Swamiji Chaitanyananda Saraswati arrested: ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ : ಸ್ವಾಮೀಜಿ ಚೈತನ್ಯಾನಂದ ಸರಸ್ವತಿ ಅರೆಸ್ಟ್
ನವದೆಹಲಿ : Swamiji Chaitanyananda Saraswati arrested: ಚೈತನ್ಯಾನಂದ ಸರಸ್ವತಿ ಅರೆಸ್ಟ್‌ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ನವದೆಹಲಿಯ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನ ಮಾಜಿ ನಿರ್ದೇಶಕ ಹಾಗೂ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥಸಾರಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಾರದಾ ಇನ್‌ಸ್ಟಿಟ್ಯೂಟ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 32 ವಿದ್ಯಾರ್ಥಿಗಳ ಪೈಕಿ 16 ವಿದ್ಯಾರ್ಥಿಗಳನ್ನು ಚೈತನ್ಯಾನಂದ ಲೈಂಗಿಕವಾಗಿ ಬಳಸಿಕೊಂಡಿದ್ದು, ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿ ಕಿರುಕುಳ ನೀಡಿರುವ ಕುರಿತು ಆಗ್ರಾ ಪೊಲೀಸರಿಗೆ ದೂರು ನೀಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಿಯಾಲ ಹೌಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಒಟ್ಟು 16 ವಿದ್ಯಾರ್ಥಿನಿಯರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು. ವಿದ್ಯಾರ್ಥಿನಿಯರನ್ನು ತನ್ನ ಕೋಣೆಗೆ ಕರೆಯಿಸಿಕೊಂಡಿದ್ದು, ಬ್ಲಾಕ್‌ಮೇಲ್ ಮಾಡುತ್ತಿದ್ದ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರ್ಥಿಕ ದುರ್ಬಲ ವಿದ್ಯಾರ್ಥಿನಿಯರೇ ಟಾರ್ಗೇಟ್
ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ವಿದ್ಯಾರ್ಥಿ ವೇತನದಡಿ ಓದುತ್ತಿದ್ದ 17ಕ್ಕೂ ಹೆಚ್ಚು ಮಹಿಳಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿತ್ತು. ನಿಂದನೀಯ ಭಾಷೆ, ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು ಮತ್ತು ಅಸಭ್ಯವಾಗಿ ವರ್ತಿಸಿದ ದೂರುಗಳು ದಾಖಲಾಗಿದ್ದವು.
ಇದನ್ನೂ ಓದಿ : vijay tvk rally stampede Chennai : ನಟ ವಿಜಯ್ ರಾಲಿ : ತಮಿಳುನಾಡಲ್ಲಿ 30 ಅಧಿಕ ಮಂದಿ ದುರ್ಮರಣ
50 ದಿನಗಳ ಬಳಿಕ ಚೈತನ್ಯಾನಂದ ಅರೆಸ್ಟ್
ದೂರು ದಾಖಲಾದ 50 ದಿನಗಳ ನಂತರ ಚೈತನ್ಯಾನಂದ ಸರಸ್ವತಿಯನ್ನು ಪತ್ತೆಹಚ್ಚಲು ದೆಹಲಿ ಪೊಲೀಸರು ಹಲವು ರಾಜ್ಯಗಳಲ್ಲಿ ಶೋಧ ನಡೆಸಿದ್ದರು. ಆದರೆ 50 ದಿನಗಳ ಬಳಿಕ ಸ್ವಾಮೀಜಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮತ್ತೊಂದೆಡೆಯಲ್ಲಿ ಶಾರದಾ ಪೀಠದಿಂದ ನಡೆಸಲ್ಪಡುತ್ತಿದ್ದ ಸಂಸ್ಥೆಯು ಈಗಾಗಲೇ ಇವರನ್ನು ಸೇವೆಯಿಂದ ವಜಾಗೊಳಿಸಿದೆ. ಲೈಂಗಿಕ ಕಿರುಕುಳದ ಜೊತೆಗೆ, ಚೈತನ್ಯಾನಂದ ಸರಸ್ವತಿ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆಗಳ ಬಳಕೆಯ ಆರೋಪಗಳೂ ದಾಖಲಾಗಿವೆ.
ಇದನ್ನೂ ಓದಿ : ಭಾರತದಲ್ಲಿ ಗೋಚರಿಸುತ್ತಾ ವರ್ಷದ ಕೊನೆಯ ಸೂರ್ಯಗ್ರಹಣ ?
ಈತ ನಕಲಿ ಯುಎನ್ (UN) ನಂಬರ್ ಪ್ಲೇಟ್‌ಗಳಿದ್ದ ಐಷಾರಾಮಿ ವಾಹನಗಳನ್ನೂ ಬಳಸುತ್ತಿದ್ದುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ನ್ಯಾಯಾಲಯವು ಇವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
ಅಲ್ಲದೇ ಶೃಂಗೇರಿ ಶಾರದಾ ಪೀಠವು ಸ್ವಾಮೀಜಿಯ ಪವರ್ ಆಪ್ ಅಟಾರ್ನಿಯನ್ನು ರದ್ದು ಮಾಡಿದೆ. ಹೊಸದಾಗಿ 11 ಸದಸ್ಯರ ಆಡಳಿತ ಮಂಡಳಿಯನ್ನು ರಚಿಸಲಾಗಿದೆ. ಪೊಲೀಸರು ಆರೋಪಿಯ ವಿರುದ್ದ ಲುಕ್ ಔಟ್ ನೋಟೀಸ್ ಜಾರಿ ಮಾಡಿದ್ದರು.



