ರೈಲ್ವೆ ಇಲಾಖೆಯಿಂದ ಜಾರಿಗೆ ಬಂತು ಹೊಸ ನಿಯಮ : ಬೋರ್ಡಿಂಗ್ ಪಾಯಿಂಟ್ ಮಿಸ್ ಮಾಡಿದ್ರೆ ನಿಮ್ಮ ಆಸನ ಕೂಡ ಮಿಸ್..!
ತನ್ನ ಸೇವೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುತ್ತಲೇ ಬರುತ್ತಿರುವ ಭಾರತೀಯ ರೈಲ್ವೆ ಇಲಾಖೆಯು ಇದೀಗ ಪ್ರಯಾಣಿಕರ ಸೀಟ್ ಬುಕ್ಕಿಂಗ್ ವಿಚಾರದಲ್ಲಿ ಕಠಿಣ ನಿಯಮವೊಂದನ್ನು ಜಾರಿಗೆ ತಂದಿದೆ . ಈ ನಿಯಮದ ಅಡಿಯಲ್ಲಿ, ಪ್ರಯಾಣಿಕರು ತಮ್ಮ ಬೋರ್ಡಿಂಗ್ ನಿಲ್ದಾಣದಲ್ಲಿ ರೈಲು ಹತ್ತಲು ವಿಫಲರಾದಲ್ಲಿ ಆಕ್ಷಣವೇ ಅವರು ಬುಕ್ಕಿಂಗ್ ಮಾಡಿದ ಟಿಕೆಟ್ ಕ್ಯಾನ್ಸಲ್ ಆಗಿದ್ದು ಅವರ ಆಸನ ಬೇರೊಬ್ಬರ ಪಾಲಾಗಲಿದೆ.
ಈ ನಿಯಮ ಪಾಲನೆಗಾಗಿ ರೈಲ್ವೆ ಇಲಾಖೆಯು ಟಿಕೆಟ್ ಪರೀಕ್ಷಕರಿಗೆ ಹೊಸ ಎಚ್ಎಚ್ಟಿ ಟ್ಯಾಬ್ಲೆಟ್ಗಳನ್ನು ವಿತರಣೆ ಮಾಡಿದೆ. ಈ ಟ್ಯಾಬ್ನಲ್ಲಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ನಿಗದಿತ ನಿಲ್ದಾಣದಲ್ಲಿ ರೈಲು ಏರದಿದ್ದರೆ ಅದು ತಕ್ಷಣ ಟಿಕೆಟ್ ಪರೀಕ್ಷಕರ ಗಮನಕ್ಕೆ ಬರಲಿದೆ.
ಇದನ್ನೂ ಓದಿ: ಫೆಬ್ರವರಿ 19ಕ್ಕೆ ‘ಬೆಂಗಳೂರು ಚಲೋ’: ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳ್ಳುವ ಸಂಭವ
ಕೂಡಲೇ ಪ್ರಯಾಣಿಕ ಬುಕ್ಕಿಂಗ್ ಮಾಡಿದ ಆಸನ ರದ್ದಾದ ಬಗ್ಗೆ ಪ್ರಯಾಣಿಕರಿಗೂ ಸಂದೇಶ ರವಾನೆಯಾಗಲಿದೆ. ಹಾಗೂ ಕೂಡಲೆ ಆಸನವನ್ನು ಬೇರೊಬ್ಬರಿಗೆ ಹಸ್ತಾಂತರಿಸುವ ಅಧಿಕಾರ ಟಿಟಿಗೆ ಸಿಗಲಿದೆ. ಈ ಮೊದಲು 2 ನಿಲ್ದಾಣಗಳವರೆಗೆ ಪ್ರಯಾಣಿಕರ ಆಗಮನಕ್ಕೆ ಕಾಯಲಾಗುತ್ತಿತ್ತು. ಇದೀಗ ಈ ನಿಯಮಾವಳಿಯಲ್ಲಿ ಬದಲಾವಣೆ ತರಲಾಗಿದ್ದು ಇನ್ಮುಂದೆ ರೈಲ್ವೆ ಪ್ರಯಾಣಿಕರು ಅಲರ್ಟ್ ಆಗಿರಬೇಕಿದೆ



