World Food Day 2022 : ಇಂದು “ವಿಶ್ವ ಆಹಾರ ದಿನ” : ಏನಿದರ ಮಹತ್ವ

ಇಂದು “ವಿಶ್ವ ಆಹಾರ ದಿನ”(World Food Day 2022)ವನ್ನು ಆಚರಿಸಲಾಗುತ್ತಿದೆ.ಹಸಿವಿನ ವಿರುದ್ಧ ಹೋರಾಡಲು ಇರುವ ದಿನವಾಗಿದೆ. ವಿಶ್ವ ಆಹಾರ ದಿನವನ್ನು ಅಕ್ಟೋಬರ್ 16, 1945ರಲ್ಲಿ ಸ್ಥಾಪನೆಯಾದ ಯುನೈಟೆಡ್ ನೇಷನ್ಸ್ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್ (FAO)ಸ್ಥಾಪನೆಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತದೆ. ಜಾಗತಿಕವಾಗಿ ಹಸಿವನ್ನು ಪರಿಹರಿಸಲು ಮತ್ತು ವಿಶ್ವದಾದ್ಯಂತ ಹಸಿವನ್ನು ನಿರ್ಮೂಲನೆ ಮಾಡಲು ಸಂಕಲ್ಪದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಆಹಾರ ದಿನ 2022 ಹಿನ್ನೆಲೆ:


ವಿಶ್ವ ಆಹಾರ ದಿನವನ್ನು FAO ಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅರಂಭಿಸಲಾಗಿದೆ. ಹಂಗೇರಿಯನ್‌ ಕೃಷಿ ಮತ್ತು ಆಹಾರದ ಮಾಜಿ ಸಚಿವ ಡಾ. ಪಾಲ್‌ ರೊಮಾನಿ ಅವರು ನವೆಂಬರ್‌ 1979ರಲ್ಲಿ ವಿಶ್ವ ಆಹಾರ ದಿನದ ಬಗ್ಗೆ ಪ್ರಸ್ತಾಪಿಸಿದ್ದರು. ಇಂದು ಈ ದಿನವನ್ನು ಜಗತ್ತಿನಾದ್ಯಂತ 150ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ.

ವಿಶ್ವ ಆಹಾರ ದಿನ 2022 ಉದ್ದೇಶ:

ಸತತದ ಎರಡು ವರ್ಷದಿಂದ ಕೋವಿಡ್‌-19 ಸಾಂಕ್ರಾಮಿಕ ರೋಗ, ಹವಾಮಾನ ಬದಲಾವಣೆ, ಸಂಘರ್ಷ, ಏರುತ್ತಿರುವ ಬೆಲೆಗಳು ಮತ್ತು ಅಂತರಾಷ್ಟ್ರೀಯ ಉದ್ವಿಗ್ನತೆ ಸೇರಿದಂತೆ ಬಹಳಷ್ಟು ಜಾಗತಿಕ ಸವಾಲುಗಳು ಸೇರಿದಂತೆ ಹಲವು ವಿಚಾರಗಳನ್ನು ಇರಿಸಿಕೊಂಡು ಈ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷ ಸುರಕ್ಷಿತ ಆಹಾರ ಪದ್ಧತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ. ಮುಂದಿನ ವರ್ಷಗಳಲ್ಲಿ ಜನರು ಆರ್ಥಿಕತೆ ಮತ್ತು ಪರಿಸರಕ್ಕೆ ಅನುಕೂಲವಾಗುವ ಸುರಕ್ಷಿತ ಆಹಾರವನ್ನು ಉತ್ಪಾದಿಸುವ ಮತ್ತು ಸೇವಿಸುವುದಕ್ಕೆ ಉತ್ತೇಜನ ನೀಡಲಾಗುತ್ತದೆ.

ಯಾರೂ ಹಸಿವಿನಿಂದ ಬಳಲದೆ, ಉತ್ತಮ ಭವಿಷ್ಯವನ್ನು ಸೃಷ್ಟಿಸಲು ಪ್ರಮುಖ ಪ್ರಯತ್ನಗಳನ್ನು ಮಾಡಿದ ಆಹಾರ ನಾಯಕರು ಅಥವಾ ವ್ಯಕ್ತಿಗಳನ್ನು ಗೌರವಿಸುವುದು ಇದರ ಉದ್ದೇಶವಾಗಿತ್ತು. ಪ್ರತಿ ವರ್ಷವೂ, FAO ವಿಶ್ವ ಆಹಾರ ದಿನಕ್ಕಾಗಿ ಹೊಸ ವಿಷಯವನ್ನು ಗುರುತಿಸುತ್ತಾ ಬಂದಿದೆ. ಇದು ಆಹಾರ ಉತ್ಪಾದನೆಯನ್ನು ಸುಧಾರಿಸಲು ಕೃಷಿ, ಆಹಾರ ಮತ್ತು ಹೂಡಿಕೆಗಳ ಮೇಲೆ ಬೆಳಕು ಚೆಲ್ಲಲಿದೆ.

ಇದನ್ನೂ ಓದಿ : World Sight Day 2022 : ನಿಮ್ಮ ಕಣ್ಣಿನ ದೃಷ್ಟಿಯ ಬಗ್ಗೆ ಕಾಳಜಿವಹಿಸಿ; ಕಣ್ಣಿನ ಕಾಯಿಲೆಗಳನ್ನು ತಡೆಯುವ ಆಹಾರಗಳು

ಇದನ್ನೂ ಓದಿ : Home Remedy for Memory Power: ಅತಿಯಾದ ಮರೆವು ಕಾಡುತ್ತಿದೆಯೇ ? ಹಾಗಿದ್ದರೆ ಇಲ್ಲಿದೆ ಸುಲಭ ಪರಿಹಾರ

ಇದನ್ನೂ ಓದಿ : World Arthritis Day 2022 : ಸಂಧಿವಾತ ದೂರಮಾಡುವ 5 ಬೆಸ್ಟ್‌ ಟಿಪ್ಸ್‌ : ಮೂಳೆಗಳ ಆರೋಗ್ಯ ಹೀಗೆ ಕಾಪಾಡಿಕೊಳ್ಳಿ

ವಿಶ್ವ ಆಹಾರ ದಿನ 2022: ಮಹತ್ವ

ಆಹಾರ ಮತ್ತು ಕೃಷಿ ಸಂಸ್ಥೆಯ ಅಡಿಪಾಯವನ್ನು ಗುರುತಿಸಲು ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕ ಹಸಿವಿನ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆಹಾರವು ಮಾನವನ ಮೂಲಭೂತ ಮಾನವ ಹಕ್ಕು ಎಂಬ ಸಂದೇಶವನ್ನು ಹರಡಲು ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು, ಅಪೌಷ್ಟಿಕತೆ ಮತ್ತು ಸ್ಥೂಲಕಾಯದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಅನೇಕ ಜಾಗೃತಿ ಉಪಕ್ರಮಗಳನ್ನು ಸಹ ನಡೆಸಲಾಗುತ್ತದೆ, ಇವೆರಡೂ ಪ್ರಮುಖ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುತ್ತವೆ.

Comments are closed.