ಐಎನ್​​ಎಸ್​ ವಿಕ್ರಾಂತ್​​ ಪಾಕಿಸ್ತಾನಿಗಳ ನಿದ್ದೆಗೆಡಿಸಿದೆ, ಭಾರತದೆದುರು ಮಂಡಿಯೂರಿದೆ : ಪ್ರಧಾನಿ ಮೋದಿ

ದೆಹಲಿ: INS Vikrant: ಐಎನ್​ಎಸ್​ ವಿಕ್ರಾಂತ್​ ಕೇವಲ ಯುದ್ಧ ನೌಕೆ ಮಾತ್ರವಲ್ಲ ; ಇದು 21ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ ಹಾಗೂ ಬದ್ಧತೆಗಳಿಗೆ ಹಿಡಿದ ಕೈಗನ್ನಡಿ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ಐಎನ್​ಎಸ್​ ವಿಕ್ರಾಂತ್​ನಲ್ಲಿ ನೌಕಾಪಡೆ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಐಎನ್​ಎಸ್​ ವಿಕ್ರಾಂತ್​​ ಭಾರತಕ್ಕೆ ಸೇರ್ಪಡೆಗೊಳಿಸುವ ಸಂದರ್ಭದಲ್ಲಿ ನಾನು ಆಡಿದ ಮಾತು ನನಗಿನ್ನೂ ನೆನಪಿದೆ. ವಿಕ್ರಾಂತ್​ ಬೃಹತ್​ ವಿಶೇಷ ಎಂದು ನಾನು ನುಡಿದಿದ್ದೆ.ಇದು ಕೇವಲ ಒಂದು ಯುದ್ಧ ನೌಕೆ ಮಾತ್ರವಲ್ಲ. ಇದು 21ನೇ ಶತಮಾನದ ಭಾರತದ ಪ್ರತಿಭೆ ಮತ್ತು ಬದ್ಧತೆಯ ಸಂಕೇತವಾಗಿದೆ ಎಂದು ಹೇಳಿದರು.

ಭಾರತದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯಾಗಿರುವ ಐಎನ್​ಎಸ್​ ವಿಕ್ರಾಂತ್​, ಭಾರತೀಯ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರತಿನಿಧಿಸುತ್ತಿದೆ. ಆಪರೇಷನ್​ ಸಿಂಧೂರ್​ ಸಂದರ್ಭದಲ್ಲಿ ಇದು ಕೆಲವೇ ಕೆಲವು ದಿನಗಳಲ್ಲಿ ಪಾಕಿಸ್ತಾನ ಭಾರತದ ಎದುರು ಮಂಡಿಯೂರುವಂತೆ ಮಾಡಿತ್ತು.

Also Read: ಭಾರತದ ಏಕೈಕ ಟ್ರಾಫಿಕ್​ ಜಾಮ್​ ಇಲ್ಲದ ನಗರ : ಈ ಊರಲ್ಲಿ ಕೇಳಿಸದು ವಾಹನಗಳ ಹಾರ್ನ್ !

ಈ ಯುದ್ಧ ನೌಕೆಯು ಪಾಕಿಸ್ತಾನಿಗಳಿಗೆ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡಿದೆ ಎಂದು ಹಾಡಿಹೊಗಳಿದ್ದಾರೆ. ಮಾತ್ರವಲ್ಲದೇ ಇದೇ ಸಂದರ್ಭದಲ್ಲಿ ನೌಕಾ ಸಿಬ್ಬಂದಿ ಧೈರ್ಯ ಮತ್ತು ಬದ್ಧತೆ ಎಂದಿಗೂ ಸ್ಮರಣೀಯ ಎಂದು ಹೇಳಿದ್ದಾರೆ.

ಇದು ಅತ್ಯಂತ ಅದ್ಭುತ ದಿನವಾಗಿದೆ. ಈ ದೃಶ್ಯವೇ ಸ್ಮರಣೀಯ . ಒಂದು ಕಡೆ ರಮಣೀಯ ಸಾಗರವಿದೆ. ಮತ್ತೊಂದು ಕಡೆ ಭಾರತಾಂಬೆಯ ಧೈರ್ಯಶಾಲಿ ಸೈನಿಕರ ಶಕ್ತಿಯಿದೆ. ಸಮುದ್ರದ ನೀರಿನ ಮೇಲೆ ಸೂರ್ಯನ ಕಿರಣಗಳ ಹೊಳಪು ಭಾರತದ ಧೈರ್ಯಶಾಲಿ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತೆ ಭಾಸವಾಗುತ್ತದೆ ಎಂದು ಪ್ರಧಾನಿ ಹೇಳಿದರು.

ಭಾರತೀಯ ನೌಕಾಪಡೆ ಸೃಷ್ಟಿಸಿದ ಭಯ. ಭಾರತೀಯ ವಾಯುಪಡೆ ಪ್ರದರ್ಶಿಸಿದ ಅದ್ಭುತ ಕೌಶಲ್ಯ. ಭಾರತೀಯ ಸೇನೆಯ ಶೌರ್ಯ. ಮೂರು ಪಡೆಗಳ ಪ್ರಚಂಡ ಸಮನ್ವಯವು ಆಪರೇಷನ್ ಸಿಂಧೂರ್‌ನಲ್ಲಿ ಪಾಕಿಸ್ತಾನವನ್ನು ಬೇಗನೆ ಶರಣಾಗುವಂತೆ ಮಾಡಿತು ಎಂದು ಪ್ರಧಾನಿ ಮೋದಿ ಹೇಳಿದರು.

Also Read: ಪತ್ನಿ ಹತ್ಯೆಗೈದು ನಾಪತ್ತೆ ನಾಟಕವಾಡಿದ ಪತಿ ಕಳ್ಳಾಟ ಖಾಕಿ ಎದುರು ಬಯಲು : ಪಾಪಿ ಪತಿ ಬಂಧನ

ಪ್ರತಿವರ್ಷ ಭಾರತೀಯ ಸೇನೆಯೊಂದಿಗೆ ದೀಪಾವಳಿ ಆಚರಿಸುವ ಪ್ರಧಾನಿ ಮೋದಿ, ಸೋಮವಾರದಂದು ಗೋವಾ ಹಾಗೂ ನಮ್ಮ ರಾಜ್ಯದ ಕಾರವಾರ ಕರಾವಳಿಯಲ್ಲಿರುವ ಐಎನ್​ಎಸ್​ ವಿಕ್ರಾಂತ್​ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಸೈನಿಕರೊಂದಿಗೆ ಈ ವರ್ಷದ ತಮ್ಮ ದೀಪಾವಳಿ ಆಚರಿಸಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories