Banana Hair pack:ಸುಕ್ಕುಗಟ್ಟುವ ಕೂದಲಿಗೆ ಬಾಳೆಹಣ್ಣಿನ ಹೇರ್‌ ಪ್ಯಾಕ್ ಟ್ರೈ ಮಾಡಿ

(Banana Hair pack)ಕೂದಲನ್ನೂ ಎಷ್ಟೇ ಬಾಚಿದರು ಮರುಕ್ಷಣ ಮತ್ತೆ ಅಷ್ಟೇ ಸಿಕ್ಕಾಗಿರುತ್ತದೆ. ಬಾಚಣಿಕೆಯಿಂದ ಸ್ವಲ್ಪ ಗಟ್ಟಿಯಾಗಿ ಬಾಚಲು ಹೊದರೆ ಕೂದಲು ತುಂಡಾಗುತ್ತದೆ. ಜೊತೆಗೆ ಕೂದಲು ನೋವುಂಟಾಗಿ ಸಾಕಪ್ಪ ಕೂದಲಿನ ಸಹವಾಸ ಅನ್ನಿಸುವುದುಂಟು, ಇನ್ನು ಈ ಚಿಂತೆ ಬೇಡ ಕೂದಲು ಸುಕ್ಕು ಕಟ್ಟದಂತೆ ಮನೆಯಲ್ಲಿಯೇ ಬಾಳೆಹಣ್ಣಿನ ಹೇರ್‌ ಪ್ಯಾಕ್‌ ತಯಾರಿಸಿಕೊಳ್ಳಬಹುದು. ಹೇರ್‌ ಪ್ಯಾಕ್‌ ಮಾಡುವುದರ ಕುರಿತು ಮಾಹಿತಿಯನ್ನು ತಿಳಿಸಲಾಗಿದೆ.

(Banana Hair pack)ಬೇಕಾಗುವ ಸಾಮಾಗ್ರಿಗಳು:
ಬಾಳೆಹಣ್ಣು
ಮೊಸರು
ಜೇನುತುಪ್ಪ
ಎಸೆಂಶಿಯಲ್‌ ಆಯಿಲ್‌

ಮಾಡುವ ವಿಧಾನ:
ಒಂದು ಬೌಲ್‌ ನಲ್ಲಿ ನಾಲ್ಕು ಬಾಳೆಹಣ್ಣು, ಮೊಸರು,ಜೇನುತುಪ್ಪ ಹಾಕಿ ಮಿಕ್ಸ್‌ ಮಾಡಿಕೊಳ್ಳಬೇಕು . ಮಿಕ್ಸ್‌ ಮಾಡಿಕೊಂಡ ಪದಾರ್ಥವನ್ನು ಮಿಕ್ಸಿ ಜಾರಿಯಲ್ಲಿ ಹಾಕಿ ರುಬ್ಬಿಕೊಂಡು ಹೇರ್‌ ಪ್ಯಾಕ್‌ ಮಾಡಿಕೊಳ್ಳಬೇಕು. ನಂತರ ಕೂದಲಿಗೆ ಈ ಹೇರ್‌ ಪ್ಯಾಕ್‌ ಅನ್ನು ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ತಲೆ ಸ್ನಾನ ಮಾಡಬೇಕು. ಹೀಗೆ ವಾರಕ್ಕೆ ಒಂದು ಬಾರಿ ಹೇರ್‌ ಪ್ಯಾಕ್‌ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಸುಕ್ಕು ಕಟ್ಟುವುದು ಕಡಿಮೆ ಆಗುತ್ತದೆ. ಎಸೆಂಶಿಯಲ್‌ ಆಯಿಲ್‌ ನಿಮಗೆ ಬೇಕಾದ್ದಲಿ ನಾಲ್ಕು ಹನಿಯನ್ನು ಹಾಕಿಕೊಳ್ಳಬಹುದು.

ಬಾಳೆಹಣ್ಣು:
ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ತುಂಬಾ ಉಪಯೋಗವಿದೆ. ಅಷ್ಟೇ ಅಲ್ಲದೆ ಸೌಂಧರ್ಯ ವರ್ಧಕವಾಗಿ ಇದನ್ನು ಬಳಕೆ ಮಾಡಲಾಗುತ್ತದೆ.ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ,ವಿಟಮಿನ್‌ ಮತ್ತು ಪೋಷಕಾಂಶ ಅಂಶಗಳು ಹೆರಳವಾಗಿರುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಿ ಕೂದಲಿಗೆ ಹೊಳಪನ್ನು ನೀಡುತ್ತದೆ. ಯಾರಿಗಾದರು ಕಣ್ಣು ಊದಿಕೊಳ್ಳುವ ಸಮಸ್ಯೆ ಇದ್ದರೆ ಬಾಳೆಹಣ್ಣು ಅಥವ ಅದರ ಸಿಪ್ಪೆಯನ್ನು ಸ್ಮ್ಯಾಶ್‌ ಮಾಡಿಕೊಂಡು ಕಣ್ಣಿನ ಸುತ್ತ ಮುತ್ತ ಊದಿರುವ ಭಾಗಕ್ಕೆ ಹಚ್ಚಿದರೆ ಊತವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:Onion Beauty Tips:ಕೂದಲು ಉದುರುವ ಸಮಸ್ಯೆಗೆ ಈರುಳ್ಳಿಯಲ್ಲಿದೆ ಪರಿಹಾರ

ಇದನ್ನೂ ಓದಿ:Lack Of Memory Power : ಮಕ್ಕಳ ನೆನಪಿನ ಶಕ್ತಿ ಕೊರತೆಯೇ ? ಬಳಸಿ ಈ ಬ್ರಾಹ್ಮಿ ಲೇಹ

ಮೊಸರು:
ಮೊಸರಿನಲ್ಲಿ ರಿಬೋಫ್ಲಾವಿನ್, ಫ್ರೋಟೀನ್‌, ಕ್ಯಾಲ್ಸಿಯಂ,ವಿಟಮಿನ್‌ ಬಿ, ಹಲವು ಅಂಶಗಳನ್ನು ಒಳಗೊಂಡಿರುವುದರಿಂದ ಗ್ಯಾಸ್ಟ್ರಿಕ್‌, ಅಜೀರ್ಣ,ಮಲಬದ್ದತೆ ದೇಹದ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಇದರಿಂದ ತಯಾರಿಸಿದ ಫೇಸ್‌ ಪ್ಯಾಕ್‌ ಮತ್ತು ಹೇರ್‌ ಪ್ಯಾಕ್‌ ಹಚ್ಚುವುದರಿಂದ ಮುಖದ ಮತ್ತು ಕೂದಲಿನ ಹಲವು ಸಮಸ್ಯೆಗಳಿಂದ ದೂರವಿರಲು ಸಹಾಯ ಮಾಡುತ್ತದೆ.

ಜೇನುತುಪ್ಪ:
ಸಹಸ್ರಾರು ವರ್ಷಗಳಿಂದ ಜೇನುತುಪ್ಪ ಆರೋಗ್ಯವನ್ನು ಕಾಪಾಡುವಲ್ಲಿ ಕೊಡುಗೆಯನ್ನು ನೀಡುತ್ತಾ ಬಂದಿದೆ. ಜೇನುತುಪ್ಪದಿಂದ ಆರೋಗ್ಯ ಸುಧಾರಿಸುವುದಲ್ಲದೆ , ಮುಖದ ಸೌಂಧರ್ಯವನ್ನು ಕೂಡ ಕಾಪಾಡುತ್ತದೆ. ಅಷ್ಟೇ ಅಲ್ಲದೆ ಇದನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ರಕ್ತದಲ್ಲಿನ ಆಮ್ಲಜನಕ ಮಟ್ಟವನ್ನು ಹೆಚ್ಚಿಸುತ್ತದೆ. ಆಯಾಸ ಮತ್ತು ಉಸಿರಾಟದ ತೊಂದರೆಯನ್ನು ನಿವಾರಣೆ ಮಾಡುತ್ತದೆ

Try banana hair pack for frizzy hair: how to prepare banana hair pack

Comments are closed.