ದೇಶದ ಪ್ರಮುಖ ನಗರಗಳಲ್ಲಿ ತೈಲೋತ್ಪನ್ನಗಳ ಕೊರತೆ : ಎಲ್ಲೆಲ್ಲೂ ‘ನೋ ಸ್ಟಾಕ್’ ಬೋರ್ಡ್
ಇಂಧನ ಕೊರತೆಯಿಂದಾಗಿ ಇವುಗಳ ಬೆಲೆಯಲ್ಲಿ ದಾಖಲೆ ಮೊತ್ತದ ಏರಿಕೆ ಕಾಣಬಹುದು ಎಂಬ ವದಂತಿಗಳು ಕೂಡ ಶ್ರೀಸಾಮಾನ್ಯರನ್ನು ಆತಂಕಕ್ಕೆ ದೂಡಿದೆ. ಪೆಟ್ರೋಲ್ ಬಂಕ್ಗಳು ಹಾಗೂ ಎಲ್ಪಿಜಿ ಎಜೆನ್ಸಿಗಳ ಎದುರು ದೀರ್ಘಾವಧಿ ಸರತಿ ಸಾಲುಗಳು ಕಂಡುಬರುತ್ತಿವೆ.
ನವದೆಹಲಿ : ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಭೀತಿಯು ದೇಶದಲ್ಲಿ ಇಂಧನಗಳ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ. ದೇಶದಲ್ಲಿ ಪೆಟ್ರೋಲ್ , ಡೀಸೆಲ್ ಹಾಗೂ ಎಲ್ಪಿಜಿ ಸಿಲಿಂಡರ್ಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ವಿವಿಧ ತೈಲ ಮಾರುಕಟ್ಟೆ ಕಂಪನಿಗಳು ಭರವಸೆ ನೀಡಿದ್ದರೂ ಸಹ ದೇಶದಲ್ಲಿ ಇಂಧನಕ್ಕಾಗಿ ಹಾಹಾಕಾರ ಶುರುವಾಗಿದೆ ಎಂಬುದು ಸದ್ಯದ ಕಟು ಸತ್ಯವಾಗಿದೆ.
ಇಂಧನ ಕೊರತೆಯಿಂದಾಗಿ ಇವುಗಳ ಬೆಲೆಯಲ್ಲಿ ದಾಖಲೆ ಮೊತ್ತದ ಏರಿಕೆ ಕಾಣಬಹುದು ಎಂಬ ವದಂತಿಗಳು ಕೂಡ ಶ್ರೀಸಾಮಾನ್ಯರನ್ನು ಆತಂಕಕ್ಕೆ ದೂಡಿದೆ. ಪೆಟ್ರೋಲ್ ಬಂಕ್ಗಳು ಹಾಗೂ ಎಲ್ಪಿಜಿ ಎಜೆನ್ಸಿಗಳ ಎದುರು ದೀರ್ಘಾವಧಿ ಸರತಿ ಸಾಲುಗಳು ಕಂಡುಬರುತ್ತಿವೆ.
ದೇಶದ ಅನೇಕ ರಾಜ್ಯಗಳಲ್ಲಿ ಇಂಧನ ಪಂಪ್ಗಳಲ್ಲಿ ಪೂರೈಕೆ ಸ್ಥಗಿತಗೊಂಡಿದೆ. ತೆಲಂಗಾಣ ಹಾಗೂ ಮಹಾರಾಷ್ಟ್ರ ಡೀಲರ್ಗಳು ನೀಡಿರುವ ಮಾಹಿತಿಯ ಪ್ರಕಾರ, ಬೇಡಿಕೆಗಿಂತ ಪೂರೈಕೆ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎನ್ನಲಾಗಿದೆ.
ತೆಲಂಗಾಣ ನಾಗರಿಕ ಪೂರೈಕೆ ಸಚಿವ ಎನ್. ಉತ್ತಮ್ ರೆಡ್ಡಿ ಈ ವಿಚಾರವಾಗಿ ಮಾತನಾಡಿದ್ದು, ತೆಲಂಗಾಣ ರಾಜ್ಯದಲ್ಲಿ ಮುಂದಿನ ಮೂರು ತಿಂಗಳಿಗೆ ಸಾಲುವಷ್ಟು ಅಡುಗೆ ಅನಿಲ ಹಾಗೂ ಇಂಧನ ತೈಲಗಳ ದಾಸ್ತಾನು ಇದೆ ಎಂದಿದ್ದಾರೆ.
ಆದರೆ ಈ ನಡುವೆಯೇ ಹೈದರಾಬಾದ್ನ ಬಹುತೇಕ ಪೆಟ್ರೋಲ್ ಬಂಕ್ಗಳಲ್ಲಿ ‘ಪೆಟ್ರೋಲ್, ಡೀಸೆಲ್ ಖಾಲಿಯಾಗಿದೆ’ ಎಂಬ ಬೋರ್ಡ್ ರಾರಾಜಿಸುತ್ತಿದೆ. ಹೈದರಾಬಾದ್ನ 40 ಪ್ರತಿಶತ ಪೆಟ್ರೋಲ್ ಬಂಕ್ಗಳು ಬಂದ್ ಮಾಡುವತ್ತ ದೃಷ್ಠಿ ನೆಟ್ಟಿವೆ ಎಂದು ತಿಳಿದುಬಂದಿದೆ.
Also Read: ಯುದ್ಧ ಬಿಕ್ಕಟ್ಟು ನಿವಾರಣೆಗೆ 7 ಉನ್ನತ ಮಟ್ಟದ ಸಶಕ್ತ ಗುಂಪುಗಳ ರಚನೆ : ಕೊರೊನಾ ಮಾದರಿಯಲ್ಲಿ ಪರಿಸ್ಥಿತಿ ನಿರ್ವಹಣೆ
ಇನ್ನುಳಿದಂತೆ ಮಹಾರಾಷ್ಟ್ರ, ಲಖನೌ ಸೇರಿದಂತೆ ಭಾರತದ ಬಹುತೇಕ ಕಡೆಗಳಲ್ಲಿ ಪೆಟ್ರೋಲ್, ಡೀಸೆಲ್ಗಳಿಗೆ ತೀವ್ರ ಅಭಾವ ತಲೆದೋರುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಭಾರೀ ದೊಡ್ಡ ಪ್ರಮಾಣದಲ್ಲಿ ದೇಶಕ್ಕೆ ಅಪಾಯ ತಲೆದೋರುವುದು ಪಕ್ಕಾ ಎಂದೇ ಹೇಳಬಹುದಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಸದ್ಯ ಭಾರತೀಯರ ನಿದ್ದೆಗೆಡಿಸಿದೆ. ಈ ಎಲ್ಲದರ ನಡುವೆ ಪ್ರಧಾನಿ ಮೋದಿ ಕೂಡ ಕೊರೊನಾ ಮಾದರಿಯ ಪರಿಸ್ಥಿತಿ ಎದುರಿಸಲು ಸಜ್ಜಾಗುವಂತೆ ಪರೋಕ್ಷ ಕರೆ ನೀಡಿರುವುದು ಮತ್ತೊಂದು ಆತಂಕಕ್ಕೆ ದಾರಿ ಮಾಡಿದೆ.
Shortage of petroleum products in major cities of the country ‘No Stock’ board everywhere



