ಚಳಿಗಾಲದಲ್ಲಿ ಈ ಪೌಷ್ಟಿಕ ಸೂಪ್‌ಗಳು ವೃದ್ದಿಸುತ್ತವೆ ನಿಮ್ಮ ಆರೋಗ್ಯ

ಚಳಿಗಾಲದಲ್ಲಿ ನಮ್ಮ ದೇಹದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡಲು ಸೂಪ್ (Soups Benefits) ಸೂಕ್ತ ಮಾರ್ಗವಾಗಿದೆ. ಏಕೆಂದರೆ ಇದರಲ್ಲಿ ಹೆಚ್ಚಾಗಿ ತರಕಾರಿಗಳಿಂದ ತುಂಬಿದ್ದು, ಇದನ್ನು ಅತಿ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ತಯಾರಿಸಬಹುದು. ಈ ಸೂಪ್‌ಗಳನ್ನು ತುಂಬಾ ಗಡಿಬಿಡಿಯಲ್ಲಿ ಇರುವಾಗ ಬಹಳ ಬೇಗನೆ ಉತ್ತಮ ಊಟವಾಗಿ ಅಥವಾ ಐಷಾರಾಮಿ ಡಿನ್ನರ್ ಪಾರ್ಟಿ ಸ್ಟಾರ್ಟರ್‌ಗಳಾಗಿ ಮಾಡಬಹುದು. ಈ ಚಳಿಗಾಲದ ಸಮಯದಲ್ಲಿ ಸೂಪ್‌ಗಳನ್ನು ಆಹಾರವಾಗಿ ಬಳಸುವುದರಿಂದ ಶೀತ, ಜ್ವರ ಹಾಗೂ ಕಫದಿಂದ ದೂರವಿರಬಹುದು. ಊಟದ ಮೊದಲು ಸೂಪ್‌ನ್ನು ಕುಡಿದು ಊಟ ಮಾಡುವುದರಿಂದ ನಮ್ಮ ಹೊಟ್ಟೆಗೆ ಬೇಕಾದಷ್ಟು ಪ್ರಮಾಣದಲ್ಲಿ ಆಹಾರವನ್ನು ಸೇವಿಸಬಹುದು.

ಚಳಿಗಾಲದಲ್ಲಿ ಬೆಚ್ಚಗಿನ ಆಹಾರಗಳು ವಿಶೇಷವಾಗಿ ಪ್ರಮುಖವಾಗಿರುತ್ತದೆ. ಈ ಸೂಪ್‌ಗಳು ಚಳಿಗಾಲದಲ್ಲಿ ಸಾಮಾನ್ಯ ಹೆಚ್ಚಿನವರಿಗೆ ಇಷ್ಟಪಡುತ್ತಾರೆ. ಅವುಗಳನ್ನು ತಯಾರಿಸುವುದು ಸುಲಭವಾಗಿದ್ದು, ಯಾವುದೇ ತರಕಾರಿ ತಿನ್ನದವರಿಗೆ ತಿನ್ನಲು ಸಹಾಯ ಮಾಡುವ ಸುಲಭವಾದ ಮಾರ್ಗವಾಗಿದೆ. ಅಷ್ಟೇ ಅಲ್ಲದೇ ನೀವು ತರಕಾರಿ ಜೊತೆಗೆ ಮಾಂಸವನ್ನು ಮಿಶ್ರಣ ಮಾಡಿ ಈ ಚಳಿಗಾಲಕ್ಕೆ ಹೊಂದುವಂತೆ ಆರೋಗ್ಯಕರ, ರುಚಿಕರವಾದ ಸೂಪ್‌ನ್ನು ಸಹ ಮಾಡಿ ಕುಡಿಯಬಹುದು.

ಈ ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಾಗಿಸುವ ಕೆಲವು ಸೂಪ್‌ಗಳು ಇಲ್ಲಿವೆ :

1. ಹುರುಳಿ ಮತ್ತು ತರಕಾರಿ ಸೂಪ್ :
ಚಳಿಗಾಲದಲ್ಲಿ ನೀವು ಪೋಷಕಾಂಶಗಳನ್ನು ಒಳಗೊಂಡ ಆಹಾರ ಸೇವನೆಯ ಮೇಲೆ ಗಮನ ಇಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಸೂರ್ಯನ ಕಿರಣಗಳ ಕೊರತೆ ಇರುವ ಪ್ರದೇಶಗಳಲ್ಲಿ ಕಡಿಮೆ ವಿಟಮಿನ್ ಡಿ ಮತ್ತು ಕಡಿಮೆ ತಾಜಾ ಹಣ್ಣುಗಳು ಕಡಿಮೆ ವಿಟಮಿನ್ ಸಿ ಕೊರತೆ ಇರುತ್ತದೆ ಎಂದರ್ಥ. ಈ ಸೂಪ್‌ನಲ್ಲಿ ಹುರುಳಿ ಜೊತೆಗೆ ಹೆಚ್ಚಿನ ತರಕಾರಿಗಳು ಇರುವುದರಿಂದ ಕಬ್ಬಿಣ ಮತ್ತು ವಿಟಮಿನ್ ಸಿ ಯಿಂದ ವಿಟಮಿನ್ ಎ ವರೆಗೆ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದರಿಂದಾಗಿ ಚಳಿಗಾಲದಲ್ಲಿ ನಮ್ಮಿಂದ ಕಾಯಿಲೆಗಳನ್ನು ದೂರವಿಡುತ್ತದೆ.

2. ತರಕಾರಿ ಮತ್ತು ಲೆಂಟಿಲ್ ಸೂಪ್ :
ಈ ಸೂಪ್‌ನ್ನು ಸೇವಿಸುವುದರಿಂದ ಫೈಬರ್, ವಿಟಮಿನ್‌ಗಳು ಮತ್ತು ಕಬ್ಬಿಣಾಂಶಗಳು ಹೇರಳವಾಗಿ ಸಿಗುತ್ತದೆ. ಇದು ಚಳಿಗಾಲದಲ್ಲಿ ನಮ್ಮ ದೇಹವನ್ನು ಆರೋಗ್ಯಕರವಾಗಿರಲು ಮತ್ತು ಯಾವುದೇ ಶೀತ, ಜ್ವರದಂತಹ ಕಾಯಿಲೆಗಳ ವಿರುದ್ಧ ಹೋರಾಡಲು ಸೂಕ್ತವಾಗಿದೆ. ಈ ಪಾಕವಿಧಾನದಲ್ಲಿ ಮಸೂರವನ್ನು ಸೇರಿಸುವುದರಿಂದ ನಮ್ಮ ದೇಹದಲ್ಲಿ ಪ್ರೋಟೀನ್ ಅಂಶವನ್ನು ಹೆಚ್ಚಿಸುತ್ತದೆ. ಚಳಿಗಾಲದ ತಿಂಗಳುಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿ ಆಗಿದೆ.

3. ಚಿಕನ್ ನೂಡಲ್ ಸೂಪ್ :
ಈ ಪಾಕವಿಧಾನವು ಶುಂಠಿ, ಚಿಕನ್ ಮತ್ತು ಸ್ವೀಟ್‌ಕಾರ್ನ್‌ನ ಬಳಕೆಯೊಂದಿಗೆ ಕ್ಲಾಸಿಕ್ ಚೈನೀಸ್ ಸೂಪ್ ಆಗಿರುತ್ತದೆ. ನಿಮ್ಮ ಚಳಿಗಾಲದ ಊಟಕ್ಕೆ ಈ ಸೂಪ್‌ ಕುಡಿಯಲು ತುಂಬಾ ರುಚಿಕರವಾಗಿರುತ್ತದೆ. ಈ ಸೂಪ್‌ ಕಡಿಮೆ-ಕೊಬ್ಬಿನ, ಕಡಿಮೆ-ಕ್ಯಾಲೋರಿ, ಹೆಚ್ಚಿನ-ಪ್ರೋಟೀನ್ ಅಂಶವುಳ್ಳ ಆಹಾರವಾಗಿದೆ. ಈ ಸಿಂಪಲ್‌ ಸೂಪ್ ಮನೆಯಲ್ಲಿ ನಾವು ಸುಲಭವಾಗಿ ತಯಾರಿಸಬಹುದು. ಅಷ್ಟೇ ಅಲ್ಲದೇ ಈ ಸೂಪ್‌ನ್ನು ಎಲ್ಲರ ಇಷ್ಟ ಪಟ್ಟು ಸೇವಿಸುತ್ತಾರೆ.

ಇದನ್ನೂ ಓದಿ : Healthy herbal tea: ಚಳಿಗಾಲದಲ್ಲಿ ಆರೋಗ್ಯವಾಗಿರಲು ಕುಡಿಯಿರಿ ಈ 5 ಆರೋಗ್ಯಕರ ಗಿಡಮೂಲಿಕೆ ಚಹಾ

ಇದನ್ನೂ ಓದಿ : ಚಳಿಗಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಈ 5 ಅಡುಗೆ ಪದಾರ್ಥ

ಇದನ್ನೂ ಓದಿ : Harmone Health: ಹಾರ್ಮೋನ್‌ ಸಮಸ್ಯೆ ಸಮತೋಲನಕ್ಕೆ ಇಲ್ಲಿವೆ ಸುಲಭ ಪರಿಹಾರ

4. ಕಾಲು ಸೂಪ್‌ :
ಕಾಲು ಸೂಪ್‌ ಸವಿಯಲು ಬಹಳಷ್ಟು ರುಚಿಯಾಗಿರುತ್ತದೆ. ಮಟನ್, ಚಿಕನ್‌ ಅಗ್ಗವಾಗಿರುವುದರ ಜೊತೆಗೆ, ಮೂಳೆ ಸೂಪ್ ನಿಮಗೆ ಅದ್ಭುತವಾಗಿ ಹಾಗೂ ರುಚಿಕರವಾಗಿರುತ್ತದೆ. ಕೋಳಿ ಮೂಳೆಗಳಿಂದ ಮಾಡಿದ ಕಾಲು ಸೂಪ್ ಜ್ವರ, ಶೀತಗಳು ಮತ್ತು ಉಸಿರಾಟದ ಸೋಂಕುಗಳ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಹೆಚ್ಚು ಸಹಾಯ ಮಾಡುತ್ತದೆ.

Soups Benefits: These nutritious soups boost your health in winter

Comments are closed.