Turmeric : ಅರಿಶಿನದಲ್ಲಿದೆ ಹಲವು ಬಗೆಯ ಔಷಧೀಯ ಗುಣ

Turmeric medical qualities : ಅಡುಗೆಯಲ್ಲಿ ಬಳಕೆ ಮಾಡುವ ಅರಿಶಿನ (Turmeric) ಸರ್ವ ರೋಗಗಳಿಗೂ ಮದ್ದು ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಆದರೆ ಅರಶಿನದಲ್ಲಿ ಔಷಧೀಯ ಗುಣಗಳು ಇರುವುದರಿಂದ ಆರೋಗ್ಯಕ್ಕೆ ಸೇರಿದಂತೆ ಮುಖದ ಸೌಂದರ್ಯ ಕಾಪಾಡುವುದಕ್ಕೆ ಸಹಕಾರಿಯಾಗಿದೆ. ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡರೆ ತಕ್ಷಣದ ಔಷಧಿಗಾಗಿ ಮನೆಮದ್ದು ಅರಿಶಿಣವನ್ನು ಬಳಕೆ ಮಾಡಲಾಗುತ್ತದೆ. ಇದಲ್ಲದೆ ಅರಿಶಿಣವನ್ನು ಎಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದ ಗಾಯ ಕಡಿಮೆಯಾಗುವುದರ ಜೊತೆಗೆ, ಕಾಲು ನಂಜಾಗುವುದನ್ನು ಗುಣ ಮಾಡುತ್ತದೆ. ಇದನ್ನು ತಯಾರಿಸುವ ವಿಧಾನ ಈ ಕೆಳಗಿನಂತಿದೆ.

ಬೇಕಾಗುವ ಸಾಮಾಗ್ರಿಗಳು:

  • ಎಣ್ಣೆ
  • ಅರಿಶಿಣ

ಮಾಡುವ ವಿಧಾನ:
ಎಣ್ಣೆಯನ್ನು ಸ್ವಲ್ಫ ಬಿಸಿ ಮಾಡಿಕೊಂಡು ಅದಕ್ಕೆ(Turmeric) ಅರಿಶಿಣವನ್ನು ಬೆರೆಸಬೇಕು. ಬಿಸಿ ಆರಿದ ನಂತರ ಅದನ್ನು ಒಂದು ಸಣ್ಣ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಗಾಯಗಳಿಗೆ ಅಥವಾ ಕಾಲಿನಲ್ಲಾದ ನಂಜಿಗೆ ಹಚ್ಚುತ್ತಾ ಬಂದರೆ ಬೇಗ ಗುಣವಾಗುತ್ತದೆ.

ರಾತ್ರಿಯ ಸಮಯದಲ್ಲಿ ಅರಿಶಿಣವನ್ನು ಉಗುರು ಬೆಚ್ಚಗಿನ ನೀರು ಅಥವಾ ಹಾಲಿನಲ್ಲಿ ಬೇರೆಸಿ ಕುಡಿಯುವುದರಿಂದ ಕೆಮ್ಮು ಕಡಿಮೆ ಆಗುತ್ತದೆ. ಹಾಲಿನ ಕೆನೆಯೊಂದಿಗೆ ಅರಿಶಿಣ ಮತ್ತು ನಿಂಬೆ ರಸ ಬೆರೆಸಿ ಮುಖಕ್ಕೆ ಲೇಪನ ಮಾಡಿ ಸ್ವಲ್ಪ ಸಮಯದ ನಂತರ ಉಗುರು ಬೆಚ್ಚಗಿನ ನೀರಲ್ಲಿ ಮುಖ ತೊಳೆಯುವುದರಿಂದ ಗುಳ್ಳೆಗಳು ಕಡಿಮೆ ಆಗುತ್ತದೆ. ಅರಿಶಿಣದಿಂದ ಪಾನಿಯವನ್ನು ಮಾಡಿ ಸೇವನೆ ಮಾಡುವುದರಿಂದ ಹೊಟ್ಟೆಯ ಹುಣ್ಣು ನಿವಾರಣೆ ಆಗುತ್ತದೆ.

ಇದನ್ನೂ ಓದಿ : ವಿಶ್ವ ಸಸ್ಯಹಾರಿ ದಿನಾಚರಣೆ : ಸಸ್ಯಾಹಾರದಿಂದ ಉತ್ತಮ ಆರೋಗ್ಯ

ಇದನ್ನೂ ಓದಿ : ಸರಿಯಾದ ನಿದ್ದೆಯಿಲ್ಲದೆ ದಿನಪೂರ್ತಿ ಆಲಸ್ಯವೇ? ಉತ್ತಮ ನಿದ್ದೆಗೆ ಹೀಗೆ ಮಾಡಿ

ಇದನ್ನೂ ಓದಿ : ಅಯೋಡಿನ್‌ ಕೊರತೆ ನಿವಾರಿಸುವ 5 ಸೂಪರ್‌ ಫುಡ್‌ಗಳು ಯಾವುದು ಗೊತ್ತಾ

ಬೇಕಾಗುವ ಸಾಮಾಗ್ರಿಗಳು:

  • ನೀರು- 2 ಲೋಟ
  • ಅರಿಶಿಣ-1 ಟೀ ಸ್ಪೂನ್
  • ತುರಿದ ಶುಂಠಿ-1ಟೀ ಸ್ಪೂನ್
  • ನಿಂಬೆ ರಸ-1ಟೀ ಸ್ಪೂನ್
  • ದಾಲ್ಚಿನ್ನಿ-2
  • ಜೇನು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರು, ಅರಿಶಿಣ, ತುರಿದ ಶುಂಠಿ ಮತ್ತು ದಾಲ್ಚಿನ್ನಿ ಹಾಕಿ ಕುದಿಯುವರೆಗೂ ಬಿಡಿ. ನಂತರ ಕಡಿಮೆ ಉರಿಯಲ್ಲಿ ಐದು ನಿಮಿಷಗಳ ವರೆಗೆ ಪಾತ್ರೆಯ ಮೇಲೆ ಮುಚ್ಚಳ ಮುಚ್ಚಿ ಕಾಯಿಸಬೇಕು.ಹೀಗೆ ಮಾಡುವುದರಿಂದ ಅದಕ್ಕೆ ಹಾಕಿರುವ ಪದಾರ್ಥಗಳು ನೀರಿನೊಂದಿಗೆ ಬೆರೆಯುತ್ತದೆ. ತದನಂತರ ಗ್ಯಾಸ್‌ ಆಫ್‌ ಮಾಡಿ ಒಂದು ಲೋಟದಲ್ಲಿ ಶೋಧಿಸಿ 2 ರಿಂದ 4 ನಿಮಿಷಗಳ ಕಾಲ ಬಿಡಬೇಕು. ಇದರ ನಂತರ ನಿಂಬೆ ರಸ, ಜೇನು ತುಪ್ಪವನ್ನು ಅದಕ್ಕೆ ಬೆರೆಸಬೇಕು.

Turmeric had many medical qualities

Comments are closed.