Stop Hiccups Instantly:ತಕ್ಷಣವೇ ಬಿಕ್ಕಳಿಕೆ ನಿಲ್ಲಬೇಕಾ ? ಹಾಗಾದ್ರೆ ಇಲ್ಲಿದೆ ಸುಲಭ ಪರಿಹಾರ

(Stop Hiccups Instantly)ಸಾಮಾನ್ಯವಾಗಿ ಬಿಕ್ಕಳಿಕೆ ಎಲ್ಲರಿಗೂ ಬರುತ್ತದೆ. ಇದಕ್ಕೆ ಸಮಯ ಸಂದರ್ಭ ಇಲ್ಲ , ಕೆಲವರಿಗೆ ಸ್ವಲ್ಪ ಹೊತ್ತು ಬಿಕ್ಕಳಿಕೆ ಬಂದು ನಿಂತು ಬಿಡುತ್ತದೆ ಇನ್ನು ಕೆಲವರಿಲ್ಲಿ ಎನೆ ಮಾಡಿದರು ಬಿಕ್ಕಳಿಕೆ ನಿಲ್ಲಿವುದಿಲ್ಲ .ಸಾಧಾರಣವಾಗಿ ಬಿಕ್ಕಳಿಕೆ ಬಂದಾಗ ನೀರು ಕುಡಿದು ಸುಮ್ಮನಾಗುತ್ತಾರೆ. ಬಿಕ್ಕಳಿಕೆ ನಿಲ್ಲಿಸುವುದಕ್ಕೆ ಹಲವು ಉಪಾಯಗಳಿವೆ ಈ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.

Stop Hiccups Instantlyಶುಂಠಿ
ಶುಂಠಿಯಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅರ್ಧ ಇಂಚು ಶುಂಠಿಯನ್ನು ಚೆನ್ನಾಗಿ ಜಗಿದು ರಸ ನುಂಗುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ಏಲಕ್ಕಿ
ಮೊದಲಿಗೆ ಕುಟ್ಟಣಿಗೆಯಲ್ಲಿ ಏಲಕ್ಕಿಯನ್ನು ಸಿಪ್ಪೆ ಸಹಿತ ಕುಟ್ಟಿ ಪುಡಿಮಾಡಿಕೊಳ್ಳಬೇಕು . ನಂತರ ಒಂದು ಪಾತ್ರೆಯಲ್ಲಿ ನೀರು ಇಟ್ಟುಕ್ಕೊಂಡು ಪುಡಿ ಮಾಡಿದ ಏಲಕ್ಕಿ ಹಾಕಿ ಚೆನ್ನಾಗಿ ಕುದಿಸಿಕೊಂಡು ಲೋಟಕ್ಕೆ ಸೊಸಿಕೊಳ್ಳಬೇಕು . ಸೊಸಿಕೊಂಡ ನೀರನ್ನು ಬೆಚ್ಚಗಿರುವಾಗ ಕುಡಿದರೆ ತಕ್ಷಣ ಬಿಕ್ಕಳಿಕೆ ನಿಲ್ಲುತ್ತದೆ.

ಸಾಸಿವೆ ಮತ್ತು ತುಪ್ಪದ ಮಿಶ್ರಣ
ಚಮಚದಲ್ಲಿ ಸಾಸಿವೆ ಮತ್ತು ತುಪ್ಪ ಹಾಕಿ ಕಲಸಿಕೊಂಡು ನುಂಗಿದರೆ ಬಿಕ್ಕಳಿಕೆ ನಿಲ್ಲುತ್ತದೆ.

ಒಂದು ಲೋಟ ತಣ್ಣಗಿರುವ ನೀರನ್ನು ತೆಗೆದುಕೊಂಡು ಆಗಾಗ ಗುಟುಕಾಗಿ ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ಒಂದು ಲೋಟ ನೀರು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ವೆನೆಗಾರ್‌ ಹಾಕಿ ಮಿಶ್ರಣ ಮಾಡಿ ಗುಟುಕಾಗಿ ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ಒಂದು ಚಮಚ ಸಕ್ಕರೆಯನ್ನು ಬಾಯಲ್ಲಿ ಹಾಕಿಕೊಂಡು ನಿದಾನವಾಗಿ ಚಿಪುತ್ತಾ ರಸವನ್ನು ನುಂಗುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ಒಂದು ಲೋಟ ನೀರಿಗೆ ಒಂದು ಚಮಚ ಜೇನುತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಆ ನೀರನ್ನು ಒಂದೊಂದೆ ಗುಟುಕಾಗಿ ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ತುಂಬಾ ಬಿಕ್ಕಳಿಕೆ ಇರುವಾಗ ಮತ್ತು ಬಿಕ್ಕಳಿಕೆ ನಿಲ್ಲುತ್ತಿಲ್ಲಾ ಅನ್ನುವ ಸಂದರ್ಭದಲ್ಲಿ ಒಂದು ಲೋಟ ಬೆಚ್ಚಗಿನ ಹಾಲು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ಅರ್ಧ ಲೋಟ ನೀರಿಗೆ ಒಂದು ಚಿಟಿಕೆ ಉಪ್ಪು, ಏಲಕ್ಕಿ ಸಿಪ್ಪೆ ಹಾಕಿ ಕರಡಿಕೊಂಡು ಗುಟುಕಾಗಿ ನೀರು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ಇದನ್ನೂ ಓದಿ:Nagging Sore Throat Remedies:ಕಾಡುತ್ತಿರುವ ಗಂಟಲು ನೋವಿನಿಂದ ಮುಕ್ತಿ ಪಡೆಯಲು ಈ ಟಿಪ್ಸ್‌ ಅನುಸರಿಸಿ

ಇದನ್ನೂ ಓದಿ:Mouth Ulce Relief:ಬಾಯಿ ಹುಣ್ಣಿನಿಂದ ಆಹಾರ ಸೇವಿಸಲು ಆಗುತ್ತಿಲ್ಲವೇ ? ಹಾಗಾದ್ರೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

ಇದನ್ನೂ ಓದಿ:Home Remedies For Toothache:ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಿರಾ? ಇಲ್ಲಿದೆ ಪರಿಹಾರ

ನೀರಲ್ಲಿ ಐಸ್‌ ಹಾಕಿಕೊಂಡು ಆ ನೀರನ್ನು ಗುಟುಕಾಗಿ ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ಒಂದುವೇಳೆ 48 ಗಂಟೆಗಳು ಕಳೆದರು ಬಿಕ್ಕಳಿಕೆ ನಿಂತಿಲ್ಲವೆದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಬೇಟಿ ಮಾಡಿ ಅವರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

Stop Hiccups Instantly Should hiccups stop immediately? So here is an easy solution

Comments are closed.