Benefits of Sweet Potatoes : ಗೆಣಸಿನ ಸೇವನೆಯಿಂದ ನಿಮ್ಮ ದೇಹಕ್ಕೆ ಸಿಗಲಿದೆ ಇಷ್ಟೆಲ್ಲ ಲಾಭ..!

Benefits of Sweet Potatoes : ನಾವೀಗ ಚಳಿಗಾಲದಲ್ಲಿದ್ದೇವೆ. ಈ ಕಾಲದಲ್ಲಿ ಬೆಳೆಯುವ ಕೆಲ ವಿಶೇಷ ಆಹಾರ ಪದಾರ್ಥಗಳು ನಿಮ್ಮ ದೇಹಕ್ಕೆ ಅನೇಕ ರೀತಿಯಲ್ಲಿ ಲಾಭವನ್ನು ತಂದುಕೊಡಬಲ್ಲವು. ಉದಾಹರಣೆಗೆ ಈ ಸಮಯದಲ್ಲಿ ಪಾಲಕ್​, ಬೀಟ್​ರೂಟ್​, ನೆಲ್ಲಿಕಾಯಿಗಳನ್ನು ಹೆಚ್ಚಾಗಿ ಮಾರುಕಟ್ಟೆಗಳಲ್ಲಿ ಕಾಣಲಿದ್ದೀರಿ. ಇದರ ಜೊತೆಯಲ್ಲಿ ಗೆಣಸು ಕೂಡ ನಿಮಗೆ ಈ ಕಾಲದಲ್ಲಿ ಹೆಚ್ಚಾಗಿ ಸಿಗುತ್ತದೆ. ಈ ಗೆಣಸು ನಿನ್ನೆ ಮೊನ್ನೆಯ ಆಹಾರ ಪದಾರ್ಥವಲ್ಲ. ಕ್ರಿಸ್ತಪೂರ್ವ 750ರಿಂದಲೂ ಜನರು ಗಡ್ಡೆ ಗೆಣಸನ್ನು ತಿಂದು ಬದುಕಿದವರೇ. ಈ ಗೆಣಸಿನಲ್ಲಿ ಅನೇಕ ಬಣ್ಣಗಳಿವೆ. ಬಿಳಿ, ಕ್ರೀಮ್​, ಗುಲಾಬಿ , ಕೇಸರಿ ಹೀಗೆ ನಾನಾ ಬಣ್ಣಗಳಲ್ಲಿ ನಿಮಗೆ ಗೆಣಸುಗಳು ಸಿಗುತ್ತವೆ.
ಅನ್ನ ಸರ್ವೋತ್ತಮ ಔಷಧ, ಆಹಾರವು ಅತ್ಯುತ್ತಮ ಔಷಧ ಎಂಬ ಮಾತಿದೆ. ಹೀಗಾಗಿ ನೀವು ಮಣ್ಣಿನಾಳದಲ್ಲಿ ಬೆಳೆದ , ಆಯಾ ಋತುಗಳಲ್ಲಿ ಬೆಳೆಯುವ ತಾಜಾ ಪದಾರ್ಥಗಳನ್ನು ಸೇವನೆ ಮಾಡಬೇಕು. ಇದರಿಂದ ನಿಮ್ಮ ಆರೋಗ್ಯಕ್ಕೆ ಲಾಭ ಕಾದಿದೆ.


ಹಾಗಾದರೆ ಗೆಣಸಿನಿಂದ ಆಗುವ ಲಾಭಗಳೇನು..?
ಸ್ಥೂಲಕಾಯ, ಪಿಸಿಓಡಿ, ಮಧುಮೇಹದಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಗೆಣಸು ಉತ್ತಮ ಆಹಾರವಾಗಿದೆ.


ಗೆಣಸಿನಲ್ಲಿ ವಿಟಾಮಿನ್​ ಎ ಅಗಾಧ ಪ್ರಮಾಣದಲ್ಲಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಚರ್ಮದ ಆರೋಗ್ಯವನ್ನು ಕಾಪಾಡಲೂ ಸಹ ಗೆಣಸುಗಳು ಸಹಕಾರಿ. ಗೆಣಸಿನಲ್ಲಿರುವ ವಿಟಾಮಿನ್​ ಬಿ ಅಂಶವು ನಿಮಗೆ ಆ್ಯಸಿಡಿಟಿ ಹಾಗೂ ಮಲಬದ್ಧತೆಯಿಂದ ಕಾಪಾಡುತ್ತದೆ.

ಅಶ್ವಗಂಧದ ಬಳಕೆಯ ಹಿಂದಿದೆ ನೂರೆಂಟು ಲಾಭ..!


ಅದು ಯಾವುದೇ ದೇಹಾರೋಗ್ಯದ ಸಮಸ್ಯೆ ಆಗಿರಲಿ. ನೀವು ತಾಳ್ಮೆಯಿಂದ ಕಾದಲ್ಲಿ ಆರ್ಯುವೇದವು ನಿಮಗೆ ಪರಿಹಾರವನ್ನು ಖಂಡಿತವಾಗಿಯೂ ನೀಡಲಿದೆ. ಅಲ್ಲದೇ ಆಯುರ್ವೇದದ ಬಹುತೇಕ ಔಷಧಿಗಳನ್ನು ನೀವು ಮನೆಯಲ್ಲಿರುವ ಅಡುಗೆ ಪದಾರ್ಥಗಳನ್ನೇ ಬಳಕೆ ಮಾಡಿ ಮಾಡುವಂತದ್ದಾಗಿದೆ. ಇದರಲ್ಲಿ ಒಂದು ಅಶ್ವಗಂಧ . ಅಶ್ವಗಂಧ ಅಂದರೆ ಕುದುರೆಯಿಂದ ಬರುವ ಸುವಾಸನೆ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಅಶ್ವಗಂಧದಲ್ಲಿರುವ ವಿಶಿಷ್ಟ ವಾಸನೆ ಹಾಗೂ ಶಕ್ತಿಯಿಂದಾಗಿ ದೇಹವನ್ನು ಚುರುಕುಗೊಳಿಸುತ್ತದೆ.

ಅಶ್ವಗಂಧದ ಸೇವನೆಯಿಂದ ದೇಹಕ್ಕೆ ವಿವಿಧ ಪ್ರಮಾಣದಲ್ಲಿ ಲಾಭ ಕಾದಿದೆ. ಅಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದರೆ ನೀವು ಅಶ್ವಗಂಧವನ್ನು ಬಳಕೆ ಮಾಡಬಹುದಾಗಿದೆ. ಕೋವಿಡ್​ ಸಂದರ್ಭದಲ್ಲಂತೂ ಅಶ್ವಗಂಧವು ವ್ಯಾಪಕವಾಗಿ ಪ್ರಸಿದ್ಧಿಯನ್ನು ಪಡೆಯಿತು. ಅಶ್ವಗಂಧವನ್ನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ನಿದ್ರಾಜನಕ, ಆ್ಯಂಟಿ ಬ್ಯಾಕ್ಟಿರಿಯಲ್​ ಆಗಿ ಬಳಕೆ ಮಾಡಲಾಗುತ್ತದೆ.

ಹಾಗಾದರೆ ಅಶ್ವಗಂಧದಲ್ಲಿರುವ ಲಾಭಗಳೇನು ಅನ್ನೋದನ್ನು ತಿಳಿದುಕೊಳ್ಳೋಣ:

ತೂಕ ಇಳಿಸಲು ಸಹಕಾರಿ
ನಿದ್ರಾಹೀನತೆಯನ್ನು ನಿವಾರಿಸುತ್ತದೆ
ಉರಿಯೂತದ ವಿರುದ್ಧ ಹೋರಾಡುತ್ತದೆ
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ
ನೋವನ್ನು ನಿಲ್ಲಿಸುತ್ತದೆ
ಥೈರಾಯ್ಡ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ
ಒತ್ತಡವನ್ನು ಕಡಿಮೆ ಮಾಡುತ್ತದೆ
ಮಧುಮೇಹದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

ಅಶ್ವಗಂಧದ ಲಾಭದ ಬಗ್ಗೆ ಮಾತನಾಡುವಾಗ ಹೆಚ್ಚಾಗಿ ಎಲ್ಲರೂ ಹೇಳುವುದು ಅದರ ಬೇರುಗಳ ಬಗ್ಗೆ. ಅಶ್ವಗಂಧದ ಬೇರುಗಳು ದೇಹದಲ್ಲಿರುವ ಕೊಬ್ಬಿನ ಅಂಶ ನಿವಾರಿಸುವಲ್ಲಿ, ಮಧುಮೇಹ ನಿಯಂತ್ರಿಸುವಲ್ಲಿ. ಕಫ ನಿಯಂತ್ರಿಸುವಲ್ಲಿ, ಶ್ವಾಸಕೋಶದ ಆರೋಗ್ಯವನ್ನು ಕಾಪಾದುವಲ್ಲಿ ಸೇರಿದಂತೆ ಇನ್ನೂ ಅನೇಕ ರೀತಿಯ ಲಾಭಗಳನ್ನು ತಂದುಕೊಡುತ್ತದೆ.

Nutritionist Suggests 4 Magical Benefits of Sweet Potatoes

ಇದನ್ನು ಓದಿ : Beauty Tips: ಬ್ಲಾಕ್​ ಟೀ ಸೇವನೆಯ ಹಿಂದೆ ಅಡಗಿದೆ ಬ್ಯೂಟಿ ಸೀಕ್ರೆಟ್​..!

ಇದನ್ನೂ ಓದಿ : White hair Beauty Tips : ಅವಧಿಗೂ ಮುನ್ನವೇ ಕೂದಲು ಬೆಳ್ಳಗಾಗುತ್ತಿದೆಯೇ ? ಹಾಗಾದರೆ ಈ ಪದಾರ್ಥ ತಪ್ಪದೇ ಸೇವಿಸಿ

Comments are closed.