ಕುಮಟಾ : ಮೀನು ಸಾಗಾಟದ ವಾಹನದಲ್ಲಿ ಗೋಮಾಂಸ

ಉತ್ತರಕನ್ನಡ: (Beef transportation) ಜಿಲ್ಲೆಯ ಹೆದ್ದಾರಿ ಪಕ್ಕದ ವಿದ್ಯುತ್ ಕಂಬಕ್ಕೆ ಮೀನಿನ ಲಾರಿ ಢಿಕ್ಕಿ ಹೊಡೆದಿದ್ದು, ಅಪಘಾತದ ಬಳಿಕ ಮೀನಿನ ವಾಹನದಲ್ಲಿ ಗೋಮಾಂಸ ಪತ್ತೆಯಾದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ನಡೆದಿದೆ. ಸ್ಥಳೀಯರು ವಾಹನ ಪರಿಶೀಲನೆ ನಡೆಸಿದ ವೇಳೆ ಗೋಮಾಂಸ ಪ್ರಕರಣ ಬೆಳಕಿಗೆ ಬಂದಿದ್ದು, ಕುಮಟಾ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶಿರಸಿ ಕಡೆಯಿಂದ ಭಟ್ಕಳ ಕಡೆಗೆ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು, ಮೀನುಗಳನ್ನು ತುಂಬಿಕೊಂಡು ಹೋಗುವ ವಾಹನದಲ್ಲಿ ಅಕ್ರಮ ಗೋ ಮಾಂಸ ತುಂಬಿಕೊಂಡು ಹೋಗುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಪಲ್ಟಿ ಯಾದ ಘಟನೆ ನಡೆದಿದೆ. ಅಪಘಾತ ನಡೆಯುತ್ತಿದ್ದಂತೆ ವಾಹನವನ್ನು ಅಲ್ಲಿಯೇ ಬಿಟ್ಟು, ವಾಹನ ಚಾಲಕ ಪರಾರಿಯಾಗಿದ್ದು, ಸ್ಥಳೀಯರು ಮೀನಿನ ವಾಹನವನ್ನು ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯರು ವಾಹನ ಪರಿಶೀಲನೆ ನಡೆಸಿದಾಗ ಗೋಮಾಂಸ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಮೀನಿನ ವಾಹನದಲ್ಲಿ ಸುಮಾರು ಎಂಟು ಕ್ವಿಂಟಾಲ್‌ ನಷ್ಟು ಗೋಮಾಂಸ ಪತ್ತೆಯಾಗಿದ್ದು, ಶಿರಸಿ ಯಿಂದ ಕುಮಟಾ ಮಾರ್ಗವಾಗಿ ಮಂಗಳೂರು ಕಡೆ ತೆರಳುತಿದ್ದ ದನದ ಮಾಂಸ ತುಂಬಿದ್ದ ವಾಹನ ಇದಾಗಿದ್ದು ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡಲಾಗುತಿತ್ತು ಎಂದು ತಿಳಿದುಬಂದಿದೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕುಮಟಾ ಪೊಲೀಸರು ವಾಹನವನ್ನು ಮರು ಪರಿಶೀಲನೆ ನಡೆಸಿದ್ದಾರೆ. ಪರಾರಿಯಾದ ಚಾಲಕ ಜಾವೇದ್ ಎನ್ನುವ ಬಗ್ಗೆ ಮಾಹಿತಿ ದೊರೆತಿದ್ದು, ವಾಹನದ ಮಾಲೀಕ ಗಣೇಶ್ ಹರಿಕಾಂತ್ರ ಎಂದು ತಿಳಿದು ಬಂದಿದೆ‌.

ಗೋಮಾಂಸ ಸಾಗಾಟ ಮಾಡುತ್ತಿದ್ದ ಮೀನಿನ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಚಾಲಕ ಹಾಗೂ ವಾಹನದ ಮಾಲೀಕ ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದ್ಲಲದೇ ಪರಾರಿಯಾದ ವಾಹನ ಚಾಲಕನ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : 27 ಮಹಿಳೆಯರೊಂದಿಗೆ ಮದುವೆಯಾಗಿದ್ದ ಭೂಪನಿಗೆ ಇಡಿ ಕಂಟಕ

ಇದನ್ನೂ ಓದಿ : Mangaluru Crime : ಕೋಳಿ ಸಾರಿನ ವಿಚಾರಕ್ಕೆ ಮಗನನ್ನೇ ಕೊಂದ ತಂದೆ

ಇದನ್ನೂ ಓದಿ : Chennai crime : ಉತ್ಸವದ ವೇಳೆ ನೀರಿನ ತೊಟ್ಟಿಯಲ್ಲಿ ಬಿದ್ದು 5 ಮಂದಿ ಬಾಲಕರು ಸಾವು

Beef transportation: Kumata: Beef in a fish transportation vehicle

Comments are closed.