ಹಸಿದಾಗ ಕಲ್ಲಂಗಡಿ ಹಣ್ಣು ತಿಂದ್ರೆ ಏನಾಗುತ್ತೆ ಗೊತ್ತಾ ?

0

ಬಿಸಿಲಿನ ದಾಹ, ಹಸಿವು ತಣಿಸೋದಕ್ಕೆ ಕಲ್ಲಂಗಡಿ ಹಣ್ಣುಗಳನ್ನೇ ಹೆಚ್ಚಾಗಿ ತಿನ್ನುತ್ತಾರೆ. ಆದರೆ ನಾವು ಸೇವಿಸೋ ಕಲ್ಲಂಗಡಿ ದಾಹ ನೀಗೋದು ಮಾತ್ರವಲ್ಲ. ಕಲ್ಲಂಗಡಿ ಹಣ್ಣಿನಲ್ಲಿ ಅಧಿಕ ಆರೋಗ್ಯ ವರ್ಧಕ ಗುಣಗಳಿವೆ.

ಸಿಹಿಯಾಗಿರೋ ಕಲ್ಲಂಗಡಿ ಬಣ್ಣ, ರುಚಿಯಿಂದಲೇ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಪಲ್ಯ ತಯಾರಿಸಿ ಸೇವಿಸೋದ್ರಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳು ಲಭ್ಯವಾಗುತ್ತದೆ.

ಅಷ್ಟಕ್ಕೂ ಕಲ್ಲಂಗಡಿ ಹಣ್ಣು ನಮ್ಮ ಆರೋಗ್ಯಕ್ಕೆ ಎಷ್ಟು ಸಹಕಾರಿ ಅನ್ನೋದನ್ನು ತಿಳಿದುಕೊಳ್ಳೋಣಾ..

ಕಿಡ್ನಿಯ ಆರೋಗ್ಯ ಹೆಚ್ಚುತ್ತದೆ
ಕಲ್ಲಂಗಡಿ ಹಣ್ಣು ಕಿಡ್ನಿಯ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿದೆ. ಕಲ್ಲಂಗಡಿಯಲ್ಲಿರುವ ವಿಟಮಿನ್ ಸಿ ಕಣ್ಣಿನ ಆರೋಗ್ಯವನ್ನು ವೃದ್ದಿಸುವುದು ಮಾತ್ರವಲ್ಲ, ಹಣ್ಣಿನಲ್ಲಿರುವ ಸಿಟ್ರೋಲೈನ್ ದೇಹವನ್ನು ಸೇರಿದಾಗ ಅಮೈನೋ ಆಸಿಡ್ ಆಗಿ ಪರಿವರ್ತನೆಯಾಗುತ್ತದೆ. ಅಮೈನೋ ಆಸಿಡ್ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ಕಾಪಾಡುತ್ತದೆ.

ಹೃದಯಾಘಾತ ತಡೆಯುತ್ತದೆ
ಕಲ್ಲಂಗಡಿಯ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಅಧಿಕವಾಗಿರುವುದರಿಂದ ದೇಹದಲ್ಲಿ ಬೇಡವಾಗಿರುವ ರಾಸಾಯನಿಕಗಳನ್ನು ಹೊರಹಾಕಲು ಕಲ್ಲಂಗಡಿ ಹೆಚ್ಚು ಸಹಕಾರಿ. ಮಾತ್ರವಲ್ಲ ದೇಹದಲ್ಲಿ ಬೇಡವಾಗಿರುವ ಕೊಲೆಸ್ಟ್ರಾಲ್ ಹೊರಹಾಕಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಆಂಟಿ ಆಕ್ಸಿಡೆಂಟ್ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡೋದ್ರಿಂದ ಹೃದಯಾಘಾತವನ್ನು ತಡೆಯುತ್ತದೆ.

ಲೈಂಗಿಕ ಶಕ್ತಿಯನ್ನು ವೃದ್ದಿಸುತ್ತದೆ
ಸಾಮಾನ್ಯವಾಗಿ ನಾವು ಸೇವಿಸೋ ಕಲ್ಲಂಗಡಿ ಹಣ್ಣು ನೈಸರ್ಗಿಕವಾದ ವಯಾಗ್ರವಿದ್ದಂತೆ. ಕಲ್ಲಂಗಡಿ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿರುವ ಸಿಟ್ರುಲೈನ್ ದೇಹದಲ್ಲಿ ನಿಟ್ರಿಕ್ ಆಕ್ಲೈಡ್ ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಈ ನಿಟ್ರಿಕ್ ಆಕ್ಸೈಡ್ ರಕ್ತ ನಾಳಗಳಿಗೆ ವಿಶ್ರಾಂತಿಯನ್ನು ನೀಡುವುದರ ಜೊತೆಗೆ ಲೈಂಗಿಕ ಶಕ್ತಿಯನ್ನು ವೃದ್ದಿಸುತ್ತದೆ.

ಗರ್ಭಿಣಿಯರಿಗೆ ಪೋಷಕಾಂಶ ಕೊರತೆ ನಿವಾರಣೆ
ಕಲ್ಲಂಗಡಿ ಹಣ್ಣು ಗರ್ಭಿಣಿರಿಗೆ ತುಂಬಾ ಒಳ್ಳೆಯದು. ಕಲ್ಲಂಗಡಿ ಹಣ್ಣಿನಲ್ಲಿ ಅಧಿಕವಾಗಿರುವ ಫಾಲಿಕ್ ಆಸಿಡ್ ಗರ್ಭಿಣಿಯರಿಗೆ ಸೂಕ್ತ ಆಹಾರ, ಕಲ್ಲಂಗಡಿಯಲ್ಲಿರುವ ಖನಿಜಾಂಶಗಳು ಗರ್ಭಿಣಿಯರಿಗೆ ಪೋಷಕಾಂಶದ ಕೊರತೆಯನ್ನು ನಿವಾರಿಸುತ್ತದೆ.

ಕ್ಯಾನ್ಸರ್ ಗೆ ರಾಮಬಾಣ
ಕಲ್ಲಂಗಡಿ ಹಣ್ಣಿನಲ್ಲಿರುವ ಲೈಕೊಪೆನೆ ಕ್ಯಾನ್ಸರ್ ಕಣಗಳ ವಿರುದ್ದ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಕಲ್ಲಂಗಡಿ ಹಣ್ಣು ಸೇವನೆ ಮಾಡುವುದರಿಂದ ಕ್ಯಾನ್ಸರ್ ಸೋಕುವುದೇ ಇಲ್ಲಾ.

ಮೆದುಳಿನ ಆರೋಗ್ಯಕ್ಕೆ ಉತ್ತಮ
ನಾವು ಸುಸ್ತಾದಾಗ ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡುತ್ತೇವೆ, ಕಲ್ಲಂಗಡಿ ಹಣ್ಣು ತಿಂದ ನಂತರ ದೇಹದಲ್ಲಿ ಹೊಸ ಚೈತನ್ಯ ಮೂಡಿಸುತ್ತದೆ. ಹೆಚ್ಚಿನ ಸುಸ್ತು ಮಾಯವಾಗುವುದರ ಜೊತೆಗೆ ವಿಟಮಿನ್ ಬಿ6 ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಹೀಗಾಗಿ ಒತ್ತಡದಿಂದ ಉದ್ವೇಗಕ್ಕೆ ಒಳಗಾಗುವುದನ್ನೇ ತಡೆಯಲು ಸಹಕಾರಿಯಾಗಿದೆ. ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತದೆ ಇದನ್ನು ಪ್ರತೀದಿನ ತಿಂದರೆ ಮಾನಸಿಕ ಒತ್ತಡ ಕಡಿಮೆಯಾಗಿ ಖಿನ್ನತೆ ಮಾಯವಾಗುತ್ತದೆ.

ದೇಹದ ತೂಕ ಇಳಿಸಲು ಕಲ್ಲಂಗಡಿ ತಿನ್ನಿ
ಕಲ್ಲಂಗಡಿ ಹಣ್ಣು ಹಸಿವನ್ನು ನೀಗಿಸುವುದು ಮಾತ್ರವಲ್ಲ ಡಯಟ್ ಮಾಡುವವರಿಗೆ ಕಲ್ಲಂಗಡಿ ಹೆಚ್ಚು ಸಹಕಾರಿ. ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶ ಲಭ್ಯವಾಗುತ್ತದೆ. ಹೀಗಾಗಿ ನಿತ್ಯವೂ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.

ಅಸ್ತಮಾ ದೂರವಾಗುತ್ತೆ
ಸಾಮಾನ್ಯವಾಗಿ ಅಸ್ತಮಾ ಕಾಯಿಲೆ ಇರುವವರು ಕಲ್ಲಂಗಡಿ ಹಣ್ಣನ್ನು ಸೇವಿಸೋದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಆದರೆ ಕಲ್ಲಂಗಡಿ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶ ಅಸ್ತಮಾ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ವಿಟಮಿನ್ ಸಿ, ಫ್ಲೇವೋನೈಡ್ಸ್, ಲೈಕೋಪೆನೆ, ಬೀಟಾ ಕ್ಯಾರೋಟಿನ್, ಲ್ಯೂಟಿನ್ ಅಂಶಗಳು ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿವೆ.

ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ನೀರು ಕುಡಿದ್ರೆ ಏನಾಗುತ್ತೆ ಗೊತ್ತಾ ?

ಇದನ್ನೂ ಓದಿ : ಹೀಗೆ ಮಾಡಿದ್ರೆ ಅಸಿಡಿಟಿ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ

Leave A Reply

Your email address will not be published.