Monsoon Season Food : ಮಾನ್ಸೂನ್‌ನಲ್ಲಿ ತಿನ್ನಲೇಬೇಕಾದ ಆಹಾರಗಳು ?

ಮಳೆ ಅಂದ್ರೆ ಸಾಕು ಹಲವರಿಗೆ ಕ್ಷಣ ಎಲ್ಲಿಲ್ಲದ ಸಡಗರ ಸಂತೋಷ. ಹೆಚ್ಚಿನ ಜನರು ಮಾನ್ಸೂನ್ ಸಮಯದಲ್ಲಿ ಒಂದು ಚಹಾದೊಂದಿಗೆ (One Cup Tea) ಬಜ್ಜಿ ,ಬೋಂಡಾ , ಹಲಸಿನಕಾಯಿ (Platelet) ಹಪ್ಪಳ ಹಾಗೂ ಇನ್ನಿತರ ತಿನಿಸುಗಳನ್ನು ತಿನ್ನಲು ಬಯಸುತ್ತಾರೆ. ಆದರೆ ಈ ಮಳೆಗಾಲದ ಸಮಯದಲ್ಲಿ ರೋಗನಿರೋಧಕ ಶಕ್ತಿಯು (body’s immune ) ಕಡಿಮೆಯಾಗುತ್ತದೆ,ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಅದಕ್ಕಾಗಿಯೇ, ಆರೋಗ್ಯಕರ ಮನೆಯಲ್ಲಿ ಬೇಯಿಸಿದ ಆಹಾರ, ತಾಜಾ ಹಣ್ಣುಗಳು, ತರಕಾರಿಗಳು ತಿನ್ನುವುದರಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. 10 ಮಾನ್ಸೂನ್‌ನಲ್ಲಿ ತಿನ್ನಲೇಬೇಕಾದ ಆಹಾರಗಳು (Monsoon Food ) ಇಲ್ಲಿದೆ .

1.ಹಸಿರು ಮೆಣಸಿನ ಕಾಯಿ: ಪೈಪರಿನ್ ಎಂಬ ಆಲ್ಕಲಾಯ್ಡ್ ಅನ್ನು ಹೊಂದಿರುತ್ತವೆ. ಇದು ಗಮನಾರ್ಹ ಪ್ರಮಾಣದ  “ವಿಟಮಿನ್ ಸಿ ಮತ್ತು ಕೆ “ಅನ್ನು ಹೊಂದಿದೆ. ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ಸ್ವತಂತ್ರ ರಾಡಿಕಲ್ಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಗಂಭೀರ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಆಹಾರದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಸಹ ಹೊಂದಿದೆ, ಅಂದರೆ ಆಹಾರದಿಂದ ಹರಡುವ ಕಾಯಿಲೆಗಳಿಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವ ಮೂಲಕ ಆಹಾರ ವಿಷದ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಆಹಾರದಿಂದ ಹರಡುವ ಕಾಯಿಲೆಗಳಿಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವ ಮೂಲಕ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. 

2.  ಪೌಷ್ಟಿಕ ಹಣ್ಣುಗಳು : ಹಣ್ಣುಗಳು ಆರೋಗ್ಯಕ್ಕೆ ಮುಖ್ಯವಾಗಿ ವಿಟಮಿನ್ ಎ ಮತ್ತು ಸಿ ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್‌ಗಳಿಂದ ತುಂಬಿರುತ್ತವೆ . ಆರೋಗ್ಯಕ್ಕೆ ಉತ್ತಮ ಹಣ್ಣುಗಳು ಹಾಗಂತ ಹೇಳಿ ರಸ್ತೆ ಬದಿಯಲ್ಲಿ ಸಿಗುವ ಹಣ್ಣುಗಳನ್ನು ಖರೀದಿಸಬೇಡಿ ಇದ್ದಿರಲ್ಲ ಅನಾರೋಗ್ಯಕ್ಕೆ ತುತ್ತಾಗುತ್ತಿದೆ. ಮನೆಯಲ್ಲಿ ಬೆಳೆದ ಹಣ್ಣುಗಳನ್ನು ಸೇವಿಸಿ ಇದರಿಂದ ಉತ್ತಮ ಪೌಷ್ಟಿಕಾಂಶ ಸಿಗುತ್ತದೆ.

3.ಸೂಪ್: ಈ ಮಳೆಗಾಲದಲ್ಲಿ ನಮಗೆ ಬೆಚ್ಚಗಿನ ತಿನಿಸುಗಳನ್ನು ತಿನ್ನಬೇಕು ಅನಿಸುತ್ತದೆ ಹಾಗಂತ ಹೇಳಿ ಅನಾರೋಗ್ಯಕ್ಕೆ ತುತ್ತಾಗುವಂತೆ ತಿನಿಸುಗಳನ್ನು ತಿಂದರೆ ನಮಗೆ ಕಾಯಿಲೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಬೆಚ್ಚಗಿನ ಸೂಪ್, ಮಸಾಲಾ ಟೀ, ಗ್ರೀನ್ ಟೀ ಇನ್ನಿತರ ಮಸಾಲಾ ಸೋಪುಗಳನ್ನು ಸೇವಿಸುವುದರಿಂದ ದೇಹಕ್ಕೆ ಪೌಷ್ಟಿಕಾಂಶಗಳು ಸಿಗುತ್ತವೆ. ಇವರಿಂದ ನಮ್ಮ ಜೀರ್ಣಕ್ರಿಯೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ .

4. ತರಕಾರಿ: ನಮಗೆ ಅನಾರೋಗ್ಯಕ್ಕೆ ತುತ್ತಾದಾಗ ಡಾಕ್ಟರ್ ಮೊದಲು ಹೇಳುವುದು ಏನೆಂದರೆ ಸರಿಯಾಗಿ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಿ. ಏಕೆಂದರೆ ಸಾಕಷ್ಟು ಪೌಷ್ಠಿಕಾಂಶಗಳನ್ನು ಹಾಗೂ ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕುಗಳು ತಡೆಗಟ್ಟಲು ಸಹಕರಿಸುತ್ತದೆ. ಇನ್ನೂ ಹಸಿ ತರಕಾರಿ ತಿನ್ನುವ ಬದಲು ಮಳೆಗಾಲದಲ್ಲಿ ಬೇಯಿಸಿದ ತರಕಾರಿ ತಿಂದರೆ ಉತ್ತಮ ಹಾಗೂ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

5. ಪ್ರೋಬಯಾಟಿಕ್‌: ಪ್ರೋಬಯಾಟಿಕ್‌ ಎಂದರೆ ಹುಳಿಯ ಅಂಶ ಇರುವ ಪದಾರ್ಥಗಳು, ಅವುಗಳೆಂದರೆ ಮೊಸರು, ಮಜ್ಜಿಗೆ, ಕೆಫೀರ್, ಉಪ್ಪಿನಕಾಯಿ . ಇದನ್ನು ಸೇರಿಸಿದರೆ, ನಮ್ಮ ದೇಹದಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ ಇನ್ನು ಕರುಳಿನಲ್ಲಿರುವ ಒಳ್ಳೆಯ ವ್ಯಕ್ತಿಯನ್ನು ರಕ್ಷಿಸುತ್ತದೆ

6. ಪ್ರೋಟೀನ್‌: ನಿಮ್ಮ ಊಟದಲ್ಲಿ ಆರೋಗ್ಯಕರ ಪ್ರೋಟೀನ್‌ಗಳನ್ನು ಸೇರಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳು, ಬೇಳೆಕಾಳುಗಳಾದ ಮೂಂಗ್ ದಾಲ್, ಮಸೂರ, ಚೋಲೆ, ರಾಜ್ಮಾ, ಸೋಯಾ, ಮೊಟ್ಟೆ ಮತ್ತು ಚಿಕನ್ ಆರೋಗ್ಯಕರ ಪ್ರೋಟೀನ್‌ಗಳ ಉತ್ತಮ ಮೂಲಗಳಾಗಿವೆ. ಇವುಗಳು ನಮ್ಮ ಸ್ನಾಯುಗಳನ್ನು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

7. ಶುಂಠಿ ಮತ್ತು ಬೆಳ್ಳುಳ್ಳಿ: ಮಳೆಗಾಲದಲ್ಲಿ ಹೊರಗೆ ಹೋದಾಗ ಸಾಮಾನ್ಯವಾಗಿ ಶೀತ ಜ್ವರ ಬರುವುದು ಸರ್ವೇಸಾಮಾನ್ಯ ಇಂತಹ ಸಂದರ್ಭದಲ್ಲಿ ಶುಂಟಿ-ಬೆಳ್ಳುಳ್ಳಿ ಉಪಯೋಗಿಸಿದರೆ ಉತ್ತಮ , ಇದು ಶೀತ ಮತ್ತು ಜ್ವರವನ್ನು ಎದುರಿಸಲು ಸಹಾಯ ಮಾಡುತ್ತದೆ. ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಶುಂಠಿ ಚಹಾವು ಗಂಟಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 1 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಪುಡಿಮಾಡಿದ ಶುಂಠಿ ಜೇನುತುಪ್ಪಕ್ಕೆ ಸೇರಿಸಬಹುದು. ಇದನ್ನು ಸೂಪ್‌ಗಳಿಗೆ ಅಥವಾ ವಯಸ್ಸಾದವರಿಗೆ ಚಹಾಗಳಲ್ಲಿ ಸೇರಿಸಬಹುದು. ಬೆಳ್ಳುಳ್ಳಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಸಹ ಹೊಂದಿದೆ ಇದನ್ನು ಗ್ರೇವಿಗಳು, ಚಟ್ನಿಗಳು, ಸೂಪ್ಗಳು, ಚಹಾ ಇತ್ಯಾದಿಗಳಿಗೆ ಸೇರಿಸಬಹುದು.

8. ಮೆಂತ್ಯ ಬೀಜ: ಮೆಂತ್ಯವು ಶಕ್ತಿ ವರ್ಧಕವಾಗಿದೆ ಮತ್ತು ಜ್ವರ ಮತ್ತು ಜೀರ್ಣಕಾರಿ ಅಸ್ವಸ್ಥತೆಗಳ ಸಮಯದಲ್ಲಿಯೂ ಸಹ ನಮ್ಮ ದೇಹವನ್ನು ನೋಡಿಕೊಳ್ಳಲು ಅಗತ್ಯವಿರುವ ಎಲ್ಲಾ ಖನಿಜಗಳನ್ನು ಇದು ಒಳಗೊಂಡಿದೆ.

9. ಅರಿಶಿನ: ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿದ್ದು ಅದು ಉತ್ಕರ್ಷಣ ನಿರೋಧಕ ಹೊಂದಿದೆ.  ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ. ಒಂದು ಟೀಚಮಚ ಅರಿಶಿನವನ್ನು ಹಾಲು/ಲಟ್ಟೆಯಾಗಿ, ಜೇನುತುಪ್ಪದೊಂದಿಗೆ ಅಥವಾ ಬಿಸಿನೀರಿನೊಂದಿಗೆ ಸೇವಿಸುವುದು ಸೂಕ್ತವಾಗಿದೆ.

10. ಒಮೆಗಾ-3 ಕೊಬ್ಬಿನಾಮ್ಲ: ಮಾನ್ಸೂನ್‌ನಲ್ಲಿ, ಆಹಾರ ಮತ್ತು ನೀರಿನ ಮೂಲಕ ಸೋಂಕಿನ ಅಪಾಯವು ಹೆಚ್ಚಾಗುತ್ತದೆ . ಒಮೆಗಾ-3 ಕೊಬ್ಬಿನಾಮ್ಲಗಳು ಪ್ರತಿರಕ್ಷಣಾ ಮಾಡ್ಯುಲೇಟರಿ ಪರಿಣಾಮವನ್ನು ಹೊಂದಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಸಹಾಯ ಮಾಡುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳು ಮೀನು, ಸೀಗಡಿ, ಸಿಂಪಿ, ಬೀಜಗಳು ಮತ್ತು ಎಣ್ಣೆ ಬೀಜಗಳಾದ ವಾಲ್‌ನಟ್ಸ್, ಪಿಸ್ತಾ, ಚಿಯಾ ಬೀಜಗಳು, ಅಗಸೆ ಬೀಜಗಳು ಇತ್ಯಾದಿಗಳಲ್ಲಿ ಇರುತ್ತವೆ.

ಇದನ್ನೂ ಓದಿ:  Copper Vessel Benefits: ತಾಮ್ರದ ಪಾತ್ರೆಯ ಬಹುಪಯೋಗಿ ಗುಣಗಳೇನು ಗೊತ್ತ?

ಇದನ್ನೂ ಓದಿ: Periods Pain: ಋತುಚಕ್ರದ ನೋವಿಗೆ ಮನೆಯಲ್ಲೇ ಸರಳ ವಿಧಾನಗಳನ್ನು ಮಾಡಿನೋಡಿ

Monsoon Food : Which Food should be eaten in the monsoon season ?

Comments are closed.