Triphala Churna Powder:ಕಣ್ಣಿನ ದೃಷ್ಟಿ ದೋಷ ನಿವಾರಣೆಗೆ ತ್ರಿಫಲ ಚೂರ್ಣ

(Triphala Churna powder)ವಯಸ್ಸಾಗುತ್ತಿದ್ದಂತೆ ಕಣ್ಣಿನ ದೃಷ್ಟಿ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ, ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕಣ್ಣಿನ ತೊಂದರೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪುಟ್ಟ ಮಕ್ಕಳು ಅತಿ ಚಿಕ್ಕ ವಯಸ್ಸಿನಲ್ಲಿ ಕನ್ನಡಕ ಧರಿಸುತ್ತಿದ್ದಾರೆ. ತ್ರಿಫಲ ಚೂರ್ಣದ ಔಷಧೀಯನ್ನು ಮನೆಯಲ್ಲಿಯೇ ತಯಾರಿಸಿಕೊಂಡು ತಿನ್ನುವುದರಿಂದ ಕಣ್ಣಿನ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಈ ಔಷಧೀಯನ್ನು ಹೇಗೆ ತಯಾರಿಸಿಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ತಿಳಿಯೋಣ.

Triphala Churna powder: ಬೇಕಾಗುವ ಸಾಮಾಗ್ರಿಗಳು:

ತ್ರಿಫಲ ಚೂರ್ಣ( ಅಳಲೆ ಕಾಯಿ,ನೆಲ್ಲಿಕಾಯಿ, ತಾರೆಕಾಯಿ ಪುಡಿ)
ಜೇನುತುಪ್ಪ
ತುಪ್ಪ

ಮಾಡುವ ವಿಧಾನ

ಬೌಲ್‌ ನಲ್ಲಿ ಅರ್ಧ ಚಮಚ ತ್ರಿಫಲ ಚೂರ್ಣ, ಒಂದು ಚಮಚ ಜೇನುತುಪ್ಪ, ಒಂದು ಚಮಚ ತುಪ್ಪ ಹಾಕಿ ಮಿಶ್ರಣಮಾಡಿ ಪೇಸ್ಟ್‌ ಮಾಡಿಕೊಂಡು ರಾತ್ರಿ ಊಟ ಆದ ಅರ್ಧ ಗಂಟೆಯ ನಂತರ ಸೇವನೆ ಮಾಡಬೇಕು. ಇದನ್ನು ಸೇವನೆ ಮಾಡಿದ ನಂತರ ಹಾಲು ಅಥವಾ ನೀರು ಕುಡಿಯಬಹುದು. ಸತತವಾಗಿ ಮೂರು ತಿಂಗಳು ಸೇವನೆ ಮಾಡುತ್ತಾ ಬಂದರೆ ಕಣ್ಣಿನ ದೃಷ್ಟಿ ದೋಷ ನಿವಾರಣೆ ಆಗುತ್ತದೆ.

ತ್ರಿಫಲ ಚೂರ್ಣ( ಅಳಲೆ ಕಾಯಿ,ನೆಲ್ಲಿಕಾಯಿ, ತಾರೆಕಾಯಿ ಪುಡಿ)
ತ್ರಿಫಲ ಚೂರ್ಣ ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ದೃಷ್ಟಿ ಸರಿಯಾಗಿ ಇಡುತ್ತದೆ. ಚರ್ಮದ ಕಾಯಿಲೆ ಹತ್ತಿರ ಸುಳಿಯದಂತೆ ರಕ್ಷಣೆ ಮಾಡುತ್ತದೆ. ಅಲರ್ಜಿ ಮತ್ತು ಸೋಂಕುಗಳ ತಗುಲದಂತೆ ನೋಡಿಕೊಳ್ಳುತ್ತದೆ. ಜೀರ್ಣಕ್ರಿಯೇಗೆ ಸಂಬಂಧಿಸಿದ ತೊಂದರೆ ಗ್ಯಾಸ್‌ ,ಅಜೀರ್ಣ ,ಹುಳಿ ಇತ್ಯಾದಿಯನ್ನು ತಡೆಯುತ್ತದೆ. ತ್ರಿಫಲ ಚೂರ್ಣವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಸಂಗ್ರಹವಾಗುವುದನ್ನು ತಡೆಯುತ್ತದೆ. ತ್ರಿಫಲ ಚೂರ್ಣ ಸೇವನೆ ಮಾಡುವುದರಿಂದ ತ್ವಚೆಯಲ್ಲಿ ಹೊಳಪು ಹೆಚ್ಚಿಸಿ ಬೇಗ ಸುಕ್ಕು ಬರದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಮಚ್ಚೆಗಳ ಸಮಸ್ಯೆ ದೂರವಾಗುತ್ತದೆ. ಮಲಬದ್ದತೆ ಸಮಸ್ಯೆ ಇರುವವರು ತ್ರಿಫಲ ಚೂರ್ಣವನ್ನು ಸೇವಿಸುವ ಮೂಲಕ ಹೊಟ್ಟೆಯನ್ನು ಸ್ವಚ್ಛಗೊಳಿಸಬಹುದು.

ಇದನ್ನೂ ಓದಿ:Stop Hiccups Instantly:ತಕ್ಷಣವೇ ಬಿಕ್ಕಳಿಕೆ ನಿಲ್ಲಬೇಕಾ ? ಹಾಗಾದ್ರೆ ಇಲ್ಲಿದೆ ಸುಲಭ ಪರಿಹಾರ

ಇದನ್ನೂ ಓದಿ:Control Diabetes Tips: ಮಧುಮೇಹ ಕಂಟ್ರೋಲ್ ಮಾಡಲು ಇಲ್ಲಿದೆ ಬೆಸ್ಟ್ ಟಿಪ್ಸ್

ಇದನ್ನೂ ಓದಿ:Tomato soup: ಟೊಮೇಟೋ ಸೂಪ್‌ ಕುಡಿಯೋದ್ರಿಂದ ಇದೆ ಹಲವಾರು ಪ್ರಯೋಜನ

ಜೇನುತುಪ್ಪ
ಆಯುರ್ವೇದದಲ್ಲಿ ಅತಿಹೆಚ್ಚು ಜೇನುತುಪ್ಪವನ್ನು ಬಳಕೆ ಮಾಡುತ್ತಾರೆ. ಜೇನುತುಪ್ಪ ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನ ಪಡೆಯುವುದಲ್ಲದೆ ದೇಹದ ತೂಕ ಇಳಿಕೆಗೂ ಸಹಕಾರಿಯಾಗಿದೆ. ಮುಖದ ಸೌಂಧರ್ಯವನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Triphala Churna Powder Triphala Churna to cure eye sight defects

Comments are closed.