Bahubhai Prajapati : 20 ರೂಪಾಯಿ ಲಂಚಕ್ಕೆ 30 ವರ್ಷಕಾಲ ಶಿಕ್ಷೆ : ನಿರಪರಾಧಿ ತೀರ್ಪಿನ ಬೆನ್ನಲ್ಲೇ ಕಾನ್ಸ್ಟೇಬಲ್ಗೆ ಹೃದಯಾಘಾತ

Bahubhai Prajapati : ಅಹಮದಾಬಾದ್ : ಇಂದಿನ ದಿನಗಳಲ್ಲಿ ಲಂಚಬಾಕರು ಕೋಟಿ ಕೋಟಿ ಆಸ್ತಿ ಲೂಟಿ ಹೊಡೆದ್ರು ಆರಾಮಾಗಿ ಇರ್ತಾರೆ. ಅಲ್ಲೊಂದು ಇಲ್ಲೊಂದು ದಾಳಿ ನಡೆದ್ರೂ ಕೂಡ ಶಿಕ್ಷೆಯಿಂದ ತಪ್ಪಿಸಿಕೊಳ್ತಾರೆ. ಆದರೆ ಇಲ್ಲೊಬ್ಬ ಪೊಲೀಸ್ ಕಾನ್ಸ್ಟೇಬಲ್ 20 ರೂಪಾಯಿ ಲಂಚ ಸ್ವೀಕಾರ ಮಾಡಿದ್ದ ಆರೋಪದಿಂದ ಬರೋಬ್ಬರಿ 30 ವರ್ಷ ಶಿಕ್ಷೆ ಅನುಭವಿಸಿದ್ದಾರೆ.
ಕೊನೆಗೆ ತಾನು ನಿರಪರಾಧಿ ಅಂತಾ ಸಾಭೀತು ಪಡಿಸಿದ ಮರುದಿನವೇ ಹೃದಯಾಘಾತದಿಂದ ಇಹಲೋಕ ತ್ಯೆಜಿಸಿದ ಹೃದಯ ವಿದ್ರಾವಕ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ಪೊಲೀಸ್ ಕಾನ್ಸ್ಟೇಬಲ್ ಬಾಬುಬಾಹಿ ಪ್ರಜಾಪತಿ ಎಂಬವರು 1996ರಲ್ಲಿ ಅಹಮದಾಬಾದ್ನ ವೇಜಲ್ಪುರದಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡ್ತಿದ್ರು.
Also Read : ಶಬರಿಮಲೆಯ ಚಿನ್ನ ಲೂಟಿ ಪ್ರಕರಣಕ್ಕೆ ಟ್ವಿಸ್ಟ್ : ಕೇರಳ ಹೈಕೋರ್ಟ್ಗೆ ಇಂದು ವರದಿ ಸಲ್ಲಿಕೆ
ಈ ವೇಳೆಯಲ್ಲಿ ಅವರು ಕೇವಲ 20 ರೂಪಾಯಿ ಲಂಚ ಪಡೆದ ಆರೋಪದ ಅಡಿಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಅವರ ವಿರುದ್ದ ಪ್ರಕರಣ ದಾಖಲಾಗಿದ್ದು, 2003ರಲ್ಲಿ ನ್ಯಾಯಾಲಯ ಪ್ರಕರಣ ವಿಚಾರಣೆಯನ್ನು ಆರಂಭಿಸಿತ್ತು.
2004ರಲ್ಲಿ ಸೆಷನ್ಸ್ ನ್ಯಾಯಾಲಯವು ಅವರಿಗೆ 4 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ದ ಪ್ರಜಾಪತಿ ಅವರು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
Also Read : ಸುಚಿತ್ರಾ ನಾಯ್ಕ್ ಕಳ್ಳಾಟ; ಅಪ್ಪು ಹೆಸರಿನ ದುರ್ಬಳಕೆ, ಕಲಬುರಗಿ ಜಮೀನ್ದಾರನ ಜೊತೆ ಅಕ್ರಮ ಸಂಬಂಧ!
ಎರಡು ದಶಕಗಳ ಕಾಲ ವಿಚಾರಣೆಯನ್ನು ನಡೆಸಿದ್ದ ನ್ಯಾಯಾಲಯ 2026ರ ಫೆಬ್ರವರಿ 4ರಂದು ತೀರ್ಪು ನೀಡಿದ್ದು, ಪ್ರಜಾಪತಿ ಅವರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ. ಸದೀರ್ಘ ಹೋರಾಟದ ನಂತರ ಪ್ರಜಾಪತಿ ಅವರು ಕಳಂಕ ರಹಿತರಾಗಿದ್ದರು. ಆದರೆ ತೀರ್ಪು ಹೊರಬಿದ್ದ ಮರು ದಿನ ಎದ್ದೇಳುವ ಮೊದಲೇ ಪ್ರಜಾಪತಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
cop Jailed for 30 Years Over 20 rs Bribe dies after Being Acquitted Bahubhai Prajapati Gujarat High Court



