಲ್ಲಿ ಉಗುರು ಸುತ್ತು ಮತ್ತು ನೋವು ನಿವಾರಣೆ ಆಗುತ್ತದೆ.

ಬೇಕಾಗುವ ಸಾಮಾಗ್ರಿಗಳು
ಬೆಳ್ಳುಳ್ಳಿ
ಕಾಳು ಮೆಣಸು
ನಿಂಬೆ ರಸ

ಮಾಡುವ ವಿಧಾನ
ಕುಟ್ಟಣಿಗೆಯಲ್ಲಿ ಬೆಳ್ಳುಳ್ಳಿ ಮತ್ತು ಕಾಳು ಮೆಣಸನ್ನು ನುಣ್ಣಗೆ ಜಜ್ಜಿಕೊಳ್ಳಬೇಕು. ನಂತರ ಇದನ್ನು ಒಂದು ಬೌಲ್‌ ಗೆ ಹಾಕಿಕೊಂಡು ಆರು ಹನಿ ನಿಂಬೆ ರಸ ಹಾಕಿಕೊಂಡು ಮಿಶ್ರಣ ಮಾಡಿ ಉಗುರು ಸುತ್ತು ಆಗಿರುವ ಜಾಗಕ್ಕೆ ಹಚ್ಚಿದರೆ ಉಗುರು ಸುತ್ತು ಕಡಿಮೆ ಆಗುತ್ತದೆ. ಎರಡು ದಿನ ಇದನ್ನು ಹಚ್ಚಿಕೊಂಡರೆ ಉಗುರು ಸುತ್ತು ಕಡಿಮೆ ಆಗುತ್ತದೆ.

ಎಕ್ಕದ ಎಲೆಯ ಹಾಲು
ಎಕ್ಕದ ಎಲೆಯ ಹಾಲು ಹಚ್ಚುವುದರಿಂದ ಉಗುರು ಸುತ್ತು ಕಡಿಮೆ ಆಗುತ್ತದೆ. ಎಕ್ಕದ ಗಿಡದ ತೊಗಟೆಯನ್ನು ಮುರಿಯುವಾಗ ಹುಷಾರಾಗಿ ನೋಡಿಕೊಂಡು ಮುರಿಯಬೇಕು ಇದರ ಹಾಲು ಕಣ್ಣಿಗೆ ತಾಕಿದರೆ ಕಣ್ಣು ಹೋಗುವ ಸಾಧ್ಯತೆ ಇರುತ್ತದೆ.

ಅರಿಶಿಣ ಮತ್ತು ಕೊಬ್ಬರಿ ಎಣ್ಣೆ ಮಿಶ್ರಣ
ಸೌಟ್‌ ನಲ್ಲಿ ಕಾಲು ಚಮಚ ಅರಿಶಿಣ , ಕಾಲು ಚಮಚ ಕೊಬ್ಬರಿ ಎಣ್ಣೆ ಹಾಕಿಕೊಂಡು ಮಿಶ್ರಣ ಮಾಡಿ ಗ್ಯಾಸ್‌ ಮೇಲೆ ಇಟ್ಟು ಕಾಯಿಸಿಕೊಳ್ಳಬೇಕು. ಇದನ್ನು ಉಗುರು ಸುತ್ತಾಗಿರುವಲ್ಲಿ ಹಚ್ಚಿಕೊಂಡರೆ ಉಗುರು ಸುತ್ತು ಕಡಿಮೆ ಆಗುವುದರ ಜೊತೆಗೆ ನೋವು ಶಮನವಾಗುತ್ತದೆ.

ಇದನ್ನೂ ಓದಿ:Home Remedy:ಮಂಡಿ,ಸೊಂಟ, ಭುಜ ನೋವು ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ಮನೆಮದ್ದು ಮಾಹಿತಿ

ಇದನ್ನೂ ಓದಿ:Home Remedies For Fever:ಸಾಮಾನ್ಯ ಜ್ವರಕ್ಕೆ ಮನೆಯಲ್ಲೇ ಮಾಡಿ ಮದ್ದು

ಇದನ್ನೂ ಓದಿ:Home Remedies For Fever:ಸಾಮಾನ್ಯ ಜ್ವರಕ್ಕೆ ಮನೆಯಲ್ಲೇ ಮಾಡಿ ಮದ್ದು

ಕಾಳು ಮೆಣಸು ಮತ್ತು ಎಲಕ್ಕಿ ಮಿಶ್ರಣ
ಕುಟ್ಟಣಿಗೆಯಲ್ಲಿ ಕಾಳುಮೆಣಸು ಮತ್ತು ಎಲಕ್ಕಿ ಪುಡಿಮಾಡಿಕೊಂಡು ಬೌಲ್‌ ಗೆ ಹಾಕಬೇಕು. ಅದಕ್ಕೆ ಅರಿಶಿಣ ಬೇರೆಸಿ ಮಿಶ್ರಣ ಮಾಡಿಕೊಂಡು ನಿಂಬೆಹಣ್ಣನ್ನು ಬೆರಳು ಹೋಗುವಷ್ಟು ಸಣ್ಣಕ್ಕೆ ಕತ್ತರಿಸಿ ಅದರೋಳಗೆ ಪುಡಿಮಾಡಿಕೊಂಡ ಮಿಶ್ರಣವನ್ನು ಹಾಕಿಕೊಂಡು ಉಗುರು ಸುತ್ತಾಗಿರುವ ಬೆರಳಿಗೆ ಹಾಕಿ ಐದು ನಿಮಿಷ ಬಿಟ್ಟರೆ ಉಗುರು ಸುತ್ತು ಕಡಿಮೆ ಆಗುತ್ತದೆ.

Nail Wrap Problem Tips Here is a permanent solution to the nail wrap problem

Comments are closed.