T20 World Cup Warm-up Match : ಟಿ20 ವಿಶ್ವಕಪ್’ನಲ್ಲಿ ನಾಳೆ ಭಾರತ Vs ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ, ಮ್ಯಾಚ್ ಟೈಮಿಂಗ್ಸ್, Live telecast ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಬ್ರಿಸ್ಬೇನ್:T20 World Cup Warm-up : ಟಿ20 ವಿಶ್ವಕಪ್ ಗೆದ್ದೇ ಗೆಲ್ಲುವ ಉತ್ಸಾಹದಲ್ಲಿರುವ ಭಾರತ ತಂಡ, ಸೋಮವಾರ ನಡೆಯಲಿರುವ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ (India Vs Australia) ತಂಡವನ್ನು ಎದುರಿಸಲಿದೆ. ಈಗಾಗಲೇ ಪರ್ತ್’ನಲ್ಲಿ ಒಂದು ವಾರದ ಅಭ್ಯಾಸ ಶಿಬಿರ ಮುಗಿಸಿ, ವೆಸ್ಟರ್ಸ್ ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನಾಡಿ ಬಂದಿರುವ ರೋಹಿತ್ ಶರ್ಮಾ ಬಳಗ (India Playing XI) , ಐಸಿಸಿ ಆಯೋಜಿಸಿರುವ ಅಧಿಕೃತ ಅಭ್ಯಾಸ ಪಂದ್ಯಗಳನ್ನು ಗೆದ್ದು ವಿಶ್ವಕಪ್ ಟೂರ್ನಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಗುರಿಯಲ್ಲಿದೆ.

ವೆಸ್ಟರ್ಸ್ ಆಸ್ಟ್ರೇಲಿಯಾ ವಿರುದ್ಧದ 2 ಅಭ್ಯಾಸ ಪಂದ್ಯಗಳಲ್ಲಿ ಮೊದಲ ಪಂದ್ಯವನ್ನು ಗೆದ್ದಿದ್ದ ಟೀಮ್ ಇಂಡಿಯಾ, 2ನೇ ಪಂದ್ಯವನ್ನ ಸೋತಿತ್ತು. ಎರಡೂ ಪಂದ್ಯಗಳಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಆಡಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ತನ್ನ ಫುಲ್ ಸ್ಟ್ರೆಂತ್ ತಂಡದೊಂದಿಗೆ ಕಣಕ್ಕಿಳಿಯಲಿದೆ. ವಿಶ್ವಕಪ್’ನಲ್ಲಿ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಗಾಯಾಳು ಜಸ್ಪ್ರೀತ್ ಬುಮ್ರಾ ಬದಲು ಟೀಮ್ ಇಂಡಿಯಾವನ್ನು ಸೇರಿಕೊಂಡಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ಅಭ್ಯಾಸ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ತವರಿನಲ್ಲಿ ನಡೆದ 3 ಪಂದ್ಯಗಳ ಟಿ20 ಸರಣಿಯನ್ನು ರೋಹಿತ್ ಶರ್ಮಾ ಬಳಗ 2-1ರ ಅಂತರದಲ್ಲಿ ಗೆದ್ದುಕೊಂಡಿತ್ತು.

ಆಸ್ಟ್ರೇಲಿಯಾ ವಿರುದ್ಧದ ನಂತರ ಭಾರತ ತಂಡ ಆಕ್ಟೋಬರ್ 19ರಂದು ನಡೆಯುವ ತನ್ನ 2ನೇ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಭಾರತದ ಎರಡೂ ಅಭ್ಯಾಸ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರ ಪ್ರಸಾರಗೊಳ್ಳಲಿವೆ.

ಟಿ20 ವಿಶ್ವಕಪ್’ನಲ್ಲಿ ಭಾರತ ಅಭಿಯಾನ ಅಕ್ಟೋಬರ್ 23ರಂದು ಆರಂಭವಾಗಲಿದ್ದು, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (India vs Pakistan) ತಂಡವನ್ನು ಎದುರಿಸಲಿದೆ.

ಅಭ್ಯಾಸ ಪಂದ್ಯಕ್ಕೆ ಭಾರತದ ಸಂಭಾವ್ಯ XI (India Vs Australia T20 World Cup Warm-up match)

ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್ (ಉಪನಾಯಕ), 3.ವಿರಾಟ್ ಕೊಹ್ಲಿ, 4.ಸೂರ್ಯಕುಮಾರ್ ಯಾದವ್, 5.ಹಾರ್ದಿಕ್ ಪಾಂಡ್ಯ, 6.ದಿನೇಶ್ ಕಾರ್ತಿಕ್, 7.ಅಕ್ಷರ್ ಪಟೇಲ್, 8.ರವಿಚಂದ್ರನ್ ಅಶ್ವಿನ್/ಯುಜ್ವೇಂದ್ರ ಚಹಲ್, 9.ಭುವನೇಶ್ವರ್ ಕುಮಾರ್, 10.ಮೊಹಮ್ಮದ್ ಶಮಿ/ಹರ್ಷಲ್ ಪಟೇಲ್, 11.ಅರ್ಷದೀಪ್ ಸಿಂಗ್

ಪಂದ್ಯ ಆರಂಭ: ಬೆಳಗ್ಗೆ 8.30ಕ್ಕೆ
ಸ್ಥಳ: ಬ್ರಿಸ್ಬೇನ್ ಕ್ರಿಕೆಟ್ ಗ್ರೌಂಡ್, ಬ್ರಿಸ್ಬೇನ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಇದನ್ನೂ ಓದಿ : Virat Kohli Rohit Sharma : ರೋಹಿತ್ ಅಭಿಮಾನಿಯನ್ನು ಕೊಂದ ವಿರಾಟ್ ಫ್ಯಾನ್, ಕೊಹ್ಲಿಯನ್ನು ಅರೆಸ್ಟ್ ಮಾಡಲು ಆಗ್ರಹ

ಇದನ್ನೂ ಓದಿ : India wins women’s Asia Cup : ಪುರುಷರಿಗೆ ಆಗದ್ದನ್ನು ವನಿತೆಯರು ಮಾಡಿ ತೋರಿಸಿದ್ರು, 7ನೇ ಬಾರಿ ಏಷ್ಯಾ ಕಪ್ ಗೆದ್ದ ಭಾರತ ಮಹಿಳಾ ತಂಡ

India Vs Australia T20 World Cup Warm-up match India Playing XI

Comments are closed.