Health Benefits of Papaya Leaves : ಪಪ್ಪಾಯ ಎಲೆ ಆರೋಗ್ಯಕ್ಕೆ ದಿವ್ಯೌಷದ

Health Benefits of Papaya Leaves : ಪಪ್ಪಾಯ ಹಣ್ಣು ಅಂದ್ರೆ ಸಾಕು ಎಂತವರ ಬಾಯಲ್ಲಿ ನೀರು ಬರುತ್ತೆ. ಆದ್ರೆ ಆದರ ಎಲೆಯನ್ನು ಸಹ ತಿಂದ್ರೆ ಉತ್ತಮ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು, ಪಪ್ಪಾಯಿ ಎಲೆಗಳಲ್ಲಿರುವ ಅಸಿಟೋಜೆನಿನ್ ಎಂಬ ಪೋಷಕಾಂಶಕ್ಕೆ ಮಲೇರಿಯಾ ಮತ್ತು ಡೆಂಘಿ ಜ್ವರದ ವೈರಾಣುಗಳ ವಿರುದ್ದ ಹೋರಾಡುವ ಶಕ್ತಿ ಇದೆ, ಪಪ್ಪಾಯಿ ಎಲೆಯ ರಸಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಬಳಸಲಾಗುವ ಅತ್ಯಂತ ದೇಸಿ ಪರಿಹಾರ. ಇದರ ವಿವಿಧ ಆರೋಗ್ಯ ಲಾಭಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಇದು ಅಪಾರ ಜನಪ್ರಿಯತೆಗಳಿಸಿದೆ. ಇದರಲ್ಲಿ ಪಾಪೈನ್ ಮತ್ತು ಚಿಮೊಪಾಪೈನ್ ನಂತಹ ಕಿಣ್ವಗಳು ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಇತರ ಜೀರ್ಣಾಂಗಗಳ ಅಸ್ವಸ್ಥತೆಗಳನ್ನು ತಡೆಯುತ್ತದೆ. ಈ ಎಲೆಗಳಲ್ಲಿ ವಿಟಮಿನ್ ಎ, ಸಿ, ಕೆ ಮತ್ತು ಬಿ ಅಧಿಕ ಪ್ರಮಾಣದಲ್ಲಿದೆ.

ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಸಹಕಾರಿ
ಮಳೆಗಾಲ ಬಂದರೆ ಸಾಕು ಸೊಳ್ಳೆ ಕಾಟ ಅದರಿಂದ ವಿವಿಧ ಕಾಯಿಲೆಗಳು ಅದ್ರಲ್ಲಿ ಡೆಂಗ್ಯೂ ಜ್ವರ ಕೂಡ ಒಂದು. ಅದು ಬಂದ್ರೆ ಹಲವರು ಸತ್ತೆ ಹೋಗುತ್ತಾರೆ ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ, ಡೆಂಗ್ಯೂಜ್ವರದಿಂದ ಬಳಲುತ್ತಿರುವ ಜನರಿಗೆ ಪಪ್ಪಾಯಿ ಎಲೆಯ ಸಾರವು ರಕ್ತದ ಪ್ಲೇಟ್‌ಲೆಟ್ ಮಟ್ಟವನ್ನು ತೀವ್ರವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರ ಇದ್ದವರು ಪಪ್ಪಾಯ ಎಲೆಯ ರಸವನ್ನು ಕುಡಿದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಜೀರ್ಣಾಂಗಗಳನ್ನು ಉತ್ತಮಗೊಳಿಸುತ್ತದೆ
ಪಪ್ಪಾಯಿ ಎಲೆಗಳು ಚೈಮೋಪಪೈನ್ ಮತ್ತು ಪಪೈನ್ ಅಂಶವನ್ನು ಹೊಂದಿರುತ್ತದೆ, ಪಪ್ಪಾಯಿ ಎಲೆಯಲ್ಲಿ ಉತ್ತಮ ಪ್ರಮಾಣದ ಕರಗದ ನಾರಿನಾಂಶವಿದೆ. ಇದು ಜೀರ್ಣಾಂಗಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಮತ್ತು ಎಲೆಯನ್ನು ಹೊಟ್ಟೆ ಉಬ್ಬರಿಕೆ ಮತ್ತು ಎದೆಯುರಿ ಮೊದಲಾದ ತೊಂದರೆಗಳನ್ನು ನಿವಾರಿಸಲು ಸಹ ಬಳಸಲಾಗುತ್ತದೆ.

ಮಲೇರಿಯಾಕ್ಕೆ ರಾಮಬಾಣ
ಪಪ್ಪಾಯಿ ಎಲೆಯ ರಸದಲ್ಲಿ ಪ್ಲಾಸ್ಮೋಡಿಯಾಸ್ಟಿಕ್ ಗುಣವನ್ನು ಹೊಂದಿದೆ ಮತ್ತು ಇದು ಮಲೇರಿಯಾ ಜ್ವರವನ್ನು ನಿಯಂತ್ರಣದಲ್ಲಿ ಇಡುತ್ತದೆ. ಡೆಂಗ್ಯೂಗೆ ಚಿಕಿತ್ಸೆಯಂತೆ ಪಪ್ಪಾಯಿ ಎಲೆಯ ರಸವು ಮಲೇರಿಯಾಗೂ ಬಳಸಬಹುದು.

ಕ್ಯಾನ್ಸರ್ ತಡೆಗಟ್ಟುವ  ಗುಣಗಳನ್ನು ಹೊಂದಿದೆ
ಪಪ್ಪಾಯ ಹಣ್ಣಿನ ರಸ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದ್ದು ಕೆಲವು ಬಗೆಯ ಕ್ಯಾನ್ಸರ್ ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಪಪ್ಪಾಯ ಎಲೆಯನ್ನು ಸಾಂಪ್ರದಾಯಿಕ ಔಷಧ ಪದ್ಧತಿಗಳಲ್ಲಿ ಬಳಸಲಾಗುತ್ತದೆ.

ಉತ್ತಮ ತ್ವಚೆಗೆ  ಸಹಕಾರಿ
ಪಪ್ಪಾಯಿ ಎಲೆ ಮೃದು ಮತ್ತು ಸ್ವಚ್ಛ ಚರ್ಮಕ್ಕಾಗಿ ಚರ್ಮದ ಮೇಲೆ ಹಚ್ಚಲಾಗುತ್ತದೆ. ಇದರಲ್ಲಿರುವ ಪಪಾಯಿನ್ ಎಂಬ ಪ್ರೋಟೀನ್ ಕರಗುವ ಕಿಣ್ವವನ್ನು ಹೊಂದಿದ್ದು ಅದು ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ. ಮೊಡವೆಗಳ ನಿವಾರಣೆಗೂ  ಸಹ ಇದು ಸಹಕಾರಿಯಾಗಿದೆ.

ಋತುಚಕ್ರದ ಸಮಯದಲ್ಲಿನ ಹೊಟ್ಟೆ ನೋವಿಗೆ ಪರಿಹಾರ
ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ  ಹೆಚ್ಚಾಗಿ ಹೊಟ್ಟೆ ನೋವಿನ ಸಮಸ್ಯೆಗಳು ಉಂಟಾಗುತ್ತದೆ. ಋತುಚಕ್ರದ ನೋವಿನಿಂದ ಹೊರಬರಲು ಪಪ್ಪಾಯಿ ಎಲೆಯ ರಸವನ್ನು ತಯಾರಿಸಿ ಕುಡಿಯಬಹುದು.

ಕೂದಲ ಬೆಳವಣಗೆಗೆ ಉಪಯೋಗ
ಪಪ್ಪಾಯ ಹಣ್ಣಿನ ಎಲೆಯ ರಸವನ್ನು ನೆತ್ತಿಯ ಮೇಲೆ  ಹಚ್ಚಿಕೊಂಡರೆ, ನೆತ್ತಿಯ ತ್ವಚೆಗೆ ಉತ್ತಮ ಪೋಷಣೆ ದೊರೆಯುತ್ತದೆ. ಕೂದಲ ಬೆಳವಣಿಗೆಗು ಸಹ  ಉತ್ತಮ ಸಹಕಾರಿಯಾಗಿದೆ. ಪಪ್ಪಾಯಿ ಹಣ್ಣಿನ ರಸದಲ್ಲಿ ಶಿಲೀಂಧ್ರ ವಿರೋಧಿ ಗುಣಗಳಿದ್ದು, ಇದು ಮಲಸ್ಸೆಜಿಯಾ ಎಂಬ ಶಿಲೀಂಧ್ರವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.

ಇದನ್ನೂ ಓದಿ: Tuesday astrology : ಹೇಗಿದೆ ಮಂಗಳವಾರದ ದಿನಭವಿಷ್ಯ

ಇದನ್ನೂ ಓದಿ: Lovlina Borgohain : ‘ಮಾನಸಿಕ ಕಿರುಕುಳ ನೀಡ್ತಿದ್ದಾರೆ’ : ಭಾರತೀಯ ಬಾಕ್ಸಿಂಗ್​ ಒಕ್ಕೂಟದ ವಿರುದ್ಧ ಒಲಿಂಪಿಕ್​ ಪದಕ ವಿಜೇತೆ ಗಂಭೀರ ಆರೋಪ

(Papaya Leaves: A Miraculous Herbal Remedy for Health Issues)

Comments are closed.