ಚಳಿಗಾಲದಲ್ಲಿ ಈ 7 ಆಹಾರ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ ?

ಪ್ರತಿಯೊಬ್ಬರೂ ಚಳಿಗಾಲದಲ್ಲಿ ಶೀತ, ಕೆಮ್ಮು, ಜ್ವರ ಹಾಗೂ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಹೆಚ್ಚು ಸಾಮಾನ್ಯವಾಗಿದೆ. ಅಷ್ಟೇ ಅಲ್ಲದೇ ಈ ಕಾಯಿಲೆಗಳು ವರ್ಷದ ಯಾವುದೇ ಸಮಯದಲ್ಲಿ (Winter Diet Plan) ಕಾಡಬಹುದು. ಚಳಿಯ ವಾತಾವರಣದಲ್ಲಿ ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು, ಪೌಷ್ಟಿಕ ಆಹಾರತಜ್ಞರು ನಿಮ್ಮ ಆಹಾರದಲ್ಲಿ ಪ್ರತಿದಿನ ಇರಬೇಕಾದ 7 ಆಹಾರಪದ್ಧತಿಗಳನ್ನು ಶಿಫಾರಸು ಮಾಡಿದ್ದಾರೆ. ನೀವು ಕಾಯಿಲೆಗಳಿಂದ ದೂರವಿರುವ ಮೂಲಕ ನಿಮ್ಮನ್ನು ರಕ್ಷಿಸಿಕೊಳ್ಳುವ ಉತ್ತಮ ಮಾರ್ಗವಾಗಿರುತ್ತದೆ. ಉತ್ತಮ ಪೋಷಣೆ, ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಪಡೆಯುವುದರ ಜೊತೆಗೆ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ನಿಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ.

ಚಳಿಗಾಲದ ವಾತಾವರಣದಲ್ಲಿ ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಈ 7 ಆಹಾರಗಳನ್ನು ಅಳವಡಿಸಿಕೊಳ್ಳಿ :

ಬೆಳ್ಳುಳ್ಳಿ:
ಬೆಳ್ಳುಳ್ಳಿ ಅಡುಗೆಯಲ್ಲಿ ಬಳಸುವ ಪದಾರ್ಥವಾಗಿದ್ದು, ನಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ. ಬೆಳ್ಳುಳ್ಳಿ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಹೋರಾಡುವ ಗುಣಗಳನ್ನು ಹೊಂದಿದೆ. ಅಲಿಸಿನ್ ಎಂಬ ಸಂಯುಕ್ತವನ್ನು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಅಸಿಡಿಟಿ, ಎದೆಯೂರಿಯನ್ನು ನಮ್ಮಿಂದ ದೂರವಿರಿಸುತ್ತದೆ. ಬೆಳ್ಳುಳ್ಳಿ ಸೇವನೆಯಿಂದ ಶೀತ, ಕೆಮ್ಮು, ಒಣಕೆಮ್ಮು ಹಾಗೂ ಕಫವನ್ನು ಬೇಗನೆ ಗುಣಪಡಿಸುತ್ತದೆ.

ಅರಿಶಿನ ಹಾಲು:
ಅರಶಿನ ಹಾಲನ್ನು ಹೆಚ್ಚಾಗಿ ಶೀತ ಹಾಗೂ ಜ್ವರವನ್ನು ಗಣಪಡಿಸಲು ಹೆಚ್ಚಾಗಿ ಮನೆಮದ್ದು ಆಗಿ ಬಳಸಲಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೇಗನೆ ಶೀತ ಹಾಗೂ ಜ್ವರದಿಂದ ಮುಕ್ತಿ ಹೊಂದಲು ಕಾಳುಮೆಣಸು ಕೂಡ ಸೇರಿಸಬಹುದು. ಹಾಗೇ ಪ್ರತಿದಿನ ಅರಶಿನ ಮಿಶ್ರಿತ ಹಾಲು ಕುಡಿಯುವುದರಿಂದ ನಿದ್ರಾಹೀನತೆಯನ್ನು ದೂರ ಮಾಡುತ್ತದೆ.

ತುಳಸಿ:
ತುಳಸಿ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸೋಂಕನ್ನು ದೂರವಿಡುವ ಮೂಲಕ ಅದ್ಭುತ ಕೆಲಸ ಮಾಡುತ್ತದೆ. ತುಳಸಿಯೊಂದಿಗೆ ಒಂದರಿಂದ ಎರಡು ಕಲ್ಲು ಉಪ್ಪಿನ್ನು ಸೇರಿಸಿ ತಿನ್ನುವುದರಿಂದ ಕೆಮ್ಮ ಮತ್ತು ಕಫ ಬೇಗನೆ ಗುಣವಾಗುತ್ತದೆ. ತುಳಸಿಯೊಂದಿಗೆ ಒಂದು ವೀಳ್ಯದೆಲೆ, ಕಾಲು ಭಾಗದಷ್ಟು ಈರುಳ್ಳಿ ಮತ್ತು ಸಣ್ಣ ಕಲ್ಲು ಸಕ್ಕರೆಯನ್ನು ಒಟ್ಟಿಗೆ ಜಗ್ಗಿದು ತಿನ್ನುವುದರಿಂದ ಎಂತಹ ಕೆಮ್ಮ ಮತ್ತು ಕಫ ಗುಣವಾಗುತ್ತದೆ.

ಬಾದಾಮಿ:
ಬಾದಾಮಿಯಲ್ಲಿ ವಿಟಮಿನ್ ಇ ಅಧಿಕವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅವುಗಳು ಸತ್ವವನ್ನು ಸಹ ಒಳಗೊಂಡಿರುತ್ತದೆ. ಇದು ಶೀತ ಮತ್ತು ಕೆಮ್ಮಿನ ಸಮಯದಲ್ಲಿ ತಿನ್ನುವುದರಿಂದ ಉತ್ತಮ ಪ್ರಯೋಜನಕಾರಿಯಾಗಿದೆ.

ನೆಲ್ಲಿಕಾಯಿ:
ಈ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಅತ್ಯುತ್ತಮವಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ವಿಟಮಿನ್ ಸಿ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಮ್ಯಾಕ್ರೋಫೇಜ್‌ಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಇತರ ಕೋಶಗಳ ಕಾರ್ಯಕ್ಷಮತೆಗೆ ಉತ್ತಮವಾಗಿರುತ್ತದೆ.

ನಿಂಬೆ:
ನಿಂಬೆಯಲ್ಲಿ ವಿಟಮಿನ್ ಸಿ ಮತ್ತು ಬಯೋಫ್ಲೇವನಾಯ್ಡ್‌ಗಳು ತುಂಬಿರುತ್ತದೆ. ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವಾಗ ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ಬಹಳಷ್ಟು ಮಾಡುತ್ತದೆ. ನಿಂಬೆಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಜ್ವರವನ್ನು ಕಡಿಮೆ ಮಾಡುತ್ತದೆ. ಹಾಗೆ ಬಾಯಿ ರುಚಿ ಕೆಟ್ಟಾಗ ಅದನ್ನು ಸರಿಪಡಿಸುತ್ತದೆ. ಹಾಗೆಯೇ ನಿಂಬೆಹಣ್ಣಿನ ರಸ ಕಲ್ಲುಸಕ್ಕರೆ, ಕಾಳು ಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಸ್ವಲ್ಪ ಬಿಸಿ ಮಾಡಿ ತಿನ್ನುವುದ್ದರಿಂದ ಕಫ ಮತ್ತು ಕೆಮ್ಮುನ್ನು ದೂರ ಮಾಡುತ್ತದೆ.

ಇದನ್ನೂ ಓದಿ : Inflammatory Diet : ಚಳಿಗಾಲದಲ್ಲಿ ಉಂಟಾಗುವ ಉರಿಯೂತವನ್ನು ಹೆಚ್ಚಿಸುವ 5 ಆಹಾರಗಳು

ಇದನ್ನೂ ಓದಿ : Diabetes Symptoms : ದೇಹದ ಈ ಹೊರ ಅಂಗಾಂಗಗಳು ಹೇಳುತ್ತವೆ ನಿಮಗೆ ಮಧುಮೇಹ ಇದೆಯೇ ಅಥವಾ ಇಲ್ಲವೇ ಎಂದು…

ಇದನ್ನೂ ಓದಿ : ರಸ್ಕ್‌ ಪ್ರಿಯರೇ ಎಚ್ಚರ ! ನೀವು ಈ 6 ಕಾರಣಗಳಿಂದ ಟೋಸ್ಟ್‌ಗಳನ್ನು ತಿನ್ನಬಾರದು

ಸಿಹಿ ಗೆಣಸು:
ಸಿಹಿಗೆಣಸುಗಳು ಫೈಬರ್, ವಿಟಮಿನ್ ಎ ಮತ್ತು ಪೊಟ್ಯಾಸಿಯಮ್‌ನ ಸಮೃದ್ಧ ಮೂಲವಾಗಿದೆ. ನಿಯಮಿತ ಸೇವನೆಯಿಂದ ಮಲಬದ್ಧತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

Winter Diet Plan: Do you know the benefits of eating these 7 foods in winter?

Comments are closed.