Virat Kohli : ಕ್ಷಮಿಸಿ ಬಿಡು ಕೊಹ್ಲಿ… ನಿನ್ನ ಆಟಕ್ಕೆ ಕೊನೆಗೂ ನ್ಯಾಯ ಸಿಗಲಿಲ್ಲ

ಬೆಂಗಳೂರು: ಟಿ20 ವಿಶ್ವಕಪ್ (T2o World Cup) ಸೆಮಿಫೈನಲ್ ಸೋತು ಭಾರತ ಹೊರ ಬೀಳುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರ ಮುಖ ಕಪ್ಪಿಟ್ಟಿತ್ತು. ಅದರಲ್ಲೂ ವಿರಾಟ್ ಕೊಹ್ಲಿ (Virat Kohli sorry) ತಲೆ ಮೇಲಿದ್ದ ಕ್ಯಾಪ್’ನಿಂದ ಮುಖ ಮುಚ್ಚಿಕೊಂಡ ದೃಶ್ಯ ಎಲ್ಲರ ಗಮನ ಸೆಳೆಯಿತು.

ಅತ್ಯಂತ ಬೇಸರ, ಮತ್ತೊಮ್ಮೆ ವಿಶ್ವಕಪ್ ಗೆಲ್ಲಲಾಗದ ನೋವು ವಿರಾಟ್ ಕೊಹ್ಲಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಕಾರಣ ಭಾರತ ನೌಕಾಟ್ ಹಂತಕ್ಕೇರಿದ ಮೂರೂ ಟಿ20 ವಿಶ್ವಕಪ್’ಗಳಲ್ಲಿ ಭಾರತವನ್ನು ಗೆಲ್ಲಿಸಲು ವಿರಾಟ್ ಕೊಹ್ಲಿ ಶಕ್ತಿಮೀರಿ ಪ್ರಯತ್ನಿಸಿದ್ರೂ ಕಪ್ ಗೆಲ್ಲಿಸಲಾಗಲಿಲ್ಲ.

https://twitter.com/SuprV18/status/1590670719469654016?s=20&t=Xmbe6SCtjEXD1zCCqj33HA

ವಿರಾಟ್ ಕೊಹ್ಲಿ ಭಾರತ ನಾಕೌಟ್ ಹಂತಕ್ಕೇರಿದ ಕಳೆದ ಮೂರು ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ತೋರಿದ್ದಾರೆ. 2014ರ ವಿಶ್ವಕಪ್’ನಲ್ಲಿ ಕಿಂಗ್ ಕೊಹ್ಲಿ 6 ಪಂದ್ಯಗಳಿಂದ 4 ಅರ್ಧಶತಕಗಳ ಸಹಿತ 319 ರನ್ ಗಳಿಸಿದ್ದರು. ಆದರೆ ಫೈನಲ್’ನಲ್ಲಿ ಶ್ರೀಲಂಕಾ ವಿರುದ್ಧ ಸೋತಿದ್ದ ಭಾರತ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ಲಂಕಾ ವಿರುದ್ಧದ ಫೈನಲ್’ನಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಕೊಹ್ಲಿ 58 ಎಸೆತಗಳಲ್ಲಿ 77 ರನ್ ಬಾರಿಸಿದ್ದರು.

ಇನ್ನು ಭಾರತದಲ್ಲೇ ನಡೆದ 2016ರ ಟಿ20 ವಿಶ್ವಕಪ್. ಆ ಟೂರ್ನಿಯಲ್ಲೂ ಅಮೋಘ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ 5 ಪಂದ್ಯಗಳಿಂದ 3 ಅರ್ಧಶತಕಗಳ ಸಹಿತ 136.50 ಸರಾಸರಿಯಲ್ಲಿ 272 ರನ್ ಕಲೆ ಹಾಕಿದ್ದರು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್’ಗಳಿಂದ ಸೋತಿದ್ದ ಭಾರತ ಮತ್ತೊಮ್ಮೆ ಕಪ್ ಗೆಲ್ಲುವಲ್ಲಿ ಎಡವಿತ್ತು. ವಿಂಡೀಸ್ ವಿರುದ್ಧದ ಸೆಮಿಫೈನಲ್’ನಲ್ಲಿ ಕೊಹ್ಲಿ 47 ಎಸೆತಗಳಲ್ಲಿ ಅಜೇಯ 89 ರನ್ ಸಿಡಿಸಿದ್ದರು.

2021ರ ಟಿ20 ವಿಶ್ವಕಪ್’ನಲ್ಲಿ ಗ್ರೂಪ್ ಹಂತದಲ್ಲೇ ನಿರ್ಗಮಿಸಿದ್ದ ಟೀಮ್ ಇಂಡಿಯಾ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿತ್ತು. ಆದ್ರೆ ಸೆಮೀಸ್’ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್’ಗಳ ಹೀನಾಯ ಸೋಲು ಕಾಣುವುದರೊಂದಿಗೆ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಭಾರತದ ಕನಸು ನುಚ್ಚು ನೂರಾಗಿದೆ. ಸೆಮಿಫೈನಲ್’ನಲ್ಲಿ 50 ರನ್ ಗಳಿಸಿದ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಆಡಿದ 6 ಪಂದ್ಯಗಳಿಂದ 4 ಅರ್ಧಶತಕಗಳ ಸಹಿತ 296 ರನ್ ಗಳಿಸಿದರೂ ಭಾರತಕ್ಕೆ ವಿಶ್ವಕಪ್ ಗೆಲ್ಲಿಸುವ ಕನಸು ಕೊನೆಗೂ ನನಸಾಗಲೇ ಇಲ್ಲ.

ಭಾರತ ನಾಕೌಟ್ ಹಂತಕ್ಕೇರಿದ ಕಳೆದ 3 ಟ20 ವಿಶ್ವಕಪ್’ಗಳಲ್ಲಿ ವಿರಾಟ್ ಕೊಹ್ಲಿ ಸಾಧನೆ
2014: 6 ಪಂದ್ಯ, 319 ರನ್, 4 ಅರ್ಧಶತಕ, 77 ಬೆಸ್ಟ್, 106.33 ಸರಾಸರಿ, 129.14 ಸ್ಟ್ರೈಕ್’ರೇಟ್
2016: 5 ಪಂದ್ಯ, 273 ರನ್, 3 ಅರ್ಧಶತಕ, 89* ಬೆಸ್ಟ್, 136.50 ಸರಾಸರಿ, 146.77 ಸ್ಟ್ರೈಕ್’ರೇಟ್
2022: 6 ಪಂದ್ಯ, 296 ರನ್, 4 ಅರ್ಧಶತಕ, 82* ಬೆಸ್ಟ್, 98.66 ಸರಾಸರಿ, 136.40 ಸ್ಟ್ರೈಕ್’ರೇಟ್

ಇದನ್ನೂ ಓದಿ : Gautam Gambhir : T20 ವಿಶ್ವಕಪ್ ನಿಂದ ಹೊರಬಿದ್ದ ಭಾರತ : ಗೌತಮ್ ಗಂಭೀರ್ ರಹಸ್ಯ ಪೋಸ್ಟ್

ಇದನ್ನೂ ಓದಿ : Semi-final phobia for India: ಭಾರತಕ್ಕೆ ಸೆಮೀಸ್ ಫೋಬಿಯಾ. 7 ವರ್ಷಗಳಲ್ಲಿ 4 ವಿಶ್ವಕಪ್ ಸೆಮಿಫೈನಲ್ ಸೋತ ಟೀಮ್ ಇಂಡಿಯಾ

Virat Kohli : Sorry Kohli… your game never got justice

Comments are closed.