get rid of onion and garlic smell :ಈರುಳ್ಳಿ, ಬೆಳ್ಳುಳ್ಳಿ ಸೇವನೆಯಿಂದ ಬಾಯಿಯಿಂದ ಬರುವ ವಾಸನೆ ಹೋಗಲಾಡಿಸಲು ಇಲ್ಲಿದೆ ಮನೆಮದ್ದು

get rid of onion and garlic smell : ಅನೇಕ ಜನರು ಹಸಿ ಈರುಳ್ಳಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಬಾಯಿಯಿಂದ ಈರುಳ್ಳಿಯ ವಾಸನೆ ಬರಲಾರಂಭಿಸುತ್ತದೆ. ಇದರಿಂದಾಗಿ ಸಾರ್ವಜನಿಕ ಜೀವನದಲ್ಲಿ ನಿಮಗೆ ಮುಜುಗರ ಎನಿಸುವಂತಹ ಪ್ರಸಂಗ ಎದುರಾಗಬಹುದು. ಈ ಸಮಸ್ಯೆಯಿಂದ ಪಾರಾಗಲು ನೀವು ಮನೆಮದ್ದುಗಳ ಸಹಾಯವನ್ನು ಪಡೆಯಬಹುದಾಗಿದೆ. ಈ ಮನೆ ಮದ್ದುಗಳು ನಿಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುವುದನ್ನು ತಪ್ಪಿಸುತ್ತವೆ. ಅಲ್ಲದೇ ಬಾಯಿಯ ಆರೋಗ್ಯಕ್ಕೂ ಕೂಡ ಈ ಮನೆ ಮದ್ದುಗಳು ಉತ್ತಮವಾಗಿವೆ. ಹಾಗಾದರೆ ಆ ಮನೆ ಮದ್ದುಗಳು ಯಾವುದು..? ಇಲ್ಲಿದೆ ಮಾಹಿತಿ.

ಸೇಬು –
ಹಸಿ ಈರುಳ್ಳಿಯನ್ನು ತಿಂದ ತಕ್ಷಣವೇ ನೀವು ಸೇಬು ತಿನ್ನುವ ಅಭ್ಯಾಸವನ್ನು ರೂಡಿ ಮಾಡಿಕೊಳ್ಳಿ. ಸೇಬಿನಲ್ಲಿರುವ ಎಂಜೈಮ್​ಗಳು ಈರುಳ್ಳಿ ಹಾಗೂ ಬೆಳ್ಳುಳ್ಳಿಯಂತಹ ಆಹಾರ ಪದಾರ್ಥಗಳಲ್ಲಿ ಇರುವ ಸಲ್ಪರ್​ನಂತಹ ಸಂಯುಕ್ತಗಳನ್ನು ವಿಭಜಿಸುತ್ತದೆ. ಇದರಿಂದ ಬಾಯಿಯಿಂದ ಬರುವ ದುರ್ವಾಸನೆಯು ಮಾಯವಾಗುತ್ತದೆ.

ಉಗುರು ಬೆಚ್ಚನೆಯ ನೀರು-
ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಬರುವ ವಾಸನೆಯನ್ನು ತೊಡೆದು ಹಾಕಲು ಅತ್ಯಂತ ಸುಲಭ ಹಾಗೂ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಉಗುರು ಬೆಚ್ಚನೆಯ ನೀರನ್ನು ಸೇವನೆ ಮಾಡುವುದಾಗಿದೆ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಹಾಗೂ ಟಾಕ್ಸಿನ್​ ಅಂಶಗಳನ್ನು ತೆಗೆದು ಹಾಕುತ್ತದೆ. ಜೊತೆ ಬಾಯಿಯಲ್ಲಿನ ಕೆಟ್ಟ ವಾಸನೆಯನ್ನು ತೊಡೆದು ಹಾಕುತ್ತದೆ.

ಹಾಲು –
ಆಹಾರ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಹಾಲು ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಸೇವನೆಯಿಂದ ಬರುವ ವಾಸನೆಯನ್ನು ತೊಡೆದು ಹಾಕುವಲ್ಲಿ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಆದರೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸೇವನೆ ಮಾಡಿದ ಬಳಿಕ ಹಾಲು ಕುಡಿಯುವ ನಡುವೆ ಕನಿಷ್ಟ 15 ರಿಂದ 20 ನಿಮಿಷಗಳ ಅಂತರವಿರುವಂತೆ ನೋಡಿಕೊಳ್ಳಲು ಮರೆಯಬೇಡಿ.
ನಿಂಬೆ ಪಾನಕ –
ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ಅದರ ಬ್ಯಾಕ್ಟೀರಿಯಾ ವಿರೋಧಿ ಗುಣವು ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಾಸನೆಯನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ನಿಂಬೆರಸವನ್ನು ಬೆರೆಸಿ ಮತ್ತು ಊಟ ಮಾಡಿದ 15 ನಿಮಿಷಗಳ ನಂತರ ಈ ನೀರಿನಿಂದ 3 ರಿಂದ 4 ಬಾರಿ ಗಾರ್ಗ್ಲ್ ಮಾಡಿ.
ಪುದೀನ-
ಪುದೀನಾವು ಕ್ಲೋರೊಫಿಲ್ ಅನ್ನು ಹೊಂದಿರುತ್ತದೆ, ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಈರುಳ್ಳಿಯಲ್ಲಿರುವ ಸಲ್ಫರ್ ಅನ್ನು ಕಡಿಮೆ ಮಾಡುತ್ತದೆ, ಇದು ಬಾಯಿಯಿಂದ ಈರುಳ್ಳಿ ವಾಸನೆಯನ್ನು ನಿಲ್ಲಿಸುತ್ತದೆ. ಆಹಾರ ತಿಂದ ನಂತರ ಅಥವಾ ಈರುಳ್ಳಿ ತಿಂದ ನಂತರ ಪುದೀನಾ ರಸ ಅಥವಾ ಪುದೀನಾ ಎಲೆಗಳನ್ನು ಸೇವಿಸಬಹುದು.

these food items will help you get rid of onion and garlic smell

ಇದನ್ನು ಓದಿ : success in business: ವ್ಯವಹಾರದಲ್ಲಿ ಪ್ರಗತಿಗಾಗಿ ಕಚೇರಿಯಲ್ಲಿ ತಂದಿಡಿ ಈ ವಿಶೇಷ ವಸ್ತು

ಇದನ್ನೂ ಓದಿ : Bedroom Vastu Tips : ದಾಂಪತ್ಯ ಜೀವನದ ವಿರಸ ದೂರ ಮಾಡುತ್ತದೆ ಈ ವಾಸ್ತು ಟಿಪ್ಸ್​

Comments are closed.