Roti Vs Bread : ತೂಕ ಇಳಿಸಲು ರೋಟಿ ಅಥವಾ ಬ್ರೆಡ್‌ ಆಯ್ಕೆ ಮಾಡುವ ಮೊದಲು ಒಮ್ಮೆ ಯೋಚಿಸಿ

Roti Vs Bread : ಭಾರತೀಯರ (Indians) ಪ್ರಮುಖ ಆಹಾರಗಳಲ್ಲಿ ರೋಟಿಯೂ (Roti) ಒಂದು. ರೋಟಿ ಇಲ್ಲದೇ ಊಟ ಪೂರ್ಣ ಎಂದು ಎನಿಸುವುದೇ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸುಲಭದಲ್ಲಿ ದೊರಕುವ ವಸ್ತುಗಳ ಮೊರೆ ಹೋಗುತ್ತಿದ್ಧೇವೆ. ರೋಟಿ ಮಾಡುವ ಕಷ್ಟವೇ ಬೇಡ ಎಂದು ಬ್ರೆಡ್‌ (Bread) ಕಡೆಗೆ ಮುಖ ಮಾಡಿದ್ದೇವೆ. ರೋಟಿಯನ್ನು ಬಿಟ್ಟರೆ ಮತ್ತೊಂದು ಉತ್ತಮ ಆಯ್ಕೆ ಬ್ರೆಡ್‌ ಎಂದು ಕೊಂಡಿದ್ದೇವೆ. ಅದೃಷ್ಟವಶಾತ್‌ ಈಗೀಗ ಬ್ರೌನ್‌ ಬ್ರೆಡ್‌, ಮಲ್ಟಿಗ್ರೇನ್‌ ಬ್ರೆಡ್‌ ಮತ್ತು ಬಿಳಿ ಬ್ರೆಡ್‌ನಂತಹ ವಿವಿಧ ಬಗೆಗಳಲ್ಲಿ ಬರುತ್ತಿವೆ. ಆದರೆ ಮುಂದಿನ ಬಾರಿ ರೋಟಿಯ ಬದಲಿಗೆ ಬ್ರೆಡ್‌ ಆಯ್ಕೆ ಮಾಡುವ ಮೊದಲು ಒಮ್ಮೆ ಯೋಚಿಸಿ.

ರೋಟಿ ಮತ್ತು ಬ್ರೆಡ್‌ ಎರಡರ ನಡುವೆ ಯಾವುದು ಆರೋಗ್ಯಕರ ಅಯ್ಕೆ? ರೋಟಿ ಮತ್ತು ಬ್ರೆಡ್‌ ಎರಡೂ ವಿಭಿನ್ನ ರೀತಿಯದ್ದಾಗಿದೆ. ಅವು ಉತ್ತಮ ಪರಸ್ಪರ ಬದಲೀ ಆಯ್ಕೆಗಳಲ್ಲ.

ರೋಟಿ ಮತ್ತು ಬ್ರೆಡ್‌ ಎರಡರಲ್ಲಿ ಉತ್ತಮ ಆಯ್ಕೆ ಯಾವುದು?

  • ರೋಟಿಯನ್ನು ಸಂಪೂರ್ಣ ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರಲ್ಲಿ ಫೈಬರ್‌ ಸಮೃದ್ಧವಾಗಿದೆ. ಅಷ್ಟೇ ಅಲ್ಲದೇ, ಜೋಳ, ಬಾಜ್ರಾ, ರಾಗಿ ಮುಂತಾದ ಸಿರಿಧಾನ್ಯಗಳಿಂದ ತಯಾರಿಸುವ ರೋಟಿಯು ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಆದರೆ ಸಂಪೂರ್ಣ ಗೋಧಿಯಿಂದ ಮಾಡಲ್ಪಟ್ಟಿದೆ ಎಂದು ನಂಬಲಾದ ಬ್ರೆಡ್ ಸ್ಲೈಸ್‌ಗಳನ್ನು ಭಾಗಶಃ ಸಂಸ್ಕರಿಸಿದ ಹಿಟ್ಟಿನಿಂದ (ಮೈದಾ) ತಯಾರಿಸಲಾಗುತ್ತದೆ, ಇದು ಜೀರ್ಣಾಂಗಕ್ಕೆ ಹಾನಿಯನ್ನುಂಟುಮಾಡುತ್ತದೆ.
  • ರೋಟಿಯು ಕಾರ್ಬೋಹೈಡ್ರೇಟ್‌ಗಳು, ಕರಗುವ ಫೈಬರ್ ಮತ್ತು ಪ್ರೋಟೀನ್‌ಗಳನ್ನು ಹೊಂದಿದೆ. ಇದು ಆರೋಗ್ಯಕರ ಆಯ್ಕೆಯಾಗಿದೆ. ಈ ಫೈಬರ್‌ಗಳು ಶಕ್ತಿಯನ್ನು ಹೆಚ್ಚಿಸಿ, ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವೆಯನ್ನು ತಡೆಯುತ್ತದೆ.
  • ಬ್ರೆಡ್‌ ತಯಾರಿಕೆಯಲ್ಲಿ ಉಪಯೋಗಿಸುವ ಯೀಸ್ಟ್‌ ಜೀರ್ಣಾಂಗ ವ್ಯವಸ್ಥೆಗೆ ಉತ್ತಮವಲ್ಲ. ಇದು ದೇಹಕ್ಕೆ ನಿರ್ಜಲೀಕರಣವನ್ನು ಉಂಟು ಮಾಡುತ್ತದೆ.
  • ರೋಟಿಯು ತಾಜಾವಾಗಿರುವುದರಿಂದ ಅದರಲ್ಲಿ ಯಾವುದೇ ರೀತಿಯ ಪ್ರಿಸರ್ವೇಟೀವ್‌ಗಳು ಇರುವುದಿಲ್ಲ. ಇದರಿಂದ ಅಧಿಕ ಪೌಷ್ಟಿಕಾಂಶಗಳು ದೇಹಕ್ಕೆ ಸೇರುತ್ತವೆ.
  • ಬೆಳಗಿನ ಉಪಹಾರಕ್ಕೆ ಸಾಮಾನ್ಯವಾಗಿ ರೋಟಿಯ ಜೊತೆ ತರಕಾರಿಗಳು ಅಥವಾ ಬೇಳೆಕಾಳುಗಳನ್ನು ಸೇವಿಸುವುದರಿಂದ ಅದು ಸಂತುಲಿತ ಆಹಾರವಾಗಿದ್ದು, ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ.

ಆದ್ದರಿಂದ ತೂಕ ಇಳಿಕೆಯ ಪ್ರಯಾಣದಲ್ಲಿ ರೋಟಿಯ ಬದಲಿಗೆ ಬ್ರೆಡ್‌ ಆಯ್ಕೆ ಮಾಡುವ ಮೊದಲು ಒಮ್ಮೆ ಯೋಚಿಸಿ.‌

ಇದನ್ನೂ ಓದಿ : Banana Benefits : ಬಾಳೆಕಾಯಿ ತಿನ್ನಿ, ಕ್ಯಾನ್ಸರ್‌ನಿಂದ ದೂರವಿರಿ; ರಿಸರ್ಚ್‌ನಿಂದ ಬಯಲಾಯ್ತು ಈ ಸೀಕ್ರೆಟ್‌

ಇದನ್ನೂ ಓದಿ : Leaves to Lose Weight : ನಿಮಗಿದು ಗೊತ್ತಾ; ಈ ಎಲೆಗಳನ್ನು ಸೇವಿಸುವುದರಿಂದಲೂ ತೂಕ ಕಡಿಮೆ ಮಾಡಿಕೊಳ್ಳಬಹುದು

(Roti Vs Bread what is better for weight loss)

Comments are closed.