World Health Day 2023 : ಆರೋಗ್ಯದ ಕಾಳಜಿವಹಿಸುವ ಟಾಪ್‌ 5 ಫಿಟ್ನೆಸ್‌ ಟ್ರಾಕರ್‌ಗಳು

ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಆರೋಗ್ಯವೊಂದಿದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು. ಹಾಗಾಗಿಯೇ ಆರೋಗ್ಯವೇ ಭಾಗ್ಯ (Health is Wealth) ಎಂದು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಲುಷಿತ ವಾತಾವರಣ ಮತ್ತು ಬದಲಾದ ಜೀವನಶೈಲಿಯಿಂದಾಗಿ ಮಾನವನ ಆರೋಗ್ಯ ಹದಗೆಡುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಬಿಪಿ, ಶುಗರ್‌ ನಂತಹ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ, ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ವಿಶ್ವ ಆರೋಗ್ಯ ದಿನವು (World Health Day 2023) ನಮ್ಮ ಫಿಟ್ನೆಸ್‌ ಗುರಿಗಳ ಮೇಲೆ ಕೇಂದ್ರೀಕರಿಸಲು ಉತ್ತಮ ಅವಕಾಶವಾಗಿದೆ. ಈಗ ಮಾರುಕಟ್ಟೆಯಲ್ಲಿ ಫಿಟ್ನೆಸ್‌ಗೆ ಸಂಬಂಧಪಟ್ಟ ಅನೇಕ ಧರಿಸಬಹುದಾದ ಸಾಧನಗಳು ದೊರೆಯುತ್ತಿವೆ. ಅವುಗಳು ನಮಗೆ ಫಿಟ್ನೆಸ್‌ ಗುರಿ ಸಾಧಿಸಲು ನೆರವಾಗುತ್ತವೆ. ನಮ್ಮನ್ನು ಸಕ್ರೀಯಗೊಳಿಸಿ, ಆರೋಗ್ಯ ಕಾಪಾಡಿಕೊಳ್ಳಲು ಉತ್ತೇಜಿಸುವ ಟಾಪ್‌ 5 ಫಿಟ್ನೆಸ್‌ ಟ್ರಾಕರ್‌, ಸ್ಮಾರ್ಟ್‌ ಬ್ಯಾಡ್‌, ಮತ್ತು ಸ್ಮಾರ್ಟ್‌ವಾಚ್‌ಗಳ ಪರಿಚಯ ಇಲ್ಲಿದೆ ಓದಿ.

ಫಿಟ್‌ಬಿಟ್‌ ಚಾರ್ಜ್‌ 5 :
ದೈನಂದಿನ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಮತ್ತು ಸಮಗ್ರ ಆರೋಗ್ಯವನ್ನು ಸುಧಾರಿಸಲು ಬಯಸುವವರಿಗೆ ಫಿಟ್‌ಬಿಟ್ ಚಾರ್ಜ್ 5 ಉತ್ತಮ ಫಿಟ್‌ನೆಸ್ ಟ್ರ್ಯಾಕರ್ ಆಗಿದೆ. ಇದು ಹೃದಯ ಬಡಿತ ಮಾನಿಟರ್, ನಿದ್ರೆಯ ಟ್ರ್ಯಾಕಿಂಗ್, GPS ಮತ್ತು 7 ದಿನಗಳವರೆಗಿನ ಪ್ರಭಾವಶಾಲಿ ಬ್ಯಾಟರಿ ಅವಧಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಇದು ಬಿಲ್ಟ್‌–ಇನ್‌ ಸ್ಟ್ರೆಸ್‌ ಟ್ರ್ಯಾಕರ್ ಅನ್ನು ಹೊಂದಿದೆ. ಇದು ಉಸಿರಾಟದ ಗತಿಯನ್ನು ಟ್ರಾಕ್‌ ಮಾಡುತ್ತದೆ. ವಿಶ್ರಾಂತಿ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಸ್ಯಾಮಸಂಗ್‌ ಗ್ಯಾಲೆಕ್ಸಿ ವಾಚ್‌ 4 ಕ್ಲಾಸಿಕ್‌ ಸ್ಮಾರ್ಟ್‌ವಾಚ್‌:
ಈ ಸ್ಮಾರ್ಟ್‌ವಾಚ್‌ ಹೈ–ಎಂಡ್‌ ಫಿಟ್ನೆಸ್‌ ಟ್ರಾಕರ್‌ ಆಗಿದೆ. ಫಿಟ್ನೆಸ್‌ ಉತ್ಸಾಹಿಗಳಿಗೆ ಪರಿಪೂರ್ಣವಾದ ಸ್ಮಾರ್ಟ್‌ವಾಚ್‌ ಇದಾಗಿದೆ. ಸ್ಯಾಮಸಂಗ್‌ ಗ್ಯಾಲೆಕ್ಸಿ ವಾಚ್‌ 4 ಕ್ಲಾಸಿಕ್‌ ಸ್ಮಾರ್ಟ್‌ವಾಚ್‌ ಇದು ಸುಧಾರಿತ ಆರೋಗ್ಯ ಸಂವೇದಕವನ್ನು ಹೊಂದಿದೆ. ಇದು ದೇಹದಲ್ಲಿನ ಶೇಕಡಾವಾರು ಕೊಬ್ಬಿನ ಪ್ರಮಾಣ ಮತ್ತು ಮಸಲ್ಸ್‌ ಮಾಸ್‌, ಮತ್ತು ದೇಹದ ಸಂಯೋಜನೆಯನ್ನು ಅಳೆಯಬಲ್ಲದು. ಇದು ಜಿಪಿಎಸ್‌, ಹೃದಯ ಬಡಿತ ಮಾನಿಟರ್ ಮತ್ತು ನಿದ್ರೆಯ ಟ್ರ್ಯಾಕಿಂಗ್ ಅನ್ನು ಸಹ ಹೊಂದಿದೆ. ಇದರಲ್ಲಿ 90 ವಿಭಿನ್ನ ವರ್ಕ್‌ಔಟ್‌ಗಳನ್ನು ಟ್ರ್ಯಾಕ್ ಮಾಡಬಹುದು.

ಇದನ್ನೂ ಓದಿ : World Health Day : ವಿಶ್ವ ಆರೋಗ್ಯ ದಿನ 2023 : ಇತಿಹಾಸ, ಮಹತ್ವ ಇಲ್ಲಿದೆ ಸಂಪೂರ್ಣ ವಿವರ

ಆಪಲ್‌ ವಾಚ್‌ ಸೀರಿಸ್‌ 7 :
ಆಪಲ್‌ ವಾಚ್ ಸೀರಿಸ್‌ 7, ಇದು ಆಪಲ್‌ನ ಇತ್ತೀಚಿನ ಮತ್ತು ಅತ್ಯುತ್ತಮ ಸ್ಮಾರ್ಟ್‌ವಾಚ್ ಆಗಿದೆ. ದೊಡ್ಡದಾದ, ಹೆಚ್ಚು ಬಾಳಿಕೆ ಬರುವ ಸ್ಕ್ರೀನ್, ವೇಗದ ಚಾರ್ಜಿಂಗ್ ಮತ್ತು ಹೊಸ ಫಿಟ್‌ನೆಸ್ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ. ಉದಾಹರಣೆಗೆ ಸೈಕ್ಲಿಂಗ್ ವರ್ಕ್‌ಔಟ್ ಆಯ್ಕೆ ಮತ್ತು ತೈ ಚಿ ವ್ಯಾಯಾಮದ ಪ್ರಕಾರಗಳಂತಹ ವಿಶಿಷ್ಟ ವರ್ಕ್‌ಔಟ್‌ಗಳನ್ನು ಹೊಂದಿದೆ. ಆಪಲ್‌ ವಾಚ್‌ನಿಂದ ನೀವು ನಿರೀಕ್ಷಿಸುವ ಮೊಬೈಲ್ ಪಾವತಿಗಳು, ಧ್ವನಿ ಸಹಾಯಕಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಂತಹ ಎಲ್ಲಾ ವೈಶಿಷ್ಟ್ಯಗಳನ್ನು ಸಹ ಇದು ಹೊಂದಿದೆ.

ಪ್ಲೇಫಿಟ್‌ ಸ್ಲಿಮ್‌ ಸ್ಮಾರ್ಟ್‌ವಾಚ್‌ :
ಪ್ಲೇಫಿಟ್‌ ಸ್ಲಿಮ್‌ ಸ್ಮಾರ್ಟ್‌ವಾಚ್‌ ಮೇಡ್‌ ಇನ್‌ ಇಂಡಿಯಾದ ಫಿಟ್‌ನೆಸ್‌ ಟ್ರಾಕರ್‌ ಸ್ಮಾರ್ಟ್‌ವಾಚ್‌ ಆಗಿದೆ. 1.28′′ (240 x 240 ಪಿಕ್ಸೆಲ್‌ಗಳು) IPS LCD ಸ್ಕ್ರೀನ್, IP67 ನೀರು ಮತ್ತು ಧೂಳಿನ ನಿರೋಧಕತೆ, ವಿವಿಧ ಕ್ರೀಡಾ ವಿಧಾನಗಳು, ಹೃದಯ ಬಡಿತ ಮತ್ತು ಫಿಟ್‌ನೆಸ್ ಟ್ರ್ಯಾಕರ್, ನಿದ್ರೆ ಮತ್ತು SPO2 ಮಾನಿಟರ್, ಬ್ಲೂಟೂತ್ ಅಧಿಸೂಚನೆ ಮುಂತಾದ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಹೆಸರೇ ಸೂಚಿಸುವಂತೆ ಈ ಸ್ಲಿಮ್‌ಲೈನ್ ಟ್ರೆಂಡಿ ಬ್ಯಾಂಡ್ ಸ್ಮಾರ್ಟ್‌ವಾಚ್ ಕಪ್ಪು ಮತ್ತು ನೀಲಿ ಬಣ್ಣಗಳ ಆಯ್ಕೆ ನೀಡುತ್ತದೆ. ಇದು 180mAh ಬ್ಯಾಟರಿಯನ್ನು ಹೊಂದಿದ್ದು 7-ದಿನದ ಬ್ಯಾಟರಿ ಲೈಫ್‌ ಮತ್ತು 15-ದಿನದ ಸ್ಟ್ಯಾಂಡ್‌ಬೈ ಟೈಮ್ ಗ್ಯಾರಂಟಿಯನ್ನು ಒಳಗೊಂಡಿದೆ.

ಶಿಯೋಮಿ ಮಿ ಸ್ಮಾರ್ಟ್‌ ಬ್ಯಾಂಡ್‌ 6 :
ಬಜೆಟ್‌ ಫ್ರೆಂಡ್ಲೀ ಫಿಟ್ನೆಸ್‌ ಸ್ಮಾರ್ಟ್‌ ಬ್ಯಾಂಡ್‌ ಹುಡುಕುತ್ತಿದ್ದರೆ ಶಿಯೋಮಿ ಮಿ ಸ್ಮಾರ್ಟ್‌ ಬ್ಯಾಂಡ್‌ 6 ಉತ್ತಮವಾಗಿದೆ. ಇದು ಹೃದಯ ಗತಿ, ನಿದ್ದೆ, ವರ್ಕ್‌ಔಟ್‌ ಗಳನ್ನು ಟ್ರಾಕ್‌ ಮಾಡುವ ಆಯ್ಕೆಗಳ ಜೊತೆಗೆ ಈಜು, ಎಲೆಪ್ಟಿಕಲ್‌ ವರ್ಕ್‌ಔಟ್‌ಗಳನ್ನು ಒಳಗೊಂಡಿದೆ. ಇದು 50 ಮೀಟರ್‌ವರೆಗಿನ ವಾಟರ್‌ ರೆಸಿಸ್ಟೆನ್ಸ್‌ ಹೊಂದಿದೆ. ಇದು 14 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಇದನ್ನೂ ಓದಿ : Pacemaker and Smartwatches : ಸ್ಮಾರ್ಟ್‌ವಾಚ್‌ನಿಂದ ಪೇಸ್‌ಮೇಕರ್‌ ಹಾಕಿಸಿಕೊಂಡವರಿಗೆ ತೊಂದರೆ ಆಗಬಹುದಾ? ಅಧ್ಯಯನ ಹೇಳುವುದಾದರೂ ಏನು?

(World Health Day 2023. Here are top 5 fitness trackers, smart bands and smartwatches. It helps you stay healthy)

Comments are closed.