Protect Liver : ನಿಮ್ಮ ಲಿವರ್‌ ರಕ್ಷಿಸಿಕೊಳ್ಳಿ! ಲಿವರ್‌ ಅನ್ನು ರಕ್ಷಿಸಬಲ್ಲ ಆಹಾರಗಳು ಯಾವುದು ಗೊತ್ತಾ?

ದೇಹದ ಕಲ್ಮಶಗಳನ್ನು(Detox) ಹೊರಹಾಕಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಸರಿದೂಗಿಸುವಂತಹ ಪ್ರಮುಖ ಜವಾಬ್ದಾರಿ ಲಿವರ್‌(Liver) ಮೇಲಿದೆ. ದೇಹದ ಬಹುಪಾಲು ಅಂದರೆ 500ಕ್ಕಿಂತಲೂ ಹೆಚ್ಚು ಪ್ರಮುಖ ಕೆಲಸಗಳನ್ನು ಲಿವರ್‌ ಮಾಡುತ್ತದೆ. ಹಾಗಾದರೆ ಅತಿ ಮುಖ್ಯವಾದ ಲಿವರ್‌ನ ರಕ್ಷಣೆ(Protect Liver) ಮಾಡುವುದಾದರೂ ಹೇಗೆ? ಕೆಲವು ತರಕಾರಿ ಮತ್ತು ಆಹಾರಗಳು ಲಿವರ್‌ ಅನ್ನು ಕಾಪಾಡಿಕೊಳ್ಳಲು ಬಹಳ ಸಹಾಯ ಮಾಡುತ್ತವೆ. ಹಸಿರು ಸೊಪ್ಪುಗಳು, ಕೆಲವು ಹಣ್ಣುಗಳು, ತರಕಾರಿ, ನಟ್ಸ್‌ ಮುಂತಾದವುಗಳು ಲಿವರ್‌ ಅನ್ನು ರಕ್ಷಿಸಿ ಅದರ ಕಾರ್ಯಕ್ಷಮತೆ ಹೆಚ್ಚಿಸುತ್ತದೆ.

ನಾವು ಸೇವಿಸುವ ಆಹಾರಗಳಲ್ಲಿಯೇ ಲಿವರ್‌ನ ಆರೋಗ್ಯವೂ ಇದೆ. ಅಂತಹ ಆಹಾರಗಳನ್ನು ನಿಮ್ಮ ಡಯಟ್‌ನ ಭಾಗವಾಗಿಸಿ ಮತ್ತು ಲಿವರ್‌ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಿ. ಹಾಗಾದರೆ, ಲಿವರ್‌ ಅನ್ನು ರಕ್ಷಿಸಿಕೊಳ್ಳಲು(Protect Liver) ಸಹಾಯ ಮಾಡುವ ಉತ್ತಮ ಆಹಾರಗಳು ಯಾವುದು? ಇಲ್ಲಿದೆ ಓದಿ :

ಲಿವರ್‌ ಅನ್ನು ರಕ್ಷಿಸಿಕೊಳ್ಳಲು(Protect Liver) ಸಹಾಯ ಮಾಡುವ ಉತ್ತಮ ಆಹಾರಗಳು :

  • ಸಂಪೂರ್ಣ ಧಾನ್ಯಗಳು:
    ಧಾನ್ಯ ಮತ್ತು ಸಿರಿಧಾನ್ಯಗಳಾದ ಓಟ್ಸ್‌, ಬಾರ್ಲೀ, ಬ್ರೌನ್‌ ರೈಸ್‌, ಬಾಜ್ರಾ, ಹಾರಕ ಮುಂತಾದವುಗಳಲ್ಲಿ ಫೈಬರ್‌(ನಾರು) ಅಂಶ ಅತ್ಯಧಿಕವಾದೆ. ಈ ಫೈಬರ್‌ ಅಂಶವು ಅಜೀರ್ಣವನ್ನು ತಡೆಯುವಲ್ಲಿ ಸಹಕಾರಿ. ಓಟ್ಸ್‌ ಗ್ಲುಕಾನ್‌ಗಳನ್ನು ಹೊಡೆದೋಡಿಸಬಲ್ಲದು. ಇದರಿಂದ ಲಿವರ್‌ನಲ್ಲಿ ಕೊಬ್ಬು ಶೇಖರಣೆಗೊಳ್ಳುವುದನ್ನು ತಪ್ಪಿಸಬಹುದು.
  • ಹಸಿರು ಸೊಪ್ಪುಗಳು:
    ಹಸಿರು ಸೊಪ್ಪುಗಳಾದ ಪಾಲಕ್‌, ಮೆಂತ್ಯ, ಸಾಸಿವೆ ಸೊಪ್ಪು, ಗೋಧೀ ಹುಲ್ಲು, ಹತ್ತರಕಿ(ಅರ್ಗುಲಾ)ಸೊಪ್ಪು, ಬೀಟರೂಟ್‌ ಎಲೆ ಮುಂತಾದವುಗಳು ಆಂಟಿಒಕ್ಸಿಡೆಂಟ್‌, ಫೈಬರ್‌, ನೈಟ್ರೇಟ್‌, ಪೊಟ್ಯಾಸಿಯಂ, ಮ್ಯಾಂಗನೀಸ್‌, ಮ್ಯಾಗ್ನೇಸಿಯಂಗಳ ಉತ್ತಮ ಮೂಲವಾಗಿವೆ. ಇವುಗಳು ಲಿವರ್‌ಗೆ ಪೋಷಣೆ ಒದಗಿಸಿ, ಆರೋಗ್ಯವನ್ನು ಕಾಪಾಡುತ್ತವೆ. ಸಂಶೋಧನೆಗಳಿಂದ ಕಂಡುಕೊಂಡ ಅಂಶಗಳೇನೆಂದರೆ, ಹಸಿರು ಸೊಪ್ಪುಗಳಲ್ಲಿ ಅಗಾಧವಾಗಿರುವ ಕ್ಲೋರೋಫಿಲ್‌ ದೇಹದಲ್ಲಿರುವ ವಿಷ ಮತ್ತು ಭಾರವಾದ ಖನಿಜಗಳನ್ನು ಹೊರಹಾಕುವಲ್ಲಿ ಲಿವರ್‌ಗೆ ಸಹಾಯ ಮಾಡುತ್ತದೆ.
  • ದ್ರಾಕ್ಷಿ ಹಣ್ಣು:
    ವಿಟಾಮಿನ್‌ C, ಫೈಬರ್‌, ವಿಟಾಮಿನ್‌ A, ಕ್ಯಾಲ್ಸಿಯಂ, ಕಬ್ಬಿಣ ಮುಂತಾದವುಗಳು ದ್ರಾಕ್ಷಿ ಹಣ್ಣುನಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಇವುಗಳು ದೇಹದ ತೀವ್ರ ಸ್ವರೂಪದ ಊರಿಯೂತವನ್ನು ತಡೆಯುವಲ್ಲಿ ಸಹಾಯ ಮಾಡುತ್ತವೆ. ಅಧ್ಯಯನಗಳಿಂದ ತಿಳಿದುಬಂದಿದ್ದೇನೆಂದರೆ, ಆಂಟಿಒಕ್ಸಿಡೆಂಟ್‌ಗಳಲ್ಲಿ ಪ್ರಮುಖವಾಗಿರುವ ನರಿಂಗೆನಿನ್‌ ಮತ್ತು ನರಿಂಗಿನ್‌ ಈ ಎರಡೂ ದ್ರಾಕ್ಷಿಹಣ್ಣಿನಲ್ಲಿರುವುದರಿಂದ, ಯಕೃತ್ತಿನ ಫೈಬ್ರೋಸಿಸ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಬೀಜಗಳು(ನಟ್ಸ್‌):
    ಬೀಜಗಳು ಪೂರಕ ಕೊಬ್ಬುಗಳಾದ ಮೊನೊಸ್ಯಾಚುರೇಟೆಡ್‌ ಮತ್ತು ಪಾಲೀಸ್ಯಾಚುರೇಟೆಡ್‌ ಕೊಬ್ಬುಗಳ ಮೂಲವಾಗಿವೆ. ಬೀಜಗಳಲ್ಲಿ ಆಂಟಿಇನ್‌ಫ್ಲಮೆಟರಿ ಗುಣವಿದ್ದು, ಇವುಗಳು ಕೊಬ್ಬು ಶೇಖರಣೆಗೊಳ್ಳುವುದರ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ. ಅರ್‍ಗೈನಿನ್‌ ವಾಲ್ನಟ್‌ನಲ್ಲಿ ಸರಿಯಾದ ಪ್ರಮಾಣದಲ್ಲಿರುವುದರಿಂದ ಅವು ದೇಹದಿಂದ ಅಮೀನೋಗಳನ್ನು ಹೊರಹಾಕುವುದಕ್ಕೆ ಉಪಯುಕ್ತವಾಗಿವೆ.

ಇದನ್ನೂ ಓದಿ: Turnip Health Benefits:ಅತ್ಯಂತ ಹಳೆಯ ತರಕಾರಿ ನವಿಲುಕೋಸು ಪ್ರಯೋಜನಗಳನ್ನು ಬಲ್ಲಿರಾ!

  • ಕಾಫಿ:
    ಕಾಫಿ ನಮ್ಮೆಲ್ಲರ ಪ್ರೀತಿಯ ಪಾನೀಯ. ಕಾಫಿಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅದು ಲಿವರ್‌ಗೆ ವರದಾನವಾಗಬಲ್ಲದು. ಕಾಫಿಯಲ್ಲಿರುವ ಪಾಲಿಫಿನಾಲ್‌ಗಳು ಆಂಟೀ–ಇನ್‌ಫ್ಲಮೇಟರಿ ಗುಣಗಳನ್ನು ಹೊಂದಿವೆ. ಇವು ಲಿವರ್‌ನ್ ಉರಿಯೂತವನ್ನು ಶಮನಗೊಳಿಸಿ, ರ್‍ಯಾಡಿಕಲ್‌ಗಳನ್ನು ತೆಗೆದು ಹಾಕಿ, ಲಿವರ್‌ನಲ್ಲಿ ಸಿರೋಸಿಸ್‌ ಆಗದಂತೆ ಪರಿಣಾಮಕಾರಿಯಾಗಿ ತಡೆಯಬಲ್ಲದು ಎಂದು ಅಧ್ಯಯನದಿಂದ ತಿಳಿದುಬಂದಿದೆ.
  • ಕೋಸು ತರಕಾರಿಗಳು:
    ಎಲೆಕೋಸು(ಕ್ಯಾಬೇಜ್‌), ಬ್ರೋಕೋಲಿ, ಹೂಕೋಸು, ಸಾಸಿವೆ ಎಲೆಗಳು, ಕೆಲೆ ಎಲೆಗಳು ಇವೆಲ್ಲವುಗಳು ಕೋಸು ತರಕಾರಿಗಳಾಗಿವೆ. ಇವುಗಳಲ್ಲಿ ಅಧಿಕವಾಗಿರುವ ಫ್ಲವೋನೈಡ್ಸ್‌, ಫೈಟೋನ್ಯಟ್ರಿಯಂಟ್ಸ್‌, ಕ್ಯಾರೋಟಿನೈಡ್ಸ್‌ಗಳು ದೇಹ ಶುದ್ಧೀಕರಣಕ್ಕೆ ಸಹಾಯ ಮಾಡುವಂತವುಗಳು. ಅಷ್ಟೇ ಅಲ್ಲದೇ, ಕೋಸು ತರಕಾರಿಗಳಲ್ಲಿರುವ ಗ್ಲುಕೋಸೈನಾಲೇಟ್ಸ್‌ಗಳು ಕಿಣ್ವಗಳ ಉತ್ಪಾದನೆಗೆ ಪ್ರಚೋದನೆಯನ್ನು ನೀಡಿ, ರಕ್ತದಲ್ಲಿನ ಭಾರವಾದ ಖನಿಜಗಳನ್ನು ಹೊರಹಾಕುವುದಕ್ಕೆ ಪ್ರಯೋಜನಕಾರಿಯಾಗಿದೆ.
  • ಬೆಳ್ಳುಳ್ಳಿ:
    ‌ಬೆಳ್ಳುಳ್ಳಿಯು ಆಲಿಸಿನ್‌, ವಿಟಾಮಿನ್‌ B6, ಸೆಲೆನಿಯಮ್‌ ಮುಂತಾದವುಗಳು ಆಗರವಾಗಿದೆ. ಬೆಳ್ಳುಳ್ಳಿಯಲ್ಲಿರುವ ಸಲ್ಫರ್‌ ಸಂಯುಕ್ತಗಳು ಆಂಟಿಬೊಯೋಟಿಕ್‌, ಆಂಟಿಫಂಗಲ್‌, ಆಂಟಿಒಕ್ಸಿಡೆಂಟ್‌ ಗುಣ ಹೊಂದಿದೆ. ಬೆಳ್ಳುಳ್ಳಿಯಲ್ಲಿರುವ ಸೆಲೇನಿಯಂ ಲಿವರ್‌ನಲ್ಲಿರುವ ವಿಷ ಹೊರಹಾಕುವಂತೆ ಪ್ರಚೋದಿಸುತ್ತದೆ.
  • ಅರಿಶಿಣ:
    ಅರಿಶಿಣವು ಅದ್ಭುತವಾದ ಪ್ರಯೋಜನಗಳಿಂದ ಕೂಡಿದೆ. ಅಧ್ಯಯನಗಳ ಪ್ರಕಾರ ಅರಿಶಿಣವು ಬೈಲ್‌ ಉತ್ಪತ್ತಿಗೆ ಮತ್ತು ಲಿವರ್‌ ಶುದ್ಧೀಕರಣಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಫ್ರೀ ರ್‍ಯಾಡಿಕಲ್‌ಗಳು ಲಿವರ್‌ ಘಾಸಿಗೊಳಿಸುವುದನ್ನು ತಡೆಯುವಲ್ಲಿ ಅರಿಶಿಣವು ಬಹಳ ಸಹಕಾರಿಯಾಗಿದೆ.
  • ನೀರು:
    ‌ಅತೀ ಸುಲಭವಾಗಿ ಸಿಗುವ ಜೀವದ್ರವ ನೀರು. ಯಥೇಚ್ಛವಾಗಿ ನೀರು ಕುಡಿಯುವುದರಿಂದ ದೇಹದಲ್ಲಿನ ಅನುಪಯುಕ್ತ ಪದಾರ್ಥಗಳನ್ನು ನೇರವಾಗಿ ಹೊರದೂಡಲು ಲಿವರ್‌ಗೆ ಸಹಾಯ ಮಾಡಿದಂತಾಗುತ್ತದೆ.

ಇದನ್ನೂ ಓದಿ:Mosquito-Free Tips : ಈ ಮಳೆಗಾಲದಲ್ಲಿ ನಿಮ್ಮ ಮನೆಯನ್ನು ಸೊಳ್ಳೆಗಳಿಂದ ನೈಸರ್ಗಿಕವಾಗಿ ರಕ್ಷಿಸುವುದು ಹೇಗೆ ಗೊತ್ತಾ?

(Protect Liver Do you know what are the best food for liver)

Comments are closed.