ಚೀನಾ – ಭಾರತದ ನಡುವೆ ನೇರ ವಿಮಾನಯಾನ : ಇಂಡಿಗೋದಿಂದ ಮಹತ್ವದ ಘೋಷಣೆ
Direct flights between China and India: ನಾಗರಿಕ ವಿಮಾನಯಾನ ಅಧಿಕಾರಿಗಳ ನಿರಂತರ ಚರ್ಚೆಯ ಫಲವಾಗಿ ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ಭಾರತ ಹಾಗೂ ಚೀನಾ ನಡುವಿನ ನೇರ ವಿಮಾನಯಾನ ಸಂಪರ್ಕ ಮತ್ತೆ ಪುನಾರಂಭಿಸಲು ಉಭಯ ದೇಶಗಳು ಒಪ್ಪಿಗೆ ನೀಡಿದ್ದವು.
ಇದೀಗ ಮತ್ತೊಂದು ಪ್ರಮುಖ ಬೆಳವಣಿಗೆ ಎಂಬಂತೆ ನವೆಂಬರ್ 10ರಿಂದ ದೆಹಲಿ(Delhi) ಮತ್ತು ಗುವಾಂಗ್ ಝೌ ನಡುವೆ ದಿನನಿತ್ಯ ನೇರ ವಿಮಾನಯಾನ ಆರಂಭಿಸುವುದಾಗಿ ಇಂಡಿಗೋ ಸಂಸ್ಥೆ ಘೋಷಣೆ ಮಾಡಿದೆ. ಅಕ್ಟೋಬರ್ 26ರಿಂದ ಕೊಲ್ಕತ್ತಾದಿಂದ ಗುವಾಂಗ್‌ಝೌ ವಿಮಾನಯಾನ ಆರಂಭಿಸುವುದಾಗಿ ಇಂಡಿಗೋ ಕಂಪನಿಯು ಈ ಹಿಂದೆಯೇ ಮಾಹಿತಿ ನೀಡಿತ್ತು.
ಇಂಡಿಗೋ ಸಂಸ್ಥೆಯ ಘೋಷಣೆ ಬೆನ್ನಲ್ಲೇ ಏರ್ ಇಂಡಿಯಾ ಕೂಡ ಈ ವರ್ಷಾಂತ್ಯದೊಳಗಾಗಿ ಚೀನಾಗೆ ನೇರ ವಿಮಾನಯಾನ ಆರಂಭಿಸಲು ತಯಾರಿ ನಡೆಸುತ್ತುದೆ. ಅದೇ ರೀತಿ ಚೀನಾದ ವಿಮಾನಯಾನ ಸಂಸ್ಥೆಗಳು ಕೂಡ ಭಾರತಕ್ಕೆ ವಿಮಾನ ಸಂಪರ್ಕ ನೀಡಲಿವೆ.
Also Read: ಹೈದರಾಬಾದ್ನಲ್ಲಿ ಪೊಲಿಯೋ ಲಸಿಕೆ ಅಭಿಯಾನ : ಹೊಸ ಕ್ರಾಂತಿ ರಚಿಸಲು ಜಿಲ್ಲಾಡಳಿತ ಸರ್ವಸನದ್ಧ
ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವಿನ ಮಹತ್ವದ ಸಭೆ ಬಳಿಕ ಚೀನಾ ಹಾಗೂ ಭಾರತದ ನಡುವೆ ಮೊದಲ ವಿಮಾನಯಾನ ಘೋಷಿಸಿದ ಸಂಸ್ಥೆ ಇಂಡಿಗೋ ಎನಿಸಲಿದೆ.
2019ರಲ್ಲಿ ಭಾರತ ಹಾಗೂ ಚೀನಾ ನಡುವೆ ಏರ್ ಇಂಡಿಯಾ, ಇಂಡಿಗೋ ಹಾಗೂ ಚೀನಾದ ಒಟ್ಟೂ 539 ವಿಮಾನಗಳು ಹಾರಾಡುತ್ತಿದ್ದವು. ಮಾರ್ಚ್ 2020ರಲ್ಲಿ ಕೊರೊನಾ ಸಂದರ್ಭದಲ್ಲಿ ಚೀನಾ ಹಾಗೂ ಭಾರತದ ನಡುವೆ ನೇರ ವಿಮಾನ ಸಂಪರ್ಕ ಕಡಿತಗೊಂಡಿತ್ತು.
ಇದಾದ ಬಳಿಕ ಪ್ರಯಾಣಿಕರು ಬೇರೆ ದೇಶಗಳಿಂದ ಪ್ರಯಾಣಿಸಬೇಕಾದ ಅನಿವಾರ್ಯತೆಯಿತ್ತು. ಆದರೆ ಅಕ್ಟೋಬರ್ 2ರಂದು ಉಭಯ ದೇಶಗಳ ನಡುವೆ ನಡೆದ ಮಹತ್ವದ ಸಭೆಯಲ್ಲಿ ನೇರ ವಿಮಾನಯಾನ ಆರಂಭಿಸಲು ಎರಡೂ ದೇಶಗಳು ಒಪ್ಪಿಗೆ ನೀಡಿದ್ದವು.
Also Read: Karuru Vijay rally : ಕರೂರು ವಿಜಯ್ ರ‍್ಯಾಲಿ ದುರಂತ: ಮೃತರ ಸಂಖ್ಯೆ 39ಕ್ಕೆ ಏರಿಕೆ, ಕೊಲೆ ಯತ್ನ ಪ್ರಕರಣ ದಾಖಲು



