2ರ ಮಗ್ಗಿ ಹೇಳಲು ಬಾರದ ಪುಟ್ಟ ಬಾಲಕನಿಗೆ ಮನಬಂದಂತೆ ಥಳಿಸಿದ ಶಿಕ್ಷಕಿ

Teacher beat up little boy: 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆರು ವರ್ಷದ ಪುಟ್ಟ ಬಾಲಕನಿಗೆ 2ರ ಮಗ್ಗಿ ಹೇಳಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಖಾಸಗಿ ಶಾಲೆಯ ಮಹಿಳಾ ಪ್ರಾಂಶುಪಾಲೆಯೊಬ್ಬರು ಪ್ಲಾಸ್ಟಿಕ್ ಪೈಪ್ನಿಂದ ಬಾಲಕನಿಗೆ ಮನಬಂದಂತೆ ಥಳಿಸಿರುವ ಘಟನೆಯು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಸಂಭವಿಸಿದೆ. ಈ ಸಂಬಂಧ ಆರೋಪಿ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕನ ಪೋಷಕರು ನೀಡಿರುವ ದೂರನ್ನು ಆಧರಿಸಿ ಪ್ರಾಂಶುಪಾಲರಾದ ಶಶಿಕಲಾ ಠಾಕೂರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ಉಸ್ತುವಾರಿ ಹಿತೇಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಅಪ್ರಾಪ್ತ ಬಾಲಕಿಯ ತಂದೆ ನೀಡಿರುವ ದೂರನ್ನು ಆಧರಿಸಿ ಆರೋಪಿ ಪ್ರಾಂಶುಪಾಲೆಯ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read: ದಾಂಪತ್ಯ ಕಲಹ : ಪುತ್ರಿಯ ಎದುರಲ್ಲೇ ಗುಂಡಿಕ್ಕಿ ಪತ್ನಿಯನ್ನು ಕೊಂದ ಪತಿ

ಶಾಲೆಯಲ್ಲಿ ಮಕ್ಕಳಿಗೆ ಹೋಮ್ವರ್ಕ್ ರೂಪದಲ್ಲಿ 2ರ ಮಗ್ಗಿಯನ್ನು ಕಂಠಪಾಠ ಮಾಡಿಕೊಂಡು ಬರುವಂತೆ ಪ್ರಾಂಶುಪಾಲೆ ಶಶಿಕಲಾ ಠಾಕೂರ್ ಸೂಚನೆ ನೀಡಿದ್ದರು ಎನ್ನಲಾಗಿದೆ. ಮಾರನೇ ದಿನ ಸಂತ್ರಸ್ತ ಬಾಲಕ 2ರ ಮಗ್ಗಿಯನ್ನು ಕಂಠಪಾಠ ಮಾಡಿ ಹೇಳುವಲ್ಲಿ ವಿಫಲನಾಗಿದ್ದಾನೆ.

ಇದರಿಂದ ಕೋಪಗೊಂಡ ಶಿಕ್ಷಕಿ ಶಶಿಕಲಾ ಶಿಕ್ಷೆಯ ರೂಪದಲ್ಲಿ ಬಾಲಕನಿಗೆ ಪ್ಲಾಸ್ಟಿಕ್ ಪೈಪ್ನಿಂದ ಚೆನ್ನಾಗಿ ಥಳಿಸಿದ್ದಾರೆ ಎಂದು ದೂರಿನಲ್ಲಿ ಬಾಲಕನ ಪೋಷಕರು ಉಲ್ಲೇಖಿಸಿದ್ದಾರೆ.

ಸಂಜೆ ಶಾಲೆಯಿಂದ ಮರಳಿ ಮನೆಗೆ ಬಂದ ಬಾಲಕ ಮನೆಯಲ್ಲಿ ಯಾರೊಂದಿಗೂ ಮಾತನಾಡದೇ ಮಂಕಾಗಿ ಕುಳಿತಿದ್ದ ಎನ್ನಲಾಗಿದೆ. ಬಾಲಕನ ತಾಯಿ ಆತನ ಬಟ್ಟೆ ಬದಲಿಸುತ್ತಿದ್ದ ಸಂದರ್ಭದಲ್ಲಿ ಎರಡೂ ತೊಡೆಗಳು ಹಾಗೂ ಮುಖದ ಮೇಲೆ ಗಾಯದ ಗುರುತನ್ನು ಕಂಡಿದ್ದರು.

Also Read: ಮನೆಗೆ ಬಾರಲು ಒಪ್ಪದ ಪತ್ನಿ : ಹೆತ್ತ ಮಕ್ಕಳ ಕತ್ತು ಸೀಳಿ ಕೊಂದ ಪಾಪಿ ತಂದೆ

ಬಳಿಕ ಬಾಲಕ ಶಾಲೆಯಲ್ಲಿ ನಡೆದ ಘಟನೆಯನ್ನು ಪೋಷಕರ ಎದುರು ವಿವರಿಸಿದ್ದಾನೆ ಎನ್ನಲಾಗಿದೆ. ಕೂಡಲೇ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಪೋಷಕರು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಶಾಲಾ ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories