Viral Video: ಪಾನಿಪುರಿಯಲ್ಲಿ ಮೂಳೆಯ ತುಂಡು ಪತ್ತೆ! ಗ್ರಾಹಕರ ಆಕ್ರೋಶ
ಪಾನಿಪುರಿ ಎಂದರೆ ಇಷ್ಟ ಇಲ್ಲ ಎನ್ನುವ ಯುವತಿಯರು ಸಿಗುವುದೇ ಕಡಿಮೆ. ಆದರೆ ಇದೀಗ ಈ ಪಾನಿಪುರಿ ತಿನ್ನೋಕೆ ನೂರು ಭಾರಿ ಯೋಚಿಸುವಂತಹ ಘಟನೆಯೊಂದು ಅಹಮದಾಬಾದ್ನ ರಾಣಿಪ್ ಎಂಬಲ್ಲಿ ನಡೆದಿದೆ. ಪಾನಿಪುರಿ ತಿನ್ನುತ್ತಿದ್ದ ಸಂದರ್ಭದಲ್ಲಿ ಯುವತಿಯೊಬ್ಬಳಿಗೆ ಪುರಿಯಲ್ಲಿ ಮೂಳೆಯ ತುಣುಕು ಪತ್ತೆಯಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಪಾನಿಪುರಿ ತಿನ್ನುತ್ತಿದ್ದ ಸಂದರ್ಭದಲ್ಲಿ ಮೂಳೆ ಪತ್ತೆಯಾಗಿದ್ದು, ಆಘಾತಕ್ಕೊಳಗಾದ ಯುವತಿಯು ಅಂಗಡಿ ಮಾಲೀಕನನ್ನು ಪ್ರಶ್ನೆ ಮಾಡಿದ್ದಾಳೆ. ಆದರೆ ಅಂಗಡಿ ಮಾಲೀಕ ಅದು ಮೂಳೆಯಲ್ಲ ಮರದ ತುಂಡು ಎಂದು ಸಬೂಬು ನೀಡಲು ಯತ್ನಿಸಿದ್ದಾರೆ. ಆದರೆ ಯುವತಿ ಇನ್ನಷ್ಟು ವಾದಿಸುತ್ತಿದ್ದಂತೆಯೇ ಆತ ಅದು ಮೂಳೆ ತುಂಡು ಎಂಬುದನ್ನು ಒಪ್ಪಿಕೊಂಡಿದ್ದಾನೆ.
Also Read: ರಜತ ಪ್ರಿಯರಿಗೆ ಕೇಂದ್ರದ ಶಾಕ್: ಬೆಳ್ಳಿ ಬಾರ್ ಆಮದಿಗೆ ನಿರ್ಬಂಧ – 99.9% ಶುದ್ಧ ಸಿಲ್ವರ್‌ಗೆ ಲೈಸೆನ್ಸ್ ಕಡ್ಡಾಯ!
ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇನ್ಮುಂದೆ ಪಾನಿಪುರಿಯನ್ನು ಮೊದಲಿನಷ್ಟು ಸವಿಯಲು ಸಾಧ್ಯವಿಲ್ಲ ಅಂತಾ ಸಾರ್ವಜನಿಕರು ಅಭಿಪ್ರಾಯ ಹೊರಹಾಕಿದ್ದಾರೆ. ಇನ್ನು ಇ ವಿಡಿಯೋ ವೈರಲ್ ಬೆನ್ನಲ್ಲೇ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಆರೋಗ್ಯ ಇಲಾಖೆಯು ಕ್ರಮ ಕೈಗೊಂಡಿದ್ದು ಪಾನಿಪುರಿ ಅಂಗಡಿ ಬಂದ್ ಮಾಡಿಸಿದೆ. ಹಾಗೂ ಅಂಗಡಿ ಮಾಲೀಕನಿಗೆ ಅಶುಚಿಯಾದ ವಾತಾವರಣದಲ್ಲಿ ಆಹಾರ ಮಾರಾಟ ಮಾಡುತ್ತಿದ್ದಕ್ಕಾಗಿ ಮಾಲೀಕನಿಗೆ ₹10,000 ದಂಡ ವಿಧಿಸಿದೆ.
A piece of bone was found in Panipuri Consumers are outraged